Advertisement
ಜಾದೂಗಾರ ಕಡ್ಡಿ ತುಂಬಿದ ಒಂದು ಬೆಂಕಿ ಪೊಟ್ಟಣವನ್ನು ತೋರಿಸುತ್ತಾನೆ. ಹೋಕಸ್ ಪೋಕಸ್, ಅಬ್ರಕ ಡಬ್ರ… ಎನ್ನುತ್ತಾ ಪುನಃ ಅದನ್ನು ತೋರಿಸಿದಾಗ ಕಡ್ಡಿಗಳೆಲ್ಲಾ ಮಂಗ ಮಾಯ! ಮನೆಯಲ್ಲಿ ಅಮ್ಮಂದಿರಿಗೆ ಕಾಟ ಕೊಡಲು ಇದೊಳ್ಳೆ ಉಪಾಯ ಎಂದು ಯೋಚಿಸುತ್ತಿರುವಿರಾ? ಅರೆ… ಬೆಂಕಿ ಪೊಟ್ಟಣದಿಂದಲೂ ಕಡ್ಡಿ ಮಾಯವಾಗುವುದಾದರೆ ಗ್ಯಾಸ್ ಹಚ್ಚುವ ಅಮ್ಮಂದಿರ ಪಡಿಪಾಟಲು ಎಷ್ಟು ಮಜಾ ಇರಬಹುದೆಂದು ಊಹೆ ಮಾಡುತ್ತಿರುವಿರಾ? ಆದರೆ ಕಾಟ ಕೊಡುವುದಕ್ಕೆ ಬದಲಾಗಿ ಅಮ್ಮಂದಿರ ಮುಂದೆ ಈ ಮ್ಯಾಜಿಕ್ ಪ್ರದರ್ಶಿಸಿ. ಖಂಡಿತ ಖುಷಿ ಪಡುತ್ತಾರೆ.
ಒಂದು ಬೆಂಕಿ ಪೊಟ್ಟಣ ಮತ್ತು ಅದರ ಲೇಬಲ್‌ನಂತೆಯೇ ಇರುವ ಇನ್ನೊಂದು ಲೇಬಲ್. ತಂತ್ರ:
ಬೆಂಕಿ ಪೊಟ್ಟಣದ ಕಡ್ಡಿಗಳನ್ನೆಲ್ಲ ಖಾಲಿ ಮಾಡಿ. ಡ್ರಾಯರಿನ ಹಿಂಭಾಗಕ್ಕೆ ಕೆಲವು ಕಡ್ಡಿಗಳನ್ನು ಅಂಟಿಸಿ (ಚಿತ್ರ 1). ಡ್ರಾಯರನ್ನು ಪುನಃ ಪೊಟ್ಟಣದ ಒಳಗೆ ತಳ್ಳಿ. ಪೊಟ್ಟಣದ ಬೆನ್ನಿಗೆ ಇನ್ನೊಂದು ಲೇಬಲನ್ನು ಅಂಟಿಸಿ. ಈಗ ಐಟಂ ರೆಡಿ. ಪ್ರೇಕ್ಷಕರಿಗೆ ಕಡ್ಡಿ ಇರುವ ಕಡೆಯ ಡ್ರಾಯರನ್ನು ಅರ್ಧಕ್ಕೆ ತೆರೆದು ತೋರಿಸಿ (ಚಿತ್ರ 2). ಅದನ್ನು ಮುಚ್ಚಿ “ಹೋಕಸ್ ಪೋಕಸ್, ಅಬ್ರಕ ಡಬ್ರ..’ ಅನ್ನುತ್ತಿರಬೇಕಾದರೆ ಪೊಟ್ಟಣವನ್ನು ಉಲ್ಟಾ ಮಾಡಿ. ಈಗ ತೆರೆದು ತೋರಿಸಿದರೆ ಕಡ್ಡಿಗಳೆಲ್ಲಾ ಮಾಯವಾಗಿರುತ್ತದೆ. (ಚಿತ್ರ 3)
Related Articles
Advertisement