ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಶುಕ್ರವಾರ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು.
ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯವು ಶುಕ್ರವಾರದಿಂದ 40 ದಿನಗಳ ಕಾಲ ಅಧ್ಯಕ್ಷರ ನಿಧನಕ್ಕೆ ಅಧಿಕೃತ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.
ಶುಕ್ರವಾರದಿಂದ ಮೂರು ದಿನಗಳ ಕಾಲ ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಕೆಲಸವನ್ನು ನಿಲ್ಲಿಸಬೇಕು ಎಂದು ದುಬೈ ಮಾಧ್ಯಮ ಕಚೇರಿ ಸ್ಪಷ್ಟಪಡಿಸಿದೆ.
ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು 2004ರ ನವೆಂಬರ್ 3ರಿಂದ ಯುಎಇ ನ ಅಧ್ಯಕ್ಷರಾಗಿ ಮತ್ತು ಅಬುಧಾಬಿಯ ಆಡಳಿತಗಾರನಾಗಿದ್ದರು.
Related Articles
ಇದನ್ನೂ ಓದಿ:ಕೌತುಕ ಮತ್ತು ಆತಂಕಕ್ಕೆ ಕಾರಣವಾದ ಲೋಹದ ಚೆಂಡಿನಂತಹ ವಸ್ತುಗಳು !
ಅವರು ತಮ್ಮ ತಂದೆ ದಿವಂಗತ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರ ಉತ್ತರಾಧಿಕಾರಿಯಾಗಿ ಆಡಳಿತ ನಡೆಸಿದ್ದರು. 1971 ರಲ್ಲಿ ಯುಎಇಯ ಮೊದಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಶೇಖ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರು ನವೆಂಬರ್ 2, 2004 ರಂದು ನಿಧನರಾದರು.
1948 ರಲ್ಲಿ ಜನಿಸಿದ ಶೇಖ್ ಖಲೀಫಾ ಯುಎಇಯ ಎರಡನೇ ಅಧ್ಯಕ್ಷ ಮತ್ತು ಅಬುಧಾಬಿ ಎಮಿರೇಟ್‌ನ 16 ನೇ ಆಡಳಿತಗಾರರಾಗಿದ್ದರು.