ಮುಂಬಯಿ: ಯುಎಇಯ ಶಾರ್ಜಾದಲ್ಲಿ ನಕಲಿ ಮಾದಕವಸ್ತು ಪ್ರಕರಣದಲ್ಲಿ ಬಂಧಿಸಲ್ಪಟ್ಟ ನಾಲ್ಕು ತಿಂಗಳ ನಂತರ ಬಾಲಿವುಡ್ ನಟಿ ಕ್ರಿಸನ್ ಪಿರೇರಾ ಖುಲಾಸೆಯಾಗಿದ್ದು, ಶಾರ್ಜಾ ಜೈಲಿನಿಂದ ಬಿಡುಗಡೆಯಾಗಿ ಗುರುವಾರ ಮುಂಬೈಗೆ ಮರಳಿದ್ದಾರೆ. ಎಪ್ರಿಲ್ 1 ರಂದು ಅವರನ್ನು ಬಂಧಿಸಲಾಗಿತ್ತು.
ನಾವು ಅರ್ಜಿಯನ್ನು ತೆಗೆದುಕೊಂಡು ಎಫ್‌ಐಆರ್ ದಾಖಲಿಸಿದ್ದೇವೆ ಮತ್ತು ಅದರ ಮೇಲೆ ನಾವು ತನಿಖೆ ನಡೆಸಿದ್ದೇವೆ. ಆಕೆಯೊಂದಿಗೆ ಪೈಪೋಟಿ ಹೊಂದಿದ್ದ ಮೂವರು ಆಕೆಗೆ ಡ್ರಗ್ಸ್ ಹಾಕಿ ನೆನಪಿನ ಕಾಣಿಕೆಯನ್ನು ನೀಡಿರುವುದು ಕಂಡುಬಂದಿದೆ ಎಂದು ಮುಂಬೈ ಡಿಸಿಪಿ ರಾಜ್ ತಿಲಕ್ ರೌಶನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಟ್ರೋಫಿಯಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಪಿರೇರಾ ಅವರನ್ನು ಯುಎಇಯ ಶಾರ್ಜಾಕ್ಕೆ ಕಳುಹಿಸಿದ್ದ ಆರೋಪದ ಮೇಲೆ ಮುಂಬೈ ಅಪರಾಧ ವಿಭಾಗದ ಪೊಲೀಸರು ಬೇಕರ್ ಆಂಥೋನಿ ಪಾಲ್ ಮತ್ತು ಆತನ ಸಹಚರ ರಾಜೇಶ್ ಬಭೋಟೆ ಅಲಿಯಾಸ್ ರವಿಯನ್ನು ಬಂಧಿಸಿದ್ದಾರೆ.
ಕ್ರಿಸಾನ್‌ರನ್ನು ಆಡಿಷನ್‌ನ ಕಾರಣಕ್ಕಾಗಿ ಶಾರ್ಜಾಕ್ಕೆ ಕಳುಹಿಸಲಾಯಿತು. ವಿಮಾನ ಹತ್ತುವ ಸ್ವಲ್ಪ ಮೊದಲು, ರವಿ ಆಕೆಗೆ ಡ್ರಗ್ಸ್ ತುಂಬಿದ ಟ್ರೋಫಿಯನ್ನು ನೀಡಿದ್ದ, ಅದೇ ಟ್ರೋಫಿಯನ್ನು ಇತರ ಸಂತ್ರಸ್ತರಲ್ಲಿ ಒಬ್ಬರಾದ ರಿಷಿಕೇಶ್ ಪಾಂಡ್ಯ ಅವರು ಒಯ್ಯಲು ನಿರಾಕರಿಸಿದರು. ಟ್ರೋಫಿಯು ಆಡಿಷನ್ ಪ್ರಾಪ್‌ನ ಭಾಗವಾಗಿದೆ ಎಂದು ಆಕೆಗೆ ತಿಳಿಸಲಾಯಿತು. ಆದರೆ ಎ 1 ರಂದು ಶಾರ್ಜಾಕ್ಕೆ ಬಂದಿಳಿದ ವೇಳೆ ಆಕೆಯನ್ನು ಅಧಿಕಾರಿಗಳು ಬಂಧಿಸಿ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದಿದ್ದರು.
ಆಕೆ ಡ್ರಗ್ಸ್ ಸೇವಿಸಿಲ್ಲ, ಈ ಪಿತೂರಿಯಲ್ಲಿ ಕೆಲವರ ಪಾತ್ರವಿದೆ ಹಾಗಾಗಿ ಆಕೆಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಕೆಯ ತಾಯಿ ಮುಂಬಯಿ ಪೊಲೀಸರಿಗೆ ದೂರು ನೀಡಿದ್ದಾರೆ.