Advertisement
ಹೆಲ್ಮೆಟ್ ಮತ್ತು ಜಾಕೆಟ್ ಧರಿಸಿ ಯುವಕ ಬರುವ ಮತ್ತು ಹೋಗುವ ದೃಶ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಉಚ್ಚಿಲದ ಮಹಮ್ಮದ್ ರಫೀಕ್ ಅವರ ಸೈಬರ್ ಕೆಫೆ, ಹೊಟೇಲ್ ಸ್ಪೈಸ್, ತವಕ್ಕಲ್ ಬೇಕರಿ, ಶಶಿ ಲಂಚ್ ಹೋಮ್‌ನ ಬೀಗ ಮುರಿದಿರುವ ಕಳ್ಳ ಅಲ್ಲಿರುವ ಚಿಲ್ಲರೆ ಹಣವನ್ನು ಮಾತ್ರ ದೋಚಿ ಪರಾರಿಯಾಗಿದ್ದಾನೆ.
ಬೆಳಗ್ಗೆ ಸುಮಾರು 5 ಗಂಟೆಯ ಸುಮಾರಿಗೆ ಸ್ಕೂಟರಿನಲ್ಲಿ ಬಂದ ಕಳ್ಳ ಶಟರ್ ಮುರಿದು ಒಳಗೆ ಹೊಕ್ಕಿರುವುದು ಬೆಳಕಿಗೆ ಬಂದಿದೆ. ಕಳ್ಳ ಕೇವಲ ಚಿಲ್ಲರೆ ಹಣ ಮಾತ್ರ ಕಳ್ಳತನ ಮಾಡಿದ್ದಾನೆ. ಸೈಬರ್‌ನಲ್ಲಿ ಲಕ್ಷಾಂತರ ರೂ. ಮೌಲ್ಯದ ಲ್ಯಾಪ್‌ಟಾಪ್ ಗಳಿದ್ದರು , ಅದನ್ನು ಆತ ಕದ್ದೊಯ್ದಿಲ್ಲ. ಪಡುಬಿದ್ರಿ ಪೊಲೀಸರು ಘಟನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Related Articles
Advertisement