Advertisement
ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ((MD, CEO) ಎ. ಮಣಿಮೇಖಲೈ ಅವರು ಹೊಸದಿಲ್ಲಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ದಾಖಲೆಯ 1,712 ಕೋಟಿ ರೂ.ಗಳ ಲಾಭಾಂಶದ ಚೆಕ್ ಅನ್ನು ಹಸ್ತಾಂತರಿಸಿದರು. ಇದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು ನೀಡಿರುವ ಸರ್ವಾಧಿಕ ಲಾಭಾಂಶವಾಗಿದೆ.
2022ರ ಜೂನ್ 2 ರಂದು ಸರಕಾರವು ಎ. ಮಣಿಮೇಖಲೈ ಅವರನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಎಂಡಿ ಮತ್ತು ಸಿಇಒ ಆಗಿ ಮೂರು ವರ್ಷಗಳ ಅವಧಿಗೆ ನೇಮಿಸಿತು. ಅವರ ನೇಮಕದ ಬಳಿಕ ಒಂದು ವರ್ಷದೊಳಗೆ ಬ್ಯಾಂಕಿನ ಪ್ರಗತಿಯ ವೇಗಕ್ಕೆ ಹೊಸ ಆಯಾಮವನ್ನು ನೀಡಿದರು. ಮೇ 2023ರ ಮಾರ್ಚ್ ತ್ರೈಮಾಸಿಕದಲ್ಲಿ ಒಟ್ಟು ಲಾಭಾಂಶದಲ್ಲಿ ಶೇ. 80.57 ಜಿಗಿತವನ್ನು ಕಂಡು 2,811 ಕೋಟಿ ರೂಪಾಯಿ ನಿವ್ವಳ ಲಾಭ ದಾಖಲಿಸಿತು. ರಿಟನ್-ಆಫ್ ಖಾತೆಗಳಿಂದ ದೊಡ್ಡ ಪ್ರಮಾಣದ ಬಾಕಿ ಸಾಲ ವಸೂಲಾತಿಯೇ ಇದಕ್ಕೆ ಮೂಲ ಕಾರಣವಾಗಿದೆ. ಒಂದು ವರ್ಷದ ಹಿಂದೆ 5,265 ಕೋಟಿ ರೂ. ಇದ್ದ ಬ್ಯಾಂಕಿನ ನಿವ್ವಳ ಲಾಭವು 2022-23ರಲ್ಲಿ 8,512 ಕೋಟಿ ರೂ.ಗೆ ಏರಿದೆ. ಕಳೆದ ವರ್ಷ ರಿಟನ್-ಆಫ್ ಖಾತೆಗಳಿಂದ ವಸೂಲಾತಿ 294 ಕೋಟಿ ರೂ. ಆಗಿದ್ದರೆ, ಈ ಸಾಲಿನಲ್ಲಿ 2,954 ಕೋಟಿ ರೂ. ವಸೂಲಾಗಿದೆ.
Related Articles
ಆರ್ಥಿಕ ವರ್ಷ 2023ರಲ್ಲಿ ಬ್ಯಾಂಕ್ 15,000 ಕೋಟಿ ರೂಪಾಯಿಗಳ ಸಾಲ ವಸೂಲಾತಿಯ ಗುರಿ ಹೊಂದಿತ್ತು. ಆದರೆ 20,000 ಕೋಟಿಗೂ ಹೆಚ್ಚು ಸಂಗ್ರಹಿಸುವ ಮೂಲಕ ಗುರಿಯನ್ನು ಮೀರಿದ ಅದ್ಭುತ ಸಾಧನೆಗೈದಿದೆ ಎಂದು ಮಣಿಮೇಖಲೈ ತಿಳಿಸಿದ್ದಾರೆ.
Advertisement
ವೃತ್ತಿ ಜೀವನದ ಯಶಸ್ಸುವಿವಿಧ ಸರಕಾರಿ ಬ್ಯಾಂಕ್‌ಗಳಲ್ಲಿ ವಿವಿಧ ಸ್ತರದ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ವೃತ್ತಿಪರ ಬ್ಯಾಂಕರ್ ಆಗಿರುವ ಎ. ಮಣಿಮೇಖಲೈ ಅವರು ಬೆಂಗಳೂರು ವಿವಿಯಿಂದ ಎಂಬಿಎ ಮತ್ತು ಮುಂಬಯಿಯ ನಸೀì ಮೊಂಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್(NMIMS)ನಿಂದ ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಡಿಪ್ಲೊಮಾವನ್ನು ಹೊಂದಿದ್ದಾರೆ. ಅವರು ಬ್ಯಾಂಕಿಂಗ್ ವೃತ್ತಿಜೀವನ ವನ್ನು ಹಿಂದಿನ ವಿಜಯಾ ಬ್ಯಾಂಕ್‌ನಲ್ಲಿ 1988ರಲ್ಲಿ ಅಧಿಕಾರಿಯಾಗಿ ಪ್ರಾರಂಭಿಸಿದರು. ಅವರು ಅಲ್ಪಾವಧಿ ಯಲ್ಲಿಯೇ ಬ್ಯಾಂಕಿನ ಜನರಲ್ ಮ್ಯಾನೇಜರ್ ಆಗಿದ್ದಲ್ಲದೆ, ಬೆಂಗಳೂರು ಉತ್ತರ ವಲಯದ ಮುಖ್ಯಸ್ಥರೂ ಆಗಿದ್ದರು.ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರುವ ಮೊದಲು, ಅವರು ಕೆನರಾ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದರು.