Advertisement

ನಗರದ ಹಳಿ ಮೇಲೆ ಉದಯ ಸಂಚಾರ

12:01 PM Feb 11, 2018 | |

ನವದೆಹಲಿ: ಬೆಂಗಳೂರು ಹಾಗೂ ಕೊಯಮತ್ತೂರು ನಡುವೆ ಶೀಘ್ರದಲ್ಲೇ “ಉದಯ್‌ ಎಕ್ಸ್‌ಪ್ರೆಸ್‌’ ಹೆಸರಿನ ಹೊಸ ರೈಲೊಂದು ಸಂಚರಿಸಲಿದೆ. “ಉತ್ಕೃಷ್ಟ ಡಬಲ್‌ ಡೆಕ್ಕರ್‌ ಏರ್‌ ಕಂಡೀಷನ್‌ ಎಕ್ಸ್‌ಪ್ರೆಸ್‌’ (ಉದಯ್‌) ಮಾದರಿಯ ರೈಲು ಇದಾಗಿದ್ದು, ಈಗಿರುವ ಸಾಮಾನ್ಯ ಎಸಿ ಕೋಚ್‌ಗಳಿಗಿಂತ ಉತ್ತಮ ಸೌಲಭ್ಯಗಳನ್ನು ಇದು ಹೊಂದಿರಲಿದೆ. 

Advertisement

ಈ ರೈಲುಗಳಲ್ಲಿ ಆಟೋಮ್ಯಾಟಿಕ್‌ ಫ‌ುಡ್‌ ವೆಂಡಿಂಗ್‌ ಮೆಷೀನ್‌ಗಳನ್ನು ಅಳವಡಿಸಲಾಗಿದ್ದು, ಟೀ- ಕಾಫಿ ವೆಂಡಿಂಗ್‌ ಮೆಷೀನ್‌ಗಳೂ ಲಭ್ಯವಿರಲಿವೆ. ಪ್ರತಿಯೊಂದು ಆಸನಕ್ಕೂ ಎಲ್‌ಡಿಸಿ ಪರದೆಗಳು, ಅವುಗಳ ಜತೆಗೆ ಬ್ಲೂ ಟೂತ್‌/ವೈಫೈ ಹೆಡ್‌ಫೋನ್‌ಗಳನ್ನು ನೀಡಲಾಗಿದೆ.

ಇನ್ನು, ಆಸನಗಳು ಹೆಚ್ಚು ಆರಾಮದಾಯಕವಾಗಿದ್ದು, ಉತ್ತಮ ಲೆಗ್‌ ಸ್ಪೇಸ್‌ ಹೊಂದಿರಲಿವೆ. ಹಾಗಾಗಿ, ಕಾಲು ಚಾಚಿ ಮಲಗಬಹುದು. ಇನ್ನು ಶೌಚಕ್ಕಾಗಿ ಮಾಡ್ಯುಲರ್‌ ಟಾಯ್ಲೆಟ್‌ಗಳನ್ನು ಉದಯ್‌ ರೈಲು ಹೊಂದಿರಲಿದೆ. ಇನ್ನು, ಊಟ ಮಾಡಲು ಆರಾಮದಾಯಕ ಸೌಕರ್ಯ ಕಲ್ಪಿಸಲಾಗಿದೆ. 

ಉದಯ್‌ ವೇಳಾಪಟ್ಟಿ
ಮಧ್ಯಾಹ್ನ 2:15 – ಬೆಂಗಳೂರಿನಿಂದ ಹೊರಡುವ ಸಮಯ
ರಾತ್ರಿ 10:00 – ಕೊಯಮತ್ತೂರು ತಲುಪುವ ಸಮಯ
ಬೆ. 5:40- ಕೊಯಮತ್ತೂರಿನಿಂದ ಹೊರಡುವ ಸಮಯ
ಮ. 12:40 – ಬೆಂಗಳೂರು ತಲುಪುವ ಸಮಯ

ಅಂಕಿ-ಅಂಶ
ರೈಲು ಕ್ರಮಿಸುವ ಒಟ್ಟು ದೂರ  – 366 ಕಿ.ಮೀ. (ಬೆಂಗಳೂರು-ಕೊಯಮತ್ತೂರು)

Advertisement

ಪ್ರಯಾಣದ ಅವಧಿ – 6ರಿಂದ 7 ಗಂಟೆ

Advertisement

Udayavani is now on Telegram. Click here to join our channel and stay updated with the latest news.

Next