Advertisement

ಆನ್ ಲೈನ್ ಫುಡ್ ಡೆಲಿವರಿ ಸಂಸ್ಥೆ ಊಬರ್ ಈಟ್ಸ್ “ಜೊಮ್ಯಾಟೋ” ತೆಕ್ಕೆಗೆ; 2500 ಕೋಟಿ ರೂ. ಡೀಲ್

10:15 AM Jan 22, 2020 | Nagendra Trasi |

ನವದೆಹಲಿ: ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಊಬರ್ ಈಟ್ಸ್ ಆನ್ ಲೈನ್ ಊಟೋಪಚಾರ ಸೇವೆ ಒದಗಿಸುವ ಸಂಸ್ಥೆಯಾದ ಊಬರ್ ಈಟ್ಸ್ ಅನ್ನು ತನ್ನ ಭಾರತದ ಪ್ರತಿಸ್ಪರ್ಧಿ ಜೊಮ್ಯಾಟೊಗೆ ಮಾರಾಟ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದೆ.

Advertisement

ಜೊಮ್ಯಾಟೊ ಭಾರತೀಯ ಆಹಾರ ಸರಬರಾಜು ಮೊಬೈಲ್ ಅಪ್ಲಿಕೇಶನ್ ಆಗಿದ್ದು, ಗುರ್ಗಾಂವ್, ಹರಿಯಾಣದಲ್ಲಿ ಕೇಂದ್ರ ಕಚೇರಿ ಹೊಂದಿದ್ದು, 24 ದೇಶಗಳಲ್ಲಿ ತನ್ನ ಸೇವೆಯನ್ನು ಒದಗಿಸುತ್ತಿದೆ. ಇದೀಗ ಊಬರ್ ಈಟ್ಸ್ ಅನ್ನು ಜೊಮ್ಯಾಟೋಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.

ಊಬರ್ ಈಟ್ಸ್ ಅನ್ನು ಜೊಮ್ಯಾಟೊ ಸಂಸ್ಥೆಗೆ 350 ಮಿಲಿಯನ್ (ಅಂದಾಜು 2,500 ಕೋಟಿ) ಡಾಲರ್ ಗೆ ಮಾರಾಟ ಮಾಡಿರುವುದಾಗಿ ಪ್ರಕಟಣೆ ತಿಳಿಸಿದ್ದು, ಈ ನಿಟ್ಟಿನಲ್ಲಿ ಜೊಮ್ಯಾಟೊ ಅತೀ ದೊಡ್ಡ ಆನ್ ಲೈನ್ ಫುಡ್ ಡೆಲಿವರಿ ಸಂಸ್ಥೆಯಾಗಲಿದೆ. ಅಲ್ಲದೇ ಜೊಮ್ಯಾಟೋ ಮತ್ತು ಸ್ವಿಗ್ಲಿ ನಡುವೆ ಸ್ಪರ್ಧೆ ನಡೆಯಲಿದೆ ಎಂದು ವರದಿ ವಿವರಿಸಿದೆ.

ಒಪ್ಪಂದದ ಪ್ರಕಾರ ಭಾರತದಲ್ಲಿ ಊಬರ್ ಈಟ್ಸ್ ಅಪ್ಲಿಕೇಶನ್ ಇನ್ಮುಂದೆ ಗ್ರಾಹಕರಿಗೆ ಲಭ್ಯವಾಗುವುದಿಲ್ಲ..ಊಬರ್ ಈಟ್ಸ್ ಅಪ್ಲಿಕೇಶನ್ ಲಾಗಿನ್ ಆದಲ್ಲಿ ಅದು ಜೊಮ್ಯಾಟೋಗೆ ಲಿಂಕ್(ಸಂಪರ್ಕ) ಆಗಲಿದೆ.  ಇದರಿಂದಾಗಿ ಊಬರ್ ಈಟ್ಸ್ ನ ಸುಮಾರು 70 ಸಾವಿರ ಡೆಲಿವರಿ ಪಾರ್ಟನರ್ಸ್ಸ್ ಜೊಮ್ಯಾಟೋಗೆ ಸೇರ್ಪಡೆಯಾಗಲಿದ್ದಾರೆ. ಅಷ್ಟೇ ಅಲ್ಲ ಊಬರ್ ಈಟ್ಸ್ ಇಂಡಿಯಾದ 200 ಮಂದಿ ಉದ್ಯೋಗಿಗಳಿಗೆ ಈ ಒಪ್ಪಂದದ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next