Advertisement

ಉದಯವಾಣಿ ಚಿಗುರುಚಿತ್ರ ಫೋಟೋ ಸ್ಪರ್ಧೆ: ಉದಯವಾಣಿ ಚಿತ್ರ ಸದಾಕಾಲ ನೆನಪು: ಡಾ|ಪುಷ್ಪಾ ಕಿಣಿ

12:14 AM Dec 10, 2021 | Team Udayavani |

ಉಡುಪಿ: ಉದಯವಾಣಿ ಫೋಟೋ ಸ್ಪರ್ಧೆಯಲ್ಲಿ ಪ್ರಶಸ್ತಿ ಬಂದಿರುವುದನ್ನು ಮಕ್ಕಳು ಸದಾಕಾಲ ನೆನಪಿನಲ್ಲಿಡಲಿದ್ದಾರೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವೂ ಸಿಗಬೇಕು. ಚಿತ್ರದಲ್ಲಿರುವ ಮಕ್ಕಳ ಅಭಿವ್ಯಕ್ತಿ ಎದುರಿಗೆ ಕಂಡಾಗ ನಿಜಕ್ಕೂ ಸಂತಸವಾಗುತ್ತದೆ ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ| ಪುಷ್ಪಾ ಜಿ. ಕಿಣಿ ಹೇಳಿದರು.

Advertisement

ಮಕ್ಕಳ ದಿನಾಚರಣೆ ಪ್ರಯುಕ್ತ ಉದಯವಾಣಿ ಹಮ್ಮಿಕೊಂಡ ಚಿಗುರುಚಿತ್ರ ಫೋಟೋ ಸ್ಪರ್ಧೆಯ ವಿಜೇತರಿಗೆ ಗುರುವಾರ ಉದಯವಾಣಿ ಮಣಿಪಾಲದ ಕೇಂದ್ರ ಕಚೇರಿಯಲ್ಲಿ ನಡೆದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತ ನಾಡಿದರು.

ಉತ್ತಮ ಸ್ಪಂದನೆ:

ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಅವರು  ಸಾವಿರ-ಸಾವಿರ ಸಂಖ್ಯೆಯಲ್ಲಿ ಓದುಗರು ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಓದುಗರ ಸಂಪ್ರೀತಿ ಮುಂದೆಯೂ ಹೀಗೆಯೇ ಮುಂದುವರಿಯಲಿ ಎಂದು ಹಾರೈಸಿದರು.

ಮಣಿಪಾಲ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ನ‌ ಕಾರ್ಯ ನಿರ್ವಾಹಕ ಅಧ್ಯಕ್ಷ ಸತೀಶ್‌ ಪೈ ಅವರು ಉಪಸ್ಥಿತರಿದ್ದರು.

Advertisement

ಉದಯವಾಣಿ ಸಂಪಾದಕ ಅರವಿಂದ ನಾವಡ ಅವರು ಪ್ರಸ್ತಾವನೆಗೈದು, ಓದುಗರ ಜತೆಗೆ ಉತ್ತಮ ಬಾಂಧವ್ಯ ಬೆಸೆಯಲು  ಇಂಥ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಪತ್ರಿಕೆ ಆರಂಭಗೊಂಡ 5ನೇ ವರ್ಷದಿಂದಲೇ ಮಕ್ಕಳ ಫೋಟೋ ಸ್ಪರ್ಧೆಯನ್ನು ಆರಂಭಿಸಲಾಗಿದೆ. ಪ್ರತೀ ವರ್ಷ 3ರಿಂದ 4 ಸಾವಿರ ಫೋಟೋಗಳು ಬರುತ್ತಿದ್ದವು. ಈ ವರ್ಷ 6,200 ಚಿತ್ರಗಳು ಸ್ಪರ್ಧೆಗೆ ಬಂದಿದ್ದವು. ಕೋವಿಡ್‌ ಅನಂತರವೂ ಓದುಗರು ಉತ್ತಮ ಪ್ರೋತ್ಸಾಹ ನೀಡಿದ್ದಾರೆ ಎಂದರು.

ಉಡುಪಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಧಾಕೃಷ್ಣ ಕೊಡವೂರು ಬಹುಮಾನಿತರ ಪಟ್ಟಿ ವಾಚಿಸಿದರು. ಮಂಗಳೂರು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರ್‌ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

ಬಹುಮಾನ ವಿಜೇತರು :

ಪ್ರಥಮ- ಅರ್ಥ್ ಸುವರ್ಣ ಕಾರ್ಕಳ, ದ್ವಿತೀಯ- ಎಸ್‌. ಆರುಷ್‌ ಅಮೀನ್‌ ಬಂಟ್ವಾಳ, ತೃತೀಯ- ಹೃಷಿÌ ಪಿ. ಬಂಗೇರ ಕೊಳಂಬೆ, ಮಾಸ್ಟರ್‌ ಅವಿನಂದನ್‌ ಪಿದಮಲೆ ಬೆಳ್ತಂಗಡಿ, ತೃಯಾಂಶ್‌ ಆರ್‌. ಆಚಾರ್ಯ ಕೋಟ, ಕ್ಷಿತಿಜ್‌ ಕಾಮತ್‌ ಕದ್ರಿ, ಸುಶೀನ್‌ ಸುಕೇಶ್‌ ಕುಮಾರ್‌ ಉಚ್ಚಿಲ, ರಿಯಾನ್‌ ನೈಲ್‌ ಪಿಂಟೋ ಕೆಳಾರ್ಕಳಬೆಟ್ಟು.

ಒಂದನೇ ತರಗತಿ ಯಿಂದಲೇ ನಾನು ಉದಯವಾಣಿ ಓದುಗ. ಫೋಟೋ ಸ್ಪರ್ಧೆಗೆ ಚಿತ್ರ ಕಳುಹಿಸಿದ್ದೆ. ತುಂಬಾ ಕುತೂಹಲವಿತ್ತು. ಬೆಳಗ್ಗೆ ಪತ್ರಿಕೆಯಲ್ಲಿ ಮೊದಲ ಬಹುಮಾನ ನಮ್ಮ ಮಗುವಿಗೆ ಬಂದಿದೆ ಎಂದಾಗ ಬಹಳಷ್ಟು ಆನಂದವಾಯಿತು.-ಅಭಿಷೇಕ್‌ ಸುವರ್ಣ,  ಪೋಷಕರು

ಫೋಟೋ ಸ್ಪರ್ಧೆಯ ಕೊನೆಯ ದಿನ ಚಿತ್ರ ಕಳುಹಿಸಿದ್ದೆ. ಬಹುಮಾನ ಬರುತ್ತೆ ಅಂದುಕೊಂಡಿರಲಿಲ್ಲ. ಈಗ ಬಹಳಷ್ಟು ಸಂತಸವಾಗಿದೆ. ಈ ಸ್ಪರ್ಧೆ ಇದೇ ರೀತಿ ಮುಂದುವರಿಯಲಿ.-ಪ್ರೀತಂ,  ಪೋಷಕರು

 

Advertisement

Udayavani is now on Telegram. Click here to join our channel and stay updated with the latest news.

Next