Advertisement

ನೀಲಗಿರಿ ತೆರವುಗೊಳಿಸಿ ಪ್ರವಾಸೋದ್ಯಮಕ್ಕೆ ಅನುವು ಮಾಡಿಕೊಡಿ : ಸಾರ್ವಜನಿಕರ ಒತ್ತಾಯ

10:27 AM Aug 27, 2021 | Team Udayavani |

ಗುಡಿಬಂಡೆ : ಪಟ್ಟಣದ ಅಮಾನಿಬೈರಸಾಗರ ಕೆರೆಯ ಸಮೀಪ ಸುಮಾರು ೧೦೦ ಕೂ ಹೆಚ್ಚು ನೀಲಗಿರಿ ಗಿಡಗಳನ್ನು ತೆರವುಗೊಳಿಸಿ ಪ್ರವಾಸೋದ್ಯಮಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಗುಡಿಬಂಡೆ ಪಟ್ಟಣದ ಅಮಾನಿಬೈರಸಾಗರ ಕೆರೆಗೆ ಅಂಟಿಕೊಂಡಂತೆ ಸರ್ಕಾರಿ ಜಾಗದಲ್ಲಿ ಸುಮಾರು ೧ ಎಕರೆ ಪ್ರದೇಶದಲ್ಲಿ ನೀಲಗಿರಿ ಮರಗಳಿದ್ದು, ಸರ್ಕಾರದಲ್ಲಿ ನೀಲಗಿರಿ ಮರಗಳನ್ನು ತೆರವುಗೊಳಿಸುವಂತೆ ಆದೇಶವಿದ್ದರು ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದಾರೆ, ಈ ನೀಲಗಿರಿ ಮರಗಳನ್ನು ತೆರವುಗೊಳಿಸಿದರೆ ವಾಹನ ನಿಲುಗಡೆ ಸ್ಥಳವಕಾಶವಾಗಿ, ಪ್ರವಾಸೋದ್ಯಮ ಅಭಿವೃದ್ಧಿಯಾಗಿ ಸರ್ಕಾರಕ್ಕೆ ಒಂದಷ್ಟು ಅದಾಯ ಬರುವಂತಾಗುತ್ತದೆ, ಎಂದು ಸಿ.ಪಿ.ಐ.ಎಂ.ನ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಹೇಳಿದರು.

ಇದನ್ನೂ ಓದಿ : ಇಂದು ಅಜೇಯ್‌ ರಾವ್‌ ಅಭಿನಯದ ‘ಕೃಷ್ಣ ಟಾಕೀಸ್‌’ ಮರುಬಿಡುಗಡೆ

ಸರ್ಕಾರದ ಆದೇಶದಂತೆ ನೀಲಗಿರಿ ತೆರವು ಇಲ್ಲ: ಪ್ರತಿ ವರ್ಷ ರಾಜ್ಯ ಸರ್ಕಾರ ಸಂಪೂರ್ಣ ನೀಲಗಿರಿ ತೆರವಿಗಾಗಿ ಆದೇಶ ಮಾಡುತ್ತಿದ್ದಾರು ಅಧಿಕಾರಿಗಳು ಮಾತ್ರ, ಆದೇಶವನ್ನು ದಿಕ್ಕರಿಸಿ, ನಮಗೇನು ಎಂಬಂತೆ ಕಣ್ಣು ಮುಚ್ಚಿಕುಳಿತ್ತಿದ್ದಾರೆ.

ಸರ್ಕಾರಕ್ಕೆ ಆದಾಯ: ಅಮಾನಿಬೈರಸಾಗರ ಕೆರೆಗೆ ಅಂಟಿಕೊಂಡಿರುವ ಸರ್ಕಾರಿ ಜಾಗದಲ್ಲಿರುವ ನೀಲಗಿರಿ ಮರಗಳನ್ನು ತೆರವುಗೊಳಿಸಿ, ಸುಮಾರು ೧ ಎಕರೆಗೂ ಹೆಚ್ಚು ಜಾಗದಲ್ಲಿ ಪ್ರವಾಸಿಗರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದರಿಂದ ಆ ಪ್ರದೇಶದ ಗ್ರಾಮ ಪಂಚಾಯಿತಿ ಅಥವಾ ಜವಾಬ್ದಾರಿವಹಿಸುವ ಇಲಾಖೆಗೆ ಆದಾಯ ಬರುತ್ತದೆ.

Advertisement

ಪ್ರವಾಸೋದ್ಯಮಕ್ಕೆ ಅನುಕೂಲ: ಪಟ್ಟಣದ ಅಮಾನಿಬೈರಸಾಗರ ಕೆರೆಯ ಸಮೀಪ ವಾಹನಗಳಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವ ಕಾರಣ, ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿ, ಕಿರಿ ಕಿರಿಗೆ ಒಳಗಾಗುತ್ತಿದ್ದಾರೆ, ಈ ನೀಲಗಿರಿ ಮರಗಳನ್ನು ತೆರವುಗೊಳಿಸಿದರೆ ಕೆರೆಯ ಸಮೀಪ ಪಾರ್ಕಿಂಗ್ ವ್ಯವಸ್ಥೆಯಾಗಿ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ.

ಇನ್ನಾದರೂ ಅಧಿಕಾರಿಗಳು ಹೆಚ್ಚೆತ್ತುಕೊಂಡು ಸರ್ಕಾರದ ಆದೇಶದಂತೆ ಅಮಾನಿಬೈರಸಾಗರ ಕೆರೆಯ ಬಳಿ ನೀಲಗಿರಿ ಮರಗಳನ್ನು ತೆರವುಗೊಳಿಸಿ, ಪ್ರವಾಸೋದ್ಯಮಕ್ಕೆ ಅನುವು ಮಾಡಿಕೊಡುತ್ತಾರೆಯೇ ಕಾದು ನೋಡಬೇಕಾಗಿದೆ.

ಇದನ್ನೂ ಓದಿ : ಮೈಸೂರು ದರೋಡೆ ಶೂಟೌಟ್ ಪ್ರಕರಣ ಭೇದಿಸಿದ ಪೊಲೀಸರು: ಪುಣೆಯಲ್ಲಿ ಇಬ್ಬರು ಆರೋಪಿಗಳ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next