Advertisement

ಭಾರತದಲ್ಲಿ ಕೋವಿಡ್ ಹೆಚ್ಚಳ : 10 ದಿನ ವಿಮಾನ ಹಾರಾಟ ನಿಲ್ಲಿಸಿದ ಯುಎಇ  

09:01 PM Apr 22, 2021 | Team Udayavani |

ನವದೆಹಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಏಪ್ರಿಲ್ 25 ರಿಂದ ಮೇ 3 ರವರೆಗೆ (10 ದಿನ) ಭಾರತದಿಂದ ವಿಮಾನಗಳ ಹಾರಾಟವನ್ನು ರದ್ದುಪಡಿಸುವುದಾಗಿ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಪ್ರಕಟಿಸಿದೆ.

Advertisement

ಗುರುವಾರ ಈ ಬಗ್ಗೆ ತಿಳಿಸಿರುವ ಯುಎಇ ಭಾರತದಿಂದ ಪ್ರಯಾಣಿಕರು ಬೇರೆ ರಾಷ್ಟ್ರಗಳ ಮೂಲಕ ಯುಎಇ ಪ್ರವೇಶಿಸುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಪ್ರಯಾಣಿಕರು ಇತರೆ ರಾಷ್ಟ್ರಗಳಲ್ಲಿ 14 ದಿನಗಳ ವಾಸ್ತವ್ಯ ಹೂಡಿದ್ದರೆ, ತದನಂತರದಲ್ಲಿ ಯುಎಇ ಪ್ರವೇಶಕ್ಕೆ ಅವಕಾಶ ಸಿಗಲಿದೆ.

ಉಭಯ ರಾಷ್ಟ್ರಗಳ ನಡುವೆ ಕಾರ್ಗೊ ವಿಮಾನಗಳು ಹಾಗೂ ಯುಎಇನಿಂದ ಭಾರತಕ್ಕೆ ಬಂದಿಳಿಯುವ ವಿಮಾನಗಳ ಮೇಲೆ ನಿರ್ಬಂಧ ಇರುವುದಿಲ್ಲ. ಯುಎಇ ನಾಗರಿಕರು, ರಾಜತಾಂತ್ರಿಕ ಪ್ರತಿನಿಧಿಗಳು, ಸರ್ಕಾರದ ಪ್ರತಿನಿಧಿಗಳು ಹಾಗೂ ಉದ್ಯಮಿಗಳ ವಿಮಾನಗಳಿಗೆ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ. ಆ ಎಲ್ಲ ವರ್ಗದ ಪ್ರಯಾಣಿಕರು ಯುಎಇಗೆ ಬಂದಿಳಿಯುವ ದಿನದಂದು ಪಿಸಿಆರ್ ಪರೀಕ್ಷೆಗೆ ಒಳಗಾಗಬೇಕು. ಕಡ್ಡಾಯವಾಗಿ 10 ದಿನಗಳು ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next