Advertisement

ಯುಸಿಸಿ: ಬುಡಕಟ್ಟು ಜನಾಂಗ ಹೊರಕ್ಕೆ? ಸಂಸದೀಯ ಸಮಿತಿ ಸಭೆಯಲ್ಲಿ ಸುಶೀಲ್‌ ಮೋದಿ ಆಗ್ರಹ

12:41 AM Jul 04, 2023 | Team Udayavani |

ಹೊಸದಿಲ್ಲಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ)ಯನ್ನು ಜಾರಿ ಮಾಡಲು ಕೇಂದ್ರ ಸರಕಾರ ಉತ್ಸುಕವಾಗಿರುವಂತೆಯೇ, ಸೋಮವಾರ ಸಂಸದೀಯ ಸ್ಥಾಯೀ ಸಮಿತಿಯ ಮಹತ್ವದ ಸಭೆ ನಡೆದಿದೆ. ಯುಸಿಸಿ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಕಾನೂನು ಆಯೋಗ ಮುಂದಾದ ಬಳಿಕ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ.

Advertisement

ಸಭೆಯಲ್ಲಿ ಸಮಾನ ನಾಗರಿಕ ಸಂಹಿತೆ(ಯುಸಿಸಿ)ಯ ವ್ಯಾಪ್ತಿಯಿಂದ ಈಶಾನ್ಯದಲ್ಲಿರುವವರು ಸೇರಿದಂತೆ ಬುಡಕಟ್ಟು ಜನಾಂಗಗಳನ್ನು ಹೊರಗಿಡುವ ಕುರಿತು ಕಾನೂನಿಗೆ ಸಂಬಂಧಿಸಿದ ಸಂಸದೀಯ ಸಮಿತಿ ಅಧ್ಯಕ್ಷ, ಬಿಜೆಪಿ ಸಂಸದ ಸುಶೀಲ್‌ ಮೋದಿ ಒಲವು ವ್ಯಕ್ತಪಡಿಸಿದ್ದಾರೆ. ವಿವಾದಾತ್ಮಕ ವಿಚಾರ ದಲ್ಲಿ ಜನಾಭಿಪ್ರಾಯ ಸಂಗ್ರಹಿಸಲು ಕಾನೂನು ಆಯೋಗ ಇದೇ ಸಮಯದಲ್ಲಿ ಮುಂದಾಗಿದ್ದೇಕೆ ಎಂದು ವಿಪಕ್ಷಗಳು ಪ್ರಶ್ನಿಸಿವೆ. ಮುಂಬರುವ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಕೊಂಡೇ ಬಿಜೆಪಿ ಈ ಪ್ರಯತ್ನಕ್ಕೆ ಮುಂದಾ ಗಿದೆ ಎಂದು ಕಾಂಗ್ರೆಸ್‌, ಡಿಎಂಕೆ ಸೇರಿದಂತೆ ಹಲವು ವಿಪಕ್ಷಗಳ ಸದಸ್ಯರು ನೇರವಾಗಿ ಆರೋಪ ಮಾಡಿದ್ದಾರೆ. ಸಂಸದೀಯ ಸಮಿತಿಯ 31 ಸದಸ್ಯರ ಪೈಕಿ 17 ಮಂದಿ ಸಭೆಯಲ್ಲಿ ಪಾಲ್ಗೊಂಡಿ ದ್ದರು ಎಂದು ಹೇಳಲಾಗಿದೆ.

ಇದೇ ವೇಳೆ ಜುಲೈ 20ರಿಂದ ಆರಂಭವಾಗಲಿರುವ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಯುಸಿಸಿ ವಿಧೇಯಕ ಮಂಡನೆಯಾಗುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next