Advertisement

Udayavani Campaign: ಬಸ್‌ ಇಲ್ಲದೆ ಸರಕಾರಿ ಶಾಲೆಗಳಿಗೂ ಕಂಟಕ

01:01 PM Jun 20, 2024 | Team Udayavani |

ಬೆಳ್ಮಣ್‌: ಕಾರ್ಕಳ ತಾಲೂಕಿನ ಬೋಳ, ವಂಜಾರಕಟ್ಟೆ, ನಂದಳಿಕೆ, ಸೂಡಾ, ಕಲ್ಯಾ ಕೈರಬೆಟ್ಟು, ನಿಟ್ಟೆ ಲೆಮಿನಾ ಭಾಗಗಳಲ್ಲಿ ಬಸ್ಸು ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ. ಪರಿ ಸ್ಥಿತಿ ಹೇಗಿದೆ ಎಂದರೆ ಈ ಭಾಗದ ಜನ ಹಾಗೂ ವಿದ್ಯಾರ್ಥಿಗಳು ನಮಗೆ ಬಸ್‌ ಪ್ರಯಾಣದ ಯೋಗವಿಲ್ಲ ಎಂದು ತೀರ್ಮಾನಿಸಿ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ!

Advertisement

ಈ ಭಾಗದಲ್ಲಿ ಬಸ್‌ ಸೌಕರ್ಯದ ದೊಡ್ಡ ಹೊಡೆತ ಬಿದ್ದಿರುವುದು ಸರಕಾರಿ ಕನ್ನಡ ಶಾಲೆ ಗಳಿಗೆ ಅಂದರೆ ನೀವು ನಂಬಲೇಬೇಕು. ಈ ಭಾಗದ ಮಕ್ಕಳು ಶಾಲೆ, ಕಾಲೇಜಿಗೆ ಹೋಗಬೇಕಾದ ಬಸ್‌ ಅನಿವಾರ್ಯ. ಆದರೆ, ಬಸ್‌ ಸೌಕರ್ಯ ಇಲ್ಲದೆ ಇರುವುದರಿಂದ ಅವರಲ್ಲಿ ಹೆಚ್ಚಿನವರು ಬಸ್‌ ಸೌಕರ್ಯ ಒದಗಿಸುವ ಖಾಸಗಿ ಶಾಲೆ. ಕಾಲೇಜು ಗಳನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ.

ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿನ ಹಲವಾರು ಗ್ರಾಮಗಳಿಗೆ ಖಾಸಗಿ ಬಸ್‌ ದಿನ ಕ್ಕೊಮ್ಮೆ ಬರುವುದೇ ಕಷ್ಟದಲ್ಲಿ. ಆದರೆ, ಖಾಸಗಿ ಶಾಲೆಗಳ ಹಳದಿ ಬಣ್ಣದ ಬಸ್ಸುಗಳು ಮನೆಯ ಬಾಗಿಲಿನಿಂದ ಮಕ್ಕಳನ್ನು ಕರೆದೊಯ್ಯುತ್ತಿವೆ. ಇದು ಕಷ್ಟ ಪಟ್ಟು ಹಣ ಕೊಟ್ಟರೂ ಮಕ್ಕಳ ಪಾಲಿಗೆ ಸುರಕ್ಷಿತ ಎಂಬ ಭಾವನೆ ಮೂಡಿಸಿದೆ.

ಬಡವರ ಮಕ್ಕಳಿಗೆ ಕಷ್ಟ
ಹಾಗಂತ ಎಲ್ಲರಿಗೂ ದುಬಾರಿ ಶುಲ್ಕ ಕೊಟ್ಟು ಖಾಸಗಿ ಶಾಲೆ, ಕಾಲೇಜು ಸೇರುವುದು, ತಿಂಗಳ ಬಸ್ಸಿನ ಬಿಲ್‌ ಭರಿಸುವುದು ಸುಲಭವೇನಲ್ಲ. ಅಂಥ ಬಡವರ ಮಕ್ಕಳು ದಿನವೂ ಬಸ್ಸಿಗಾಗಿ ಕಾಯುವುದು, ಕಷ್ಟಪಟ್ಟು ಪ್ರಯಾಣಿಸುತ್ತಿದ್ದಾರೆ. ಬೆಳ್ಮಣ್‌ನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲಿಯುತ್ತಿರುವ ನೆಲ್ಲಿಗುಡ್ಡೆಯ ಶ್ರಾವ್ಯ, ಸೌಜನ್ಯಾ, ಕಾರ್ತಿಕಾ, ರಶ್ಮಿ, ಬೋಳದ ತ್ರಿಶಾ,
ಶ್ರಾವ್ಯ, ಪೂಜಾ, ನಂದಳಿಕೆಯ ನಿಖಿಲ್‌, ಶ್ರೇಯಾ ಹಾಗೂ ನಿಟ್ಟೆ ಬೊರ್ಗಲ್‌ಗ‌ುಡ್ಡೆ, ಲೆಮಿನಾ, ಪಲಿಮಾರು ಭಾಗಗಳ ವಿದ್ಯಾರ್ಥಿಗಳು ಬಸ್ಸು ಸೌಕರ್ಯದ ಕೊರತೆಯ ಬಗ್ಗೆ ಉದಯವಾಣಿ ಜತೆ ಅಳಲು ತೋಡಿಕೊಂಡರು. ಈ ಕಾರಣಗಳಿಂದಾಗಿಯೇ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿರುವುದಾಗಿ ಕಾಲೇಜಿನ ಉಪನ್ಯಾಸಕಿ ಕಿಶೋರಿ, ಪ್ರೌಢಶಾಲೆಯ
ಪ್ರಾಚಾರ್ಯ ಗೋಪಾಲ್‌, ಅಧ್ಯಾಪಕಿ ಜಯಂತಿ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.

ಬೋಳಕ್ಕೆ ಪರ್ಮಿಟ್‌ ಹಲವಿದೆ, ಬಸ್‌ ಒಂದೇ!
ಕಾರ್ಕಳ ತಾಲೂಕಿನ ಅತೀ ದೊಡ್ಡ ಗ್ರಾಮ ಎನಿಸಿರುವ ಬೋಳದಲ್ಲಿ ದೇವಸ್ಥಾನ, ದೈವಸ್ಥಾನ ಸಹಿತ ಹತ್ತು ಹಲವು ವ್ಯವಸ್ಥೆಗಳು
ಪ್ರಕೃತಿದತ್ತವಾಗಿವೆ, ಆದ ರೆ, ಇಲ್ಲಿನ ಜನ ಪೇಟೆಗೆ ಹೋಗಬೇಕಾದರೆ ಖಾಸಗಿ ವಾಹನವನ್ನೇ ಬಳಸಬೇಕು. ಕಾರಣ ಇಲ್ಲಿರುವುದು ಒಂದೇ ಬಸ್‌! ಆ ಬಸ್‌ ಬೆಳಗ್ಗೆ 8ಕ್ಕೆ ಬೋಳದಿಂಂದ ಮಂಗಳೂರಿಗೆ ಹೊರಟರೆ ಹಿಂದೆ ಬರುವುದು ಸಂಜೆ 4.30ಕ್ಕೆ. ಪೇಟೆಗೆ ಹೊರಟವರೂ, ಶಾಲೆ ಕಾಲೇಜುಗಳಿಗೆ ಹೊರಟವರೂ ಈ ಸಮಯಕ್ಕೆ ಮನೆ ಸೇರಬೇಕು. ಇಲ್ಲವಾದಲ್ಲಿ ಬಾಡಿಗೆಯ ರಿಕ್ಷಾ, ಕಾರುಗಳೇ ಗತಿ. ಶಾಲೆ ಕಾಲೇಜುಗಳಿಗೆ ಹೊರಡುವವರೂ ಬೇಗ ಹೊರಡಬೇಕು, ಇಲ್ಲಿ ಬಸ್‌ಗಳ ಪರವಾನಿಗೆ ಹಲವು ಇದ್ದರೂ ಓಡಾಟ ನಡೆಸುತ್ತಿರುವ ಬಸ್ಸು ಒಂದೇ. ಅದರೂ ಕೆಲವೊಮ್ಮೆ ಟ್ರಿಪ್‌ ಕಟ್‌.

Advertisement

ನಂದಳಿಕೆ, ಕೈರಬೆಟ್ಟು, ನೆಲ್ಲಿಗುಡೆಗಳಲ್ಲೂ ಕೊರತೆ
ನಂದಳಿಕೆ, ನೆಲ್ಲಿಗುಡ್ಡೆ, ಕೈರಬೆಟ್ಟು ಭಾಗಗಳಿಂದ ಬೆಳ್ಮಣ್‌, ಕಾರ್ಕಳ , ಶಿರ್ವ ಕಡೆಗೆ ಪ್ರಯಾಣಿಸುವ ವಿದ್ಯಾರ್ಥಿಗಳೂ ಬಸ್‌ ಕೊರತೆ ಬಗ್ಗೆ ಅಸಮಾಧಾನ ಇದೆ. ಕಾಲೇಜಿಗೆ ಹೋಗಲು ಬೇಗ ಮನೆ ಬಿಡಬೇಕು. ಹೀಗಾಗಿ, ಮನೆ ಕೆಲಸದ ಜತೆ ಶಾಲೆಯ ಹೋಮ್‌ ವರ್ಕ್‌
ಮಾಡಲಾಗದ ಸ್ಥಿತಿ ಇದೆ. ನಂದಳಿಕೆಯಲ್ಲಿ ಬೆಳಗ್ಗೆ 8ರ ಅನಂತರ ವಿದ್ಯಾರ್ಥಿಗಳು ಬಸ್ಸಿಲ್ಲದೆ ಪರದಾಡುವ ಸ್ಥಿತಿ ಒದಗಿದೆ. ಸಂಜೆಯೂ ಮನೆ ಸೇರುವ ಪರದಾಟ ತಪ್ಪಿಲ್ಲ ಎನ್ನುತ್ತಾರೆ ನಂದಳಿಕೆಯ ಸುಭಾಶ್‌.

ಸಂಚಾರ ನಿಲ್ಲಿಸಿವೆ ಎರಡು ಬಸ್‌ಗಳು
ಬೋಳ ವಂಜಾರಕಟೆಯಲ್ಲೂ ಪರದಾಟ ಬಳ್ಳಾಲ್‌ ಸಂಸ್ಥೆಯ ಬಸ್‌ ಗಳಿದ್ದಾಗ ಬೋಳಕ್ಕೆ ಸಾಕಷ್ಟಿತ್ತು ಎನ್ನುತ್ತಾರೆ ಇಲ್ಲಿನ ಜನರು. ಈಗ ಬಸ್ಸನ್ನು ನಂಬಿ ಕೂತವರು ಕಾಲೇಜಿಗೆ ಸಕಾಲದಲ್ಲಿ ಹೋಗಲೂ ಕಷ್ಟ, ಮರಳಿ ಮನೆ ಸೇರುವುದೂ ಕಷ್ಟ. ಮಂಜರಪಲ್ಕೆಯಿಂದ 4.45ಕ್ಕೆ ಕೊನೆಯ ಬಸ್‌ ತನ್ನ ಟ್ರಿಪ್‌ ಮುಗಿಸುತ್ತದೆ. ಬಳಿಕ ಉಳಿದ ವಿದ್ಯಾರ್ಥಿಗಳು ಸುಮಾರು 10-12 ಕಿ.ಮೀ. ನಡೆಯಬೇಕು ಅಥವಾ ಇತರರ ಬೆನ್ನೇರಿ ಸಾಗಬೇಕು. ಇದಕ್ಕೆ ಕಾರಣ ಈ ಹಿಂದೆ ಸಂಜೆ ಬರುತ್ತಿದ್ದ ಎರಡು ಬಸ್‌ಗಳು ತಮ್ಮ ಸೇವೆ ನಿಲ್ಲಿಸಿದ್ದು. ಮೂಡುಬಿದಿರೆ ಬೆಳುವಾಯಿ ಕಡೆಯಿಂದ ಬರುವವರಿಗೆ ಸಂಜೆ 7ರ ವರೆಗೂ ಸೌಕರ್ಯ ಇದೆ ಎಂದು ಬೋಳ ಸುಧಾಕರ ಆಚಾರ್ಯ ಹೇಳುತ್ತಾರೆ.

*ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next