Advertisement

“ಉದಯವಾಣಿ’ಸುವರ್ಣ ಮಹೋತ್ಸವದ ಲಾಂಛನ ಅನಾವರಣ

11:34 AM Dec 26, 2019 | sudhir |

ಉಡುಪಿ: ಕರಾವಳಿ ಕರ್ನಾಟಕದ ನಂಬರ್‌ 1 ದೈನಿಕ “ಉದಯವಾಣಿ’ಯ ಸುವರ್ಣ ಮಹೋತ್ಸವದ ಘಟ್ಟದಲ್ಲಿದ್ದು 50ನೆಯ ವರ್ಷಾಚರಣೆಯ ಲಾಂಛನವನ್ನು ಬುಧವಾರ ಶ್ರೀಕೃಷ್ಣಮಠದ ಆವರಣದಲ್ಲಿ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು ಅನಾವರಣಗೊಳಿಸಿ ಪತ್ರಿಕೆಯ ಉತ್ತರೋತ್ತರ ಅಭಿವೃದ್ಧಿಗೆ ಶುಭ ಕೋರಿದರು.

Advertisement

ಕಿರಿಯ ಶ್ರೀಗಳಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಧಾರ್ಮಿಕ ದತ್ತಿ ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಕೆ.ರಘುಪತಿ ಭಟ್‌, ಸುನೀಲ್‌ಕುಮಾರ್‌, ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ. ಸಿಇಒ ವಿನೋದಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

1970ರ ಜ. 1ರಂದು “ಉದಯವಾಣಿ’ ದೈನಿಕ ಆರಂಭಗೊಂಡಿತು. 1969ರ ಡಿಸೆಂಬರ್‌ ಕೊನೆಯ ಭಾಗದಲ್ಲಿ ಪ್ರಾಯೋಗಿಕ ಸಂಚಿಕೆ ಶ್ರೀಕೃಷ್ಣಮಠದ ಪರಿಸರದಲ್ಲಿ ವಿತರಣೆಗೊಂಡಿತ್ತು. 50 ವರ್ಷಗಳ ಬಳಿಕ ಅದೇ ಅವಧಿಯಲ್ಲಿ ಅದೇ ಪರಿಸರದಲ್ಲಿ ಈಗ 50ನೆಯ ವರ್ಷದ ಲಾಂಛನ ಬಿಡುಗಡೆಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next