ಸುರತ್ಕಲ್: ಇಲ್ಲಿಯ ನಾಗರಿಕ ಸಲಹಾ ಸಮಿತಿ, ಮಣಿಕೃಷ್ಣ ಸ್ವಾಮಿ ಅಕಾಡೆಮಿ ಸುರತ್ಕಲ್, ಉದಯರಾಗ ತಂಡ ಹಾಗೂ ವಿವಿಧ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸುರತ್ಕಲ್ ಫ್ಲೈಓವರ್ ತಳಭಾಗದಲ್ಲಿ ನಡೆಯುತ್ತಿರುವ ಸರಣಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಉದಯರಾಗ-2ರಲ್ಲಿ ಭಾಮಿನಿ ಕೆ. ಭಟ್, ಪುತ್ತೂರು ಅವರ ಹಾಡುಗಾರಿಕೆ ನಡೆಯಿತು.
ಸುಮೇಧ ಅಮೈ ವಯಲಿನ್‌ನಲ್ಲಿ ಹಾಗೂ ಹೊಸಮನೆ ಅಮೃತ ನಾರಾಯಣ ಮೃದಂಗದಲ್ಲಿ ಸಹಕರಿಸಿದರು.
ಈ ಸಂದರ್ಭ ಗೋವಿಂದದಾಸ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ದ್ವಿತೀಯ ರ್‍ಯಾಂಕ್ ಪಡೆದ ಅಂಕಿತಾ, ರಮ್ಯಶ್ರೀ ಅವರನ್ನು ಗೌರವಿಸಲಾಯಿತು. ಸುರತ್ಕಲ್ ನಾಗರಿಕ ಸಲಹಾ ಸಮಿತಿ ಸಂಚಾಲಕ ಪ್ರೊ| ಕೆ. ರಾಜ ಮೋಹನ ರಾವ್, ಉದಯರಾಗ ತಂಡದ ಸದಸ್ಯರಾದ ರಾಜಶ್ರೀ ರವಿರಾಜ್, ಸಚ್ಚಿದಾನಂದ, ಪಿ. ಶ್ರೀನಿವಾಸ ರಾವ್, ಸುರತ್ಕಲ್ ರೋಟರಿ ಕ್ಲಬ್‌ನ ರಮೇಶ್ ರಾವ್ ಎಂ., ಸಾಹಿತಿ ಗಂಗಾ ಪಾದೇಕಲ್, ಎಂ.ಆರ್ .ಪಿ.ಎಲ್. ಸಂಸ್ಥೆಯ ಹಿರಿಯ ಪ್ರಬಂಧಕ ಪ್ರಸಾದ್, ಲೀಲಾಧರ್ ಶೆಟ್ಟಿ, ರಮೇಶ್ ರಾವ್ ಹೊಸಬೆಟ್ಟು ಉಪಸ್ಥಿತರಿದ್ದರು. ಮಣಿಕೃಷ್ಣ ಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಸ್ವಾಗತಿಸಿದರು. ರೋಟರಿ ಕ್ಲಬ್‌ನ ಕಾರ್ಯದರ್ಶಿ ಕೃಷ್ಣಮೂರ್ತಿ ನಿರೂಪಿಸಿದರು.
ಗೌರವಾರ್ಪಣೆ
ಸುರತ್ಕಲ್‌ಉದ್ಯಮಿ ಜೆ.ಡಿ. ವೀರಪ್ಪ ಹಾಗೂ ಹಿರಿಯ ನಾದಸ್ವರಕಲಾವಿದ ನಾಗೇಶ್ ಬಪ್ಪನಾಡು ಬಾಲ ಕಲಾವಿದರನ್ನು ಗೌರವಿಸಿದರು.