Advertisement

ಭೂಮಿ ಕಳೆದುಕೊಂಡ್ರೂ ಹನಿ ನೀರಿಲ್ಲ

05:15 PM Sep 07, 2021 | Team Udayavani |

ಹೂವಿನಹಡಗಲಿ : ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ನಮ್ಮ ತಾಲೂಕಿನ ರೈತರು ಭೂಮಿ ಕಳೆದುಕೊಂಡಿದ್ದಾರೆ. ಆದರೆ ಯೋಜನೆಯಿಂದಾಗಿ ನಮ್ಮ ತಳಕಲ್‌ ಕೆರೆಗೆ ಒಂದು ಹನಿ ನೀರು ಸಹ ಬರುತ್ತಿಲ್ಲ. ಇದರಿಂದಾಗಿ ರೈತರಿಗೆ ತುಂಬಾ ತೊಂದರೆಯಾಗಿದೆ ಎಂದು ತಾಲೂಕಿನ ಇಟಗಿ, ಕನ್ನಿಹಳ್ಳಿ , ತಳಕಲ್‌ ಗ್ರಾಮದ ರೈತರು ತಳಕಲ್‌ ಕೆರೆ ಆಂಗಳದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತ ಪಡಿಸಿದರು.

Advertisement

ರೈತ ಮುಖಂಡ ಚಂದ್ರಪ್ಪ ತಳಕಲ್‌ ಮಾತನಾಡಿ, ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ 1976ರಲ್ಲಿ ಅಂದಿನ ಶಾಸಕರಾಗಿದ್ದ ಕೊಗಳಿ ಕರಿಬಸವನಗೌಡ್‌ ಕೆರೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದು 1978ರಲ್ಲಿ ಕೆರೆ ಪೂರ್ಣವಾಗಿದ್ದು ಅಂದಿನಿಂದ ಇಂದಿನವರೆಗೂ ಕೆರೆ ತುಂಬುವುದಿರಲ್ಲಿ ಕೆರೆ ಅಂಗಳದಲ್ಲಿ ಒಂದು ಹನಿ ನೀರು ಸಹ ಇಲ್ಲ.

ತಾಲೂಕಿನ ರೈತರ ಕನಸಾಗಿದ್ದ ಶಿಂಗಟಾಲೂರು ಎತ ನೀರಾವರಿ ಯೋಜನೆಯಿಂದಾಗಿ ಕೆರೆಗಳಿಗೆ ನೀರುಣಿಸುವ ಯೋಜನೆಯಲ್ಲಿ ತಳಕಲ್‌ ಕೆರೆ ಸೇರಿಸಲಾಗಿದ್ದು, ಅದಕ್ಕಾಗಿ ಪೈಪ್‌ ಲೈನ್‌ ಕಾಮಗಾರಿಗೆ ‌ಮುಗಿದಿದ್ದು ಎಲ್ಲ ರೀತಿಯ ಕೆಲಸ ಕಾರ್ಯಗ ‌ಳು ಮುಗಿದ್ದಿದ್ದರೂ ಸಹ ತಳಕಲ್‌ ಕೆರೆಗೆ ನೀರು ಮಾತ್ರ ಬರುತ್ತಿಲ್ಲ. ಇದರಿಂದಾಗಿ ಸರ್ಕಾರದ ಲಕ್ಷಾಂತರ ರೂ. ವ್ಯರ್ಥವಾಗುತ್ತಿದೆ. ನಮ್ಮ ತಳಕಲ್‌ ಕೆರೆ ಅಚ್ಚು ಕಟ್ಟು ಪ್ರದೇಶಕ್ಕೂ ಸುಮಾರು 10 ಗ್ರಾಮಗಳು ಒಳಗೊಂಡಿದ್ದು ಈ ಹತ್ತು ಗ್ರಾಮಗಳು ನೀರಿನ ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಕ್ಷೇತ್ರದ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕರನ್ನು ಹಲವು ಬಾರಿ ಕೇಳಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಚಂದ್ರಪ್ಪ ಆರೋಪಿಸಿದರು.

ಕನ್ನಿಹಳ್ಳಿ ಗ್ರಾಮದ ‌ ರೈತ ಮುಖಂಡ ವಸಂತ್‌ ಕುಮಾರ್‌ ಮಾತನಾಡಿ, ಸಿಂಗಟಾಲೂರು ಏತ ನೀರಾವರಿ ಯೋಜನೆಯಿಂದಾಗಿ ತಳಕಲ್‌ ಕೆರೆಗೆ ನೀರು ತುಂಬಿಸುವ ಕಾಮಗಾರಿ ಪೂರ್ಣಗೊಂಡರೂ ಕೆರೆಗೆ ಮಾತ್ರ ನೀರು ಬರುತ್ತಿಲ್ಲ. ಯೋಜನೆಯ ಕಾಮಗಾರಿಗೆ ಬಳಕೆ ಮಾಡಿರುವ ಪೈಪ್‌ಲೈನ್‌ ತುಂಬಾ ಸಣ್ಣದಿದ್ದು ಹಾಗ ‌ೂ ಕಳಪೆಯಿಂದ ‌ ಕೂಡಿದ್ದಾಗಿದೆ. ಇದರಿಂದಾಗಿ ಮೇಲಿಂದ ಮೇಲೆ ಸಮಸ್ಯೆಯಾಗುತ್ತಿದೆ. ಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳು ಈ ಕುರಿತು ಸಂಪೂರ್ಣ ನಿರ್ಲಕ್ಷ ಮಾಡುತ್ತಿದ್ದಾರೆ. ಪ್ರಸ್ತುತ ಸಿಂಗಟಾಲೂರು ಏತ ನೀರಾವರಿಯೋಜನೆಯಉಳಿದಭಾಗಗಳ ಕೆರೆಗಳಿಗೆ ನೀರುಣಿಸುವ ಯೋಜನೆ ಸಫಲವಾಗಿದ್ದು ನಮ್ಮ ಇಟಗಿ ಭಾಗದ ಕೆರೆಗಳಿಗೆ ಅದರಲ್ಲೂ ತಳಕಲ್‌ ಕೆರೆಗೆ ನೀರುಣಿಸುವ ಕಾಮಗಾರಿಯನ್ನು ಸಂಪೂರ್ಣವಾಗಿ ವಿಫಲರಾಗಿದ್ದಾರೆ.

ಕಾರಣ ಈ ಕೂಡಲೇ ಅಧಿಕಾರಿಗಳು ಎಚ್ಚೆತ್ತು ಆಗಿರುವ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು. ಇಟಗಿ ರಾಮನಗೌಡ್‌, ಇಟಗಿ ಗ್ರಾಪಂ ಸದಸ್ಯ ಶಿವಮೂರ್ತಿ, ಸತೀಶ್‌ ಕುಂಚೂರು, ಕೆಪಿ ನಾಗರಾಜ್‌ ಇಟಗಿ ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next