ಆರ್.ಬಸವರೆಡ್ಡಿ ಕರೂರು
ಸಿರುಗುಪ್ಪ: ತಾಲೂಕಿನ ಶಾನವಾಸಪುರ ಮತ್ತು ದೇಶನೂರು ಗ್ರಾಮದಲ್ಲಿ ತೋಟಗಾರಿಕೆ ಬೆಳೆಯಾದ ಬಾಳೆ ಬೆಳೆದ ರೈತರಿಗೆ ಉತ್ತಮ ಆದಾಯ ಬಂದಿದೆ. ಶಾನವಾಸಪುರ ಗ್ರಾಮದ ರೈತ ವಿರುಪಾಕ್ಷಿಗೌಡ ತನ್ನ 7 ಎಕರೆಯಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಹನಿ ನೀರಾವರಿಗೆ 1,90,000, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರೂ. 61ಸಾವಿರ ಸಹಾಯಧನ ಪಡೆದು ಬಾಳೆ ಬೆಳೆಗೆ ಹನಿನೀರಿನ ಸೌಲಭ್ಯ ಕಲ್ಪಿಸಿಕೊಂಡು ಒಂದು ಎಕರೆಗೆ ರೂ. 3 ಲಕ್ಷದಂತೆ 7 ಎಕರೆಗೆ ಒಟ್ಟು ರೂ. 21 ಲಕ್ಷಗಳ ಆದಾಯ ಪಡೆದಿದ್ದು, ಇವರ ಜಮೀನಿನಲ್ಲಿ ಬೆಳೆದ ಬಾಳೆ ಹಣ್ಣುಗಳು ಸೀಮಾಂಧ್ರದ ಅನಂತಪುರ ಹಣ್ಣು ಮಾರಾಟದ ಏಜೆನ್ಸಿಯ ಮೂಲಕ ನೇಪಾಳ ದೇಶಕ್ಕೆ ರಫ್ತಾಗಿದೆ.
ಈ ರೈತನ ಜಮೀನಿನಲ್ಲಿ ಬೆಳೆದ ಒಂದೊಂದು ಬಾಳೆಗೊನೆಯು 30-40 ಕೆಜಿ ತೂಕವಿದ್ದು, ಒಂದು ಕೆಜಿ ರೂ.11 ರಿಂದ 12ಗೆ ಮಾರಾಟವಾಗಿದ್ದು ಉತ್ತಮ ಲಾಭ ದೊರೆಯಲು ಸಾಧ್ಯವಾಗಿದೆ. ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆ ವತಿಯಿಂದ2020-21ನೇ ಸಾಲಿನಲ್ಲಿ ದೇಶನೂರು ಗ್ರಾಮದ ರೈತ ನೂರ್ ಅಹಮ್ಮದ್ ತನ್ನ 1 ಎಕರೆ ಜಮೀನಿನಲ್ಲಿ ಜಿ-9 ತಳಿಯಅಂಗಾಂಶದಬಾಳೆಬೆಳೆಯನ್ನುಬೆಳೆದಿದ್ದು, ಕೂಲಿವೆಚ್ಚ ಮತ್ತು ಸಾಮಾಗ್ರಿ ವೆಚ್ಚವಾಗಿ ರೂ. 70 ಸಾವಿರ ಸಹಾಯಧನ ಪಡೆದಿದ್ದಾನೆ.
ಬಾಳೆ ಬೆಳೆ ಸಮೃದ್ಧವಾಗಿ ಬೆಳೆದಿದ್ದು, ಈ ರೈತನ ಜಮೀನಿನಲ್ಲಿ ಬೆಳೆದ ಬಾಳೆ ಗೊನೆಗಳು 20 ರಿಂದ 30 ಕೆಜಿ ತೂಕವಿದ್ದು, ಸುಮಾರು 22 ಟನ್ ಬಾಳೆ ಗೊನೆಗಳನ್ನು ಕಟಾವು ಮಾಡಿ ಲಾಕ್ ಡೌನ್ ಸಮಯದಲ್ಲಿ ಒಂದು ಕೆಜಿಗೆ ರೂ. 6ಕ್ಕೆ ಮಾರಾಟ ಮಾಡಿ ಸಿಂಧನೂರಿನ ಹಣ್ಣಿನ ವ್ಯಾಪಾರಿಗಳಗ ಮೂಲಕ ಮಾರಾಟ ಮಾಡಿದ್ದು, ಒಂದು ಎಕರೆಗೆ ಸುಮಾರು ರೂ.2 ಲಕ್ಷ ಲಾಭ ಪಡೆದಿದ್ದು, ಇನ್ನುಳಿದ 5ಟನ್ ಬಾಳೆ ಬೆಳೆ ಬೆಳೆಯು ಕಟಾವು ಹಂತದಲ್ಲಿದ್ದು, ಸದ್ಯ ಒಂದು ಕೆಜಿಗೆ ರೂ. 10ರಂತೆ ಮಾರುಕಟ್ಟೆಯಲ್ಲಿ ಬಾಳೆಹಣ್ಣು ಮಾರಾಟವಾಗುತ್ತಿರುವುದರಿಂದ ರೂ. 50 ಸಾವಿರ ಲಾಭ ಬರುವ ನಿರೀಕ್ಷೆಯಿದೆ ಎನ್ನುತ್ತಾರೆ.
ನಮ್ಮ ಜಮೀನಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಮತ್ತು ಹನಿ ನೀರಾವರಿ ಯೋಜನೆಯಡಿ ಸಹಾಯಧನ ಪಡೆದು ಬಾಳೆ ಬೆಳೆಯನ್ನು 7 ಎಕರೆಯಲ್ಲಿ ಬೆಳೆದಿದ್ದು, ಉತ್ತಮ ಇಳುವರಿ, ಹೆಚ್ಚು ಬೆಲೆ ದೊರೆತಿರುವುದರಿಂದ ಒಂದು ಎಕರೆಗೆ ರೂ. 3 ಲಕ್ಷದಂತೆ 7 ಎಕರೆಗೆ ರೂ.21ಲಕ್ಷ ಲಾಭ ಪಡೆದಿದ್ದೇನೆ, ನಮ್ಮ ಜಮೀನಿನ ಹಣ್ಣುಗಳು ನೇಪಾಳ ದೇಶಕ್ಕೆ ರಫ್ತಾಗಿವೆ ಎಂದು ಶಾನವಾಸಪುರ ಗ್ರಾಮದ ಬಾಳೆ ಬೆಳೆದ ರೈತ ವಿರುಪಾಕ್ಷಿಗೌಡ ತಿಳಿಸಿದ್ದಾರೆ. ನಮ್ಮ ಹೊಲದಲ್ಲಿ ಬೆಳೆದ ಬಾಳೆ ಹಣ್ಣು ಉತ್ತಮ ಗುಣಮಟ್ಟದ್ದಾಗಿದ್ದರಿಂದ ವ್ಯಾಪಾರಿಗಳು ನಮ್ಮ ಜಮೀನಿಗೆ ಬಂದು ಹಣ್ಣುಗಳ ತೂಕ ಮತ್ತು ಗಾತ್ರ ನೋಡಿ, ಹಣ್ಣುಗಳನ್ನು ಖರೀದಿ ಮಾಡಿದ್ದು, ರೂ.2 ಲಕ್ಷ ಲಾಭ ಬಂದಿದ್ದು, ಇನ್ನೂ ರೂ.50 ಸಾವಿರ ಲಾಭ ಬರುವ ನಿರೀಕ್ಷೆ ಇಟ್ಟುಕೊಂಡಿದ್ದೇನೆಂದು ದೇಶನೂರು ರೈತ ಅಹಮ್ಮದ್ ತಿಳಿಸಿದ್ದಾರೆ.
ತಾಲೂಕಿನಲ್ಲಿ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿಸಹಾಯಧ® ಪಡೆದುಬಾಳೆಬೆಳೆದ ರೈತರಿಗೆ ಉತ್ತಮ ಇಳುವರಿ ಬಂದಿದ್ದು. ಉತ್ತಮ ಆದಾಯವನ್ನು ತಂದುಕೊಟ್ಟಿದೆ. ಆದ್ದರಿಂದ ಹೆಚ್ಚಿನ ರೈತರು ತೋಟಗಾರಿಕೆ ಬೆಳೆಗಳನ್ನು ಬೆಳೆದರೆ ಉತ್ತಮ ಆದಾಯ ಗಳಿಸಲು ಅನುಕೂಲವಾಗುತ್ತದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವಿಶ್ವನಾಥ ತಿಳಿಸಿದ್ದಾರೆ.