Advertisement
ಪ್ರಧಾನ ತಂತ್ರಿ ವೇ| ಮೂ| ರಾಘವೇಂದ್ರ ತಂತ್ರಿ ಕೊರಂಗ್ರಪಾಡಿ ಮತ್ತು ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಶಾರದಾ ಮಾತೆ ಮತ್ತು ನವದುರ್ಗೆಯರ ಮೂರ್ತಿಗಳ ಶೋಭಾ ನಡೆಯಿತು. ಉಚ್ಚಿಲದಿಂದ ಹೊರಟ ಶೋಭಾಯಾತ್ರೆಯು ಪಡುಬಿದ್ರಿ, ಹೆಜಮಾಡಿ, ಉಚ್ಚಿಲ, ಮೂಳೂರು, ಕೊಪ್ಪಲಂಗಡಿ ಮಾರ್ಗವಾಗಿ ಕಾಪುವಿಗೆ ಬಂದು ಗುರುವಾರ ಮುಂಜಾನೆ ಸಮುದ್ರ ಮಧ್ಯದಲ್ಲಿ ಕೃತಕವಾಗಿ ನಿರ್ಮಿಸಲಾದ ಸಾಂಸ್ಕೃತಿಕ ನಗರದಲ್ಲಿ ಮೂರ್ತಿಗಳನ್ನು ಜಲಸ್ತಂಭನಗೊಳಿಸಲಾಯಿತು.
ಹತ್ತಾರು ವಿಧದ ಟ್ಯಾಬ್ಲೋಗಳು ಶೋಭಾಯಾತ್ರೆಗೆ ಮೆರುಗು ನೀಡಿದವು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೇರಳ ಮತ್ತು ತಮಿಳುನಾಡಿನಿಂದ ತರಿಸಲಾದ ಪೌರಾಣಿಕ ಹಿನ್ನೆಲೆ ಮತ್ತು ಸಾಂಸ್ಕೃತಿಕ ಹಿನ್ನೆಲೆ ಸಾರುವ ಟ್ಯಾಬ್ಲೋಗಳು, ನವದುರ್ಗೆಯರ ಟ್ಯಾಬ್ಲೋ, ಮೊಗವೀರ ಕುಲಗುರು, ಮೀನುಗಾರರ ಕುಲಕಸುಬು, ಜಾಗೃತಿ ಸಂದೇಶ ನೀಡುವ ಟ್ಯಾಬ್ಲೋಗಳು, ವಿವಿಧ ಹುಲಿವೇಷ ತಂಡಗಳು, ಭಜನ ತಂಡಗಳು, ಡೋಲು, ವಾದ್ಯ, ಬ್ಯಾಂಡ್, ನಾಸಿಕ್ ಬ್ಯಾಂಡ್, ಸಾವಿರಾರು ಬೈಕ್‌ಗಳ ಸಹಿತವಾಗಿ ಶೋಭಾಯಾತ್ರೆ ನಡೆಯಿತು. ಪಡುಬಿದ್ರಿ, ಹೆಜಮಾಡಿ, ಉಚ್ಚಿಲ, ಕೊಪ್ಪಲಂಗಡಿ ಮತ್ತು ಕಾಪು ಬೀಚ್‌ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಹುಲಿ ವೇಷ ಕುಣಿತ ಇತ್ಯಾದಿಗಳು ವಿಶೇಷ ಮೆರುಗು ನೀಡಿದವು. ಶಿಸ್ತುಬದ್ಧ ಶೋಭಾಯಾತ್ರೆ
ಶಿಸ್ತುಬದ್ಧವಾಗಿ ನಡೆದ ಉಚ್ಚಿಲ-ಹೆಜಮಾಡಿ – ಪಡುಬಿದ್ರಿ -ಉಚ್ಚಿಲ-ಕಾಪು ವರೆಗಿನ 28 ಕಿ.ಮೀ. ವರೆಗಿನ ಶೋಭಾಯಾತ್ರೆಯಲ್ಲಿ ಸಾವಿರಾರು ಮಂದಿ ನಡೆದೇ ಪಾಲ್ಗೊಂಡಿದ್ದರು. ಕಾಪು ಬೀಚ್‌ನಲ್ಲಿ ನಡೆದ ಜಲಸ್ತಂಭನ ಸಂದರ್ಭ ಲಕ್ಷದ ಸನಿಹ ಜನರಿದ್ದರು. ಶಿಸ್ತುಬದ್ಧ ಶೋಭಾಯಾತ್ರೆ ನಡೆದಿದ್ದು ಹಿರಿಯ ಪೊಲೀಸ್ ಅಧಿಕಾರಿಗಳೂ ಸೇರಿದಂತೆ ನೂರಾರು ಸಿಬಂದಿ ಬಂದೋಬಸ್ತ್ ಏರ್ಪಡಿಸಿದ್ದರು.
Related Articles
Advertisement
ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆಶಾರದಾ ಮಾತೆ ಮತ್ತು ನವದುರ್ಗೆಯರ ಮೂರ್ತಿಗಳನ್ನು ಇರಿಸಿದ ವಾಹನಗಳಿಗೆಹೆಲಿಕಾಪ್ಟರ್ ಮೂಲಕ 9 ಬಣ್ಣಗಳ ಪುಷ್ಪ ದಳಗಳೊಂದಿಗೆ ಪುಷ್ಪಾìರ್ಚನೆಗೈಯ್ಯಲಾಯಿತು.