Advertisement

ಉದಯಶಂಕರ ಪುರಾಣಿಕಗೆ ಮಾಗನೂರು ಬಸಪ್ಪ ಪ್ರಶಸ್ತಿ

03:28 PM Jan 28, 2021 | Team Udayavani |

ಕೊಪ್ಪಳ: ದಾವಣಗೆರೆಯ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನ ನೀಡುವ ಪ್ರತಿಷ್ಠಿತ ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿಗೆ ಕೊಪ್ಪಳದ ಡಾ| ಉದಯಶಂಕರ ಪುರಾಣಿಕ್‌ ಭಾಜನರಾಗಿದ್ದಾರೆ.

Advertisement

ಹೈದರಾಬಾದ್‌ ಕರ್ನಾಟಕ ವಿಮೋಚನೆ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸಾಹಿತಿ ದಿ. ಅನ್ನದಾನಯ್ಯ ಪುರಾಣಿಕ್‌ ಅವರ ಪುತ್ರ ಡಾ| ಉದಯಶಂಕರ ಪುರಾಣಿಕ್‌ ಅವರು ಕಳೆದ 30 ವರ್ಷಗಳಿಂದ ದೇಶ-ವಿದೇಶಗಳಲ್ಲಿ ಕನ್ನಡ ಬಳಕೆಯನ್ನು ಜನಪ್ರಿಯಗೊಳಿಸುವ ಹಲವಾರುಯೋಜನೆಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ.

ಕಂಪ್ಯೂಟರ್‌ ತಂತ್ರಜ್ಞ  ಡಾ| ಪುರಾಣಿಕ್‌ ಕನ್ನಡದ ಅಪರೂಪದ ಹಸ್ತಪ್ರತಿಗಳು, ತಾಳೆಗರಿಗಳಿಗೆ ಡಿಜಿಟಲ್‌ ರೂಪ ನೀಡಿರುವುದಲ್ಲದೇ ಮೊಬೈಲ್‌, ಎಲೆಕ್ಟ್ರಾನಿಕ್‌ ಸಾಧನಗಳು ಹಾಗೂ ಅಂತರ್ಜಾಲದಲ್ಲಿ ಕನ್ನಡದಲ್ಲಿ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಶ್ರಮಿಸಿದ್ದಾರೆ. ಸಾಧಾರಣ ಮೂಲದಿಂದ ದೊಡ್ಡ ಉದ್ಯಮಿಯೂ, ದಾಸೋಹಿಯೂ ಆಗಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿರುವ ಶರಣ ದಿ. ಮಾಗನೂರು ಬಸಪ್ಪ ಅವರ ಹೆಸರಿನಲ್ಲಿ ಸ್ಥಾಪಿಸಿದ ಪ್ರಶಸ್ತಿ ಈ ಬಾರಿ ಡಾ| ಉದಯ ಶಂಕರ ಪುರಾಣಿಕ್‌ ಅವರಿಗೆ ಘೋಷಿಸಲಾಗಿದೆ.

ಇದನ್ನೂ ಓದಿ:5 ಅಡಿ 7 ಅಂಗುಲಕ್ಕೆ ಶತದಿನದ ಸಂಭ್ರಮ

ದಾವಣಗೆರೆ ಜಿಲ್ಲಾ ಕಸಾಪ ಹಾಗೂ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನಗಳು ಜಂಟಿಯಾಗಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿವೆ. ಈ ಮುಂಚೆ ಗೊ.ರು. ಚನ್ನಬಸಪ್ಪ, ರಂಜಾನ್‌ ದರ್ಗಾ, ಪಾಟೀಲ್‌ ಪುಟ್ಟಪ್ಪ, ಲೀಲಾವತಿ ಆರ್‌. ಪ್ರಸಾದ್‌, ಅರವಿಂದ ಜತ್ತಿ ಮುಂತಾದವರಿಗೆ ಪ್ರಶಸ್ತಿ ಸಂದಿದೆ. ಜ. 30ರಂದು ಬೆಳಗ್ಗೆ 11 ಗಂಟೆಗೆ ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ತರಳಬಾಳು ಪೀಠದ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆಯುವ ಸಮಾರಂಭದಲ್ಲಿ ಕಸಾಪ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಡಾ| ಶೇಖರಗೌಡ  ಮಾಲಿಪಾಟೀಲ್‌,ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ ಪಾಲ್ಗೊಳ್ಳಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next