Advertisement

ರಾಜ್ಯದ 6 ನಗರಗಳಲ್ಲಿ ಉಡಾನ್‌?

02:28 AM Mar 31, 2017 | Team Udayavani |

ಹೊಸದಿಲ್ಲಿ: ಬೆಂಗಳೂರು, ಬೆಂಗಳೂರು ಎಚ್‌ಎಎಲ್‌, ಬೀದರ್‌, ಹುಬ್ಬಳ್ಳಿ, ಮೈಸೂರು ಮತ್ತು ಬಳ್ಳಾರಿಯ ವಿದ್ಯಾನಗರಗಳಲ್ಲಿನ್ನು ‘ಉಡಾನ್‌’ ಹವಾ ಆರಂಭವಾಗುವ ಎಲ್ಲ ಸಾಧ್ಯತೆಗಳೂ ಗೋಚರಿಸಿವೆ. ಕೇಂದ್ರ ಸರಕಾರದ ಪ್ರಾದೇಶಿಕ ಸಂಪರ್ಕ ಯೋಜನೆಯಾದ ಉಡಾನ್‌ (ಉಡೇ ದೇಶ್‌ ಕಾ ಆಮ್‌ ನಾಗರಿಕ್‌)ನಡಿ 70 ಏರ್‌ಪೋರ್ಟ್‌ಗಳನ್ನು ಸಂಪರ್ಕಿಸುವಂತೆ 128 ಮಾರ್ಗಗಳಲ್ಲಿ ವಿಮಾನ ಸಂಚಾರಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಹೆಜ್ಜೆಯಿಡಲಾಗಿದೆ. ಅದರಂತೆ, ಏರ್‌ ಡೆಕ್ಕನ್‌, ಸ್ಪೈಸ್‌ ಜೆಟ್‌ ಸೇರಿದಂತೆ 5 ವಿಮಾನಯಾನ ಕಂಪನಿಗಳು ಬಿಡ್‌ ಗೆದ್ದಿದ್ದು, ಕರ್ನಾಟಕ, ಮಧ್ಯಪ್ರದೇಶ, ಉತ್ತರಪ್ರದೇಶ, ತಮಿಳುನಾಡು ಸೇರಿ 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೇವೆ ಆರಂಭವಾಗಲಿದೆ.

Advertisement

ಉಡಾನ್‌ ಯೋಜನೆಯನ್ವಯ ಒಂದು ಗಂಟೆಯ ಪ್ರಯಾಣಕ್ಕೆ 2,500 ರೂ.ಗಳ ಮಿತಿ ಹೇರಲಾಗಿದೆ. ಒಡಿಶಾ ಏವಿಯೇಷನ್‌ ಸಂಸ್ಥೆಯು ಅತಿಹೆಚ್ಚು ಅಂದರೆ 50 ಮಾರ್ಗಗಳನ್ನು ತನ್ನದಾಗಿಸಿಕೊಂಡರೆ, ಏರ್‌ಡೆಕ್ಕನ್‌ಗೆ 34, ಟರ್ಬೋ ಮೇಘಾ ಏರ್‌ವೇಸ್‌ಗೆ 18, ಏರ್‌ಇಂಡಿಯಾದ ಅಂಗಸಂಸ್ಥೆ ಏರ್‌ಲೈನ್‌ ಅಲೈಡ್‌ ಸರ್ವಿಸಸ್‌ಗೆ 15 ಹಾಗೂ  ಸ್ಪೈಸ್‌ಜೆಟ್‌ಗೆ 11 ಮಾರ್ಗಗಳು ಸಿಕ್ಕಿವೆ. ಮೊದಲ ಉಡಾನ್‌ ವಿಮಾನವು ಎಪ್ರಿಲ್‌ನಲ್ಲಿ ಹಾರಾಟ ನಡೆಸಲಿದೆ ಎಂದು ವಿಮಾನಯಾನ ಕಾರ್ಯದರ್ಶಿ ಆರ್‌.ಎನ್‌. ಚೌಬೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next