Advertisement
ಉದಯವಾಣಿ ಉಡುಪಿಯ ಆರ್ಟಿಸ್ಟ್ಸ್ ಫೋರಂ ಸಹಯೋಗ ದೊಂದಿಗೆ ರವಿವಾರ ಮಂಗಳೂರಿನ ಕೆನರಾಹೈಸ್ಕೂಲ್ನ ಭುವನೇಂದ್ರ ಸಭಾಭವನಲ್ಲಿ ಆಯೋಜಿಸಿದ್ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಉದಯವಾಣಿ ಚಿಣ್ಣರ ಬಣ್ಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದು ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಉದಯವಾಣಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ವಿನೋದ್ ಕುಮಾರ್ ಮಾತನಾಡಿ, ಪ್ರತೀ ಮಗುವಿನಲ್ಲೂ ಪ್ರತಿಭೆ ಇರುತ್ತದೆ. ಅದರ ಪ್ರಕಟಕ್ಕೆ ವೇದಿಕೆ ಅಗತ್ಯ. ಈ ನಿಟ್ಟಿನಲ್ಲಿ ಉದಯವಾಣಿ ಹಲವಾರು ವರ್ಷಗಳಿಂದ ಚಿಣ್ಣರ ಬಣ್ಣ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿಕೊಂಡು ಬರುತ್ತಿದೆ. ಸಣ್ಣ ಮಟ್ಟದಿಂದ ಪ್ರಾರಂಭವಾದ ಈ ಸ್ಪರ್ಧೆ ಪೋಷಕರ, ಮಕ್ಕಳ ಅಪೂರ್ವ ಸ್ಪಂದನೆಯಿಂದಾಗಿ ಭಾರೀ ಯಶಸ್ಸಿನೊಂದಿಗೆ ಮುನ್ನಡೆಯುತ್ತಿದೆ.ಇದಕ್ಕಾಗಿ ಪೋಷಕರು, ಮಕ್ಕಳಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು. ನಮ್ಮ ಈ ಕಾರ್ಯದಲ್ಲಿ ನಿರಂತರ ಕೈಜೋಡಿಸುತ್ತಾ ಬರುತ್ತಿರುವ ಉಡುಪಿ ಆರ್ಟಿಸ್ಟ್ಸ್ ಫೋರಂಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.
Related Articles
ಮುಖ್ಯ ಅತಿಥಿಯಾಗಿದ್ದ ಕೆನರಾ ಹೈಸ್ಕೂಲ್ ಅಸೋಸಿಯೇಶನಿನ ಗೌರವ ಕಾರ್ಯದರ್ಶಿ ರಂಗನಾಥ ಭಟ್ ಮಾತನಾಡಿ, ಮಕ್ಕಳಲ್ಲಿ ಸೃಜನಶೀಲತೆ ಉತ್ತೇಜಿಸುವಲ್ಲಿ ಚಿತ್ರಕಲೆ ಸ್ಪರ್ಧೆ ಪೂರಕವಾಗಿದೆ. ಉದಯವಾಣಿ ಚಿಣ್ಣರ ಬಣ್ಣ ಚಿತ್ರಕಲೆ ಸ್ಪರ್ಧೆಯನ್ನು ಕಳೆದ ಹಲವಾರು ವರ್ಷಗಳಿಂದ ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿಕೊಂಡು ಬರು ತ್ತಿದ್ದು ಇದಕ್ಕಾಗಿ ಉದಯವಾಣಿ ಬಳಗಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
Advertisement
ಮಾದರಿ ಕಾರ್ಯಕ್ರಮಮೋಡರ್ನ್ ಕಿಚನ್ ಸಂಸ್ಥೆಯ ಮಹಾಪ್ರಬಂಧಕ ಸುಧೀಂದ್ರ ಕಾಮತ್ ಮಾತನಾಡಿ, ಚಿಣ್ಣರ ಬಣ್ಣ ಚಿತ್ರಕಲಾ ಸ್ಪರ್ಧೆ ಮಾದರಿಯಾಗಿದೆ ಎಂದರು. ಹ್ಯಾಂಗೋ ಸಂಸ್ಥೆಯ ಮ್ಯಾನೇಜರ್ (ಆಪರೇಶನ್ಸ್) ರಾಕೇಶ್ ಕಾಮತ್ ಮಾತ
ನಾಡಿ, ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಅತ್ಯಂತ ಖುಷಿ ತಂದಿದೆ ಎಂದರು. ಆರ್ಟಿಸ್ಟ್ಸ್ ಫೋರಂ ಉಡುಪಿ ಅಧ್ಯಕ್ಷ ರಮೇಶ್ ರಾವ್ ಉಪಸ್ಥಿತರಿದ್ದರು. ಉದಯವಾಣಿ ಉಪಾಧ್ಯಕ್ಷ ರಾಮಚಂದ್ರ ಮಿಜಾರು ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರಾದೇಶಿಕ ಪ್ರಬಂಧಕ ಸತೀಶ್ ಮಂಜೇಶ್ವರ ಬಹುಮಾನ ವಿಜೇತರ ವಿವರ ನೀಡಿದರು. ಮಂಗಳೂರು ವಿಭಾಗದ ಮುಖ್ಯ ವರದಿಗಾರ ವೇಣುವಿನೋದ್ ಕೆ.ಎಸ್. ವಂದಿಸಿದರು. ಹಿರಿಯ ವರದಿಗಾರ ದಿನೇಶ್ ಇರಾ ನಿರೂಪಿಸಿದರು. ತಾಲೂಕು, ಜಿಲ್ಲಾ ಮಟ್ಟದ
ವಿಜೇತರಿಗೆ ಬಹುಮಾನ ವಿತರಣೆ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ನಡೆದಿದ್ದ ತಾಲೂಕು ಮಟ್ಟದ ಚಿಣ್ಣರ ಬಣ್ಣ ಸ್ಪರ್ಧೆಯಲ್ಲಿ ವಿಜೇತರಾಗಿದ್ದ 144 ವಿದ್ಯಾರ್ಥಿಗಳಿಗೆ ಹಾಗೂ ರವಿವಾರ ನಡೆದ ಉಭಯ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ 24 ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ “ಚಿಣ್ಣರ ಬಣ್ಣ-2022′
ಮಕ್ಕಳ ಚಿತ್ರಕಲಾ ಸ್ಪರ್ಧೆಯ ಫಲಿತಾಂಶ
ಸಬ್ ಜೂನಿಯರ್ ವಿಭಾಗ
ಪ್ರಥಮ: ಪಾವನಿ ಜಿ. ರಾವ್, ಶ್ರೀ ಅನಂತೇಶ್ವರ ಪ್ರೌಢಶಾಲೆ ಉಡುಪಿ ದ್ವಿತೀಯ: ಪ್ರಣಮ್ಯಾ ಆಚಾರ್, ಎಸ್.ಆರ್. ಪಬ್ಲಿಕ್ ಸ್ಕೂಲ್, ಹೆಬ್ರಿ ತೃತೀಯ: ಶರಣ್ಯಾ ಎಸ್., ಸರಕಾರಿ ಕಿ.ಪ್ರಾ. ಶಾಲೆ, ಹರ್ಕಾಡಿ ಸಮಾಧಾನಕರ: ಅಯನಾ ಪಿರೇರಾ (ರೋಟರಿ ಸೆಂಟ್ರಲ್ ಸ್ಕೂಲ್, ಮೂಡುಬಿದಿರೆ), ತೇಜಸ್ವಿ ವಿ. ರಾವ್ (ಮುಕುಂದ ಕೃಪಾ ಆಂಗ್ಲಮಾಧ್ಯಮ ಶಾಲೆ ಉಡುಪಿ), ದೇಷ್ಣ (ಎಸ್.ಆರ್. ಪಬ್ಲಿಕ್ ಸ್ಕೂಲ್ ಹೆಬ್ರಿ), ಸಾಗರಿ (ಸರಕಾರಿ ಹಿ.ಪ್ರಾ. ಶಾಲೆ ಬಳ್ಕೂರು), ಪ್ರಾಪ್ತಿ ಎನ್.ಎಸ್. (ಸರಕಾರಿ ಹಿ.ಪ್ರಾ. ಶಾಲೆ ಪಂಜ). ಜೂನಿಯರ್ ವಿಭಾಗ
ಪ್ರಥಮ: ವಿನೀಶ್ ಆಚಾರ್ಯ, ಎಸ್.ಆರ್. ಪಬ್ಲಿಕ್ ಸ್ಕೂಲ್ ಹೆಬ್ರಿ ದ್ವಿತೀಯ: ರಿಷಭ್ ಎಚ್.ಎಂ., ಆಳ್ವಾಸ್ ಆಂಗ್ಲಮಾಧ್ಯಮ ಶಾಲೆ ಮೂಡುಬಿದಿರೆ ತೃತೀಯ: ಅನ್ವಿತ್ ಆರ್. ಶೆಟ್ಟಿಗಾರ್, ಸೈಂಟ್ ಮೆರೀಸ್ ಆಂಗ್ಲಮಾಧ್ಯಮ ಶಾಲೆ ಕನ್ನರ್ಪಾಡಿ, ಉಡುಪಿ ಸಮಾಧಾನಕರ: ಧೃತಿ ಎಸ್. (ಲಿಟ್ಲ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ), ಕೃಷ್ಣಪ್ರಸಾದ್ ಭಟ್ (ಅಮೃತ ಭಾರತಿ ವಿದ್ಯಾಕೇಂದ್ರ ಹೆಬ್ರಿ), ವೈ.ಹನ್ಸಿಕಾ (ಕೆನರಾ ಹೈಸ್ಕೂಲ್ ಉರ್ವ), ಸಾನ್ವಿ ಪಾಲನ್ (ಮಾಧವ ಕೃಪಾ ಆಂಗ್ಲಮಾಧ್ಯಮ ಶಾಲೆ ಮಣಿಪಾಲ), ರಾಜು ಸಿಂಗ್ (ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆ ಮೂಡುಬಿದಿರೆ). ಸೀನಿಯರ್ ವಿಭಾಗ
ಪ್ರಥಮ: ಅಕ್ಷಜ್, ಎನ್‌ಐಟಿಕೆ ಆಂಗ್ಲಮಾಧ್ಯಮ ಶಾಲೆ ಸುರತ್ಕಲ್ ದ್ವಿತೀಯ: ಸ್ಪರ್ಶ ಪ್ರದೀಪ್, ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ ತೃತೀಯ: ನಿಖೀಲ್ ಜೆ. ಕುಲಾಲ್, ಅಮೃತ ಭಾರತಿ ವಿದ್ಯಾಕೇಂದ್ರ ಹೆಬ್ರಿ ಸಮಾಧಾನಕರ: ಪ್ರಕೃತಿ (ಕ್ರೈಸ್ಟ್ ಕಿಂಗ್ ಸ್ಕೂಲ್ ಕಾರ್ಕಳ), ಹಂಸವಿ (ವಿಶ್ವವಿನಾಯಕ ಸಿಬಿಎಸ್‌ಸಿ ಸ್ಕೂಲ್ ತೆಕ್ಕಟ್ಟೆ), ನೇಹಾ (ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆ ಮಣಿಪಾಲ), ನಿಶಾನ್ ಜೈನ್ ಬಿ. (ಎಸ್‌ಡಿಎಂ ಆಂಗ್ಲಮಾಧ್ಯಮ ಶಾಲೆ ಉಜಿರೆ), ಪ್ರತಿಷ್ಠಾ ಶೇಟ್ (ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ) 16 ಸಾವಿರಕ್ಕೂ
ಅಧಿಕ ಮಕ್ಕಳು ಭಾಗಿ
ದ.ಕ. ಜಿಲ್ಲೆಯ 9 ಹಾಗೂ ಉಡುಪಿ ಜಿಲ್ಲೆಯ 7 ತಾಲೂಕುಗಳು ಸೇರಿ ಒಟ್ಟು 16 ತಾಲೂಕುಗಳಲ್ಲಿ ನಡೆದಿದ್ದ ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ಸಬ್‌ಜೂನಿಯರ್, ಜೂನಿಯರ್ ಹಾಗೂ ಹಿರಿಯ ವಿಭಾಗದಲ್ಲಿ 16,000ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದು ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ. ಪ್ರತಿಯೊಂದು ತಾಲೂಕಿನಲ್ಲೂ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಕಲಾಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.