Advertisement
ಈವರೆಗೆ ಯಾರೇ ಇಲ್ಲಿ ಕೆಲಸಕ್ಕೆ ಸೇರಬೇಕಿದ್ದರೂ ಆ ಕಂಪ ನಿಯ ಪ್ರಾಯೋಜಕತ್ವದ ಮೂಲಕ ಸೀಮಿತ ಅವಧಿಯ ವೀಸಾ ನೀಡಲಾಗುತ್ತಿತ್ತು. ದೀರ್ಘಾವಧಿ ವಾಸಕ್ಕೆ ಅನುಮತಿ ಇರಲಿಲ್ಲ. ಆದರೆ ಈಗ ವಿತರಿಸಲಾಗುವ ಹೊಸ “ಗ್ರೀನ್ ವೀಸಾ’ದ ಅನ್ವಯ ಕಂಪನಿಯ ಪ್ರಾಯೋಜಕತ್ವ ಇಲ್ಲದೆಯೇ ಉದ್ಯೋಗ ಮಾಡಬಹುದು. ಜತೆಗೆ, ತಮ್ಮ ಹೆತ್ತವರು, ಮಕ್ಕಳಿಗೆ 25 ವರ್ಷಗಳ ಕಾಲ ಪ್ರಾಯೋಜಕತ್ವ ನೀಡಬಹುದು. ಉನ್ನತ ಕೌಶಲ್ಯ ಹೊಂದಿರುವವರು, ಹೂಡಿಕೆದಾರರು, ಉದ್ಯಮಿಗಳು, ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ.
ಕಠಿಣ ನಿಯಮ ಸಡಿಲಿಕೆ:
ಹೆಚ್ಚು ಹೆಚ್ಚು ವಿದೇಶಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕಠಿಣ ವಸತಿ ಕಾನೂನುಗಳನ್ನೂ ಯುಎಇ ಸಡಿಲಿಸಿದೆ. ಈವರೆಗೆ ಉದ್ಯೋಗ ಕಳೆದು ಕೊಂಡ ವ್ಯಕ್ತಿ ಕೂಡಲೇ ತನ್ನ ದೇಶಕ್ಕೆ ವಾಪಸಾಗಬೇಕಿತ್ತು. ಇನ್ನು ಮುಂದೆ ಕೆಲಸ ಕಳೆದುಕೊಂಡ ವರು ಹೊಸ ಉದ್ಯೋಗ ಹುಡುಕುವವರೆಗೂ ಅಲ್ಲಿರಲು ಅವ ಕಾಶವಿದೆ. ಜತೆಗೆ, ಹೆತ್ತವರ ಜೊತೆ ವಾಸವಿರುವ 15 ವರ್ಷ ಮೇಲ್ಪಟ್ಟ ಯುವಕರು ಅಲ್ಲೇ ಕೆಲಸಕ್ಕೆ ಸೇರಲು, ವಿಧವೆಯರು ಹಾಗೂ ವಿಚ್ಛೇದಿತ ದಂಪತಿ ವೀಸಾ ನಿರ್ಬಂಧವಿಲ್ಲದೆ ದೀರ್ಘ ಕಾಲ ಅಲ್ಲಿರಲು ಅನುಮತಿ ನೀಡಲಾಗಿದೆ. ದೇಶದ ಅರ್ಥ ವ್ಯವಸ್ಥೆ ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ವಿದೇಶಿ ಹೂಡಿಕೆಗೆ ಉತ್ತೇಜನ ನೀಡಲು ನಿರ್ಧರಿಸಿದೆ ಎಂದು ವಿತ್ತ ಸಚಿವ ಅಬ್ದುಲ್ಲಾ ಬಿನ್ ತೋಕ್ ಭಾನುವಾರ ತಿಳಿಸಿದ್ದಾರೆ.