Advertisement
ರಾ.ಹೆ. 66ರ ಉಚ್ಚಿಲ ಮೂಲಕವಾಗಿ ಪಣಿಯೂರು ರಸ್ತೆಯನ್ನು ಪ್ರವೇಶಿಸುವಲ್ಲಿಂದ ಹಿಡಿದು ಮುಳ್ಳಗುಡ್ಡೆ ಕ್ರಾಸ್‌ನವರೆಗಿನ ರಸ್ತೆಯ ಇಕ್ಕೆಲಗಳ ಚರಂಡಿ ಹಾಗೂ ಚರಂಡಿ ಇಲ್ಲದಿರುವ ಪ್ರದೇಶಗಳಲ್ಲಿ ರಸ್ತೆ ಬದಿಯಲ್ಲೇ ತ್ಯಾಜ್ಯ ಎಸೆಯಲಾಗಿದೆ.
ಉಚ್ಚಿಲದಿಂದ ಪಣಿಯೂರು ಪ್ರವೇಶಿಸುವ ರಸ್ತೆಯ ಮಗ್ಗುಲಿನಿಂದ ಹಿಡಿದು ವೆಲ್ಡಿಂಗ್ ಶಾಪ್ ಮುಂಭಾಗ, ಸಿ.ಎ. ಬ್ಯಾಂಕ್ ಮುಂಭಾಗ, ಭಾಸ್ಕರ ನಗರ, ಅಂಗನವಾಡಿ ಮುಂಭಾಗ, ಬಿಸ್ಮಿಲ್ಲಾ ಜನರಲ್ ಸ್ಟೋರ್ ಬಳಿ, ಮಹಾಲಕೀÒ$¾ ನಗರ ತಲುಪುವ ರಸ್ತೆ ಬಳಿ, ನಿವೃತ್ತ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಮನೆ ಬಳಿ, ಜನಪ್ರಿಯ ಮಿಲ್ ಮುಂಭಾಗ, ಮುಳ್ಳಗುಡ್ಡೆ ಜಂಕ್ಷನ್ ಮುಂಭಾಗದವರೆಗಿನ ಎಲ್ಲಾ ಪ್ರದೇಶಗಳಲ್ಲೂ ತ್ಯಾಜ್ಯ ತುಂಬಿವೆೆ.
Related Articles
ಭಾಸ್ಕರ ನಗರ ಅಂಗನವಾಡಿ ಮುಂಭಾಗ ತ್ಯಾಜ್ಯ ಎಸೆದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಬೋರ್ಡ್ ಇದ್ದರೂ ತ್ಯಾಜ್ಯ ರಾಶಿ ವೃದ್ಧಿಸುತ್ತಿದೆ. ಹಲವು ಕಡೆ ಮಳೆ ನೀರಿನ ಚರಂಡಿ ತ್ಯಾಜ್ಯದಿಂದ ಮುಚ್ಚಿದ್ದು, ರಸ್ತೆಯಲ್ಲೇ ನೀರು ಹರಿಯಲಿದೆ.
Advertisement
ಪ್ರಶ್ನಿಸಿದರೆ ಆಕ್ಷೇಪ ಇಲ್ಲಿ ತ್ಯಾಜ್ಯ ಎಸೆಯುವವರನ್ನು ಪ್ರಶ್ನಿಸಿದರೆ ಬೆದರಿಸುತ್ತಾರೆ ಎನ್ನುವ ಆರೋಪವೂ ಇದೆ. ಈ ಭಾಗದಲ್ಲಿ ಹಲವು ಮನೆಗಳಲ್ಲಿ ಮತ್ತು ಕಟ್ಟಡಗಳಲ್ಲಿ ಬಾಡಿಗೆಗೆ ವಾಸವಿರುವ ಜನರು ರಸ್ತೆಯ ಒಂದು ಬದಿಯಲ್ಲಿ ನಿಂತು ಮತ್ತೂಂದು ಬದಿಗೆ ಕಸ ಎಸೆಯುತ್ತಾರೆ ಎನ್ನಲಾಗಿದೆ. ಇಲ್ಲಿ ವಾಸವಿರುವ ಹೊರ ರಾಜ್ಯಗಳ ಯುವಕರಂತೂ ಕಸ ಎಸೆಯುವುದನ್ನು ಪ್ರಶ್ನಿಸಿದವರಿಗೇ ಹೊಡೆಯಲು ಮುಂದಾದ ಘಟನೆಯೂ ನಡೆದಿದೆ ಎನ್ನುತ್ತಾರೆ ಸ್ಥಳೀಯರು. ನಾಗರಿಕರೇ ಕಾರಣ
ಉಚ್ಚಿಲ – ಪಣಿಯೂರು ರಸ್ತೆ ತ್ಯಾಜ್ಯದ ಕೊಂಪೆಯಾಗಿ ಬೆಳೆಯಲು ನಾಗರಿಕರೇ ಕಾರಣ. ಜನರು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಎಸೆದು ಪರಿಸರ ಮಾಲಿನ್ಯಕ್ಕೆ ಕಾರಣರಾಗುತ್ತಿದ್ದಾರೆ. ಈ ಬಗ್ಗೆ ಸ್ಥಳೀಯಾಡಳಿತ ಯಾವುದೇ ಕಠಿನ ಕ್ರಮ ಕೈಗೊಳ್ಳದೆ ಇರುವುದರಿಂದ ಸಮಸ್ಯೆಯಾಗಿದೆ. ಗ್ರಾಮದ ಸೌಂದರ್ಯಕ್ಕೂ ಕುತ್ತಾಗಿದೆ.
-ಪಿ.ಪಿ. ಅಬ್ದುಲ್ ಖರೀಂ ಪೊಲ, ಸಾಮಾಜಿಕ ಕಾರ್ಯಕರ್ತ, ಉಚ್ಚಿಲ ವಿಲೇವಾರಿ ಘಟಕ ಪ್ರಾರಂಭಿಸಲಾಗುವುದು
ಈ ಭಾಗದಲ್ಲಿ ತ್ಯಾಜ್ಯವನ್ನು ಹಲವು ಬಾರಿ ವಿಲೇವಾರಿ ಮಾಡಲಾಗಿದೆ. ಶುಚಿಗೊಳಿಸಿದ ಒಂದೆರಡು ದಿನಗಳಲ್ಲೇ ಮತ್ತೆ ತ್ಯಾಜ್ಯ ತಂದು ಸುರಿಯುವ ಮೂಲಕ ಜನರು ಸ್ವತ್ಛ ಗ್ರಾಮದ ನಮ್ಮ ಕನಸಿಗೆ ಎಳ್ಳು ನೀರು ಬಿಡುವಂತೆ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಉತ್ಪತ್ತಿಯಾಗುವ ಕಸ – ತ್ಯಾಜ್ಯವನ್ನು ಸಂಗ್ರಹಿಸಲು ಸಮರ್ಪಕ ಜಾಗ ಇಲ್ಲದೇ ನಾವು ಒದ್ದಾಡುತ್ತಿದ್ದೇವೆ. ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ತ್ಯಾಜ್ಯ ವಿಲೇವಾರಿ ಘಟಕವನ್ನು ಪ್ರಾರಂಭಿಸಲಾಗುವುದು.
-ಕುಶಾಲಿನಿ, ಪಿಡಿಒ ಬಡಾ ಗ್ರಾ.ಪಂ.