Advertisement
ಅದರಲ್ಲೂ ಸಹಸ್ರಾರು ಮಂದಿ ಭಾರತೀಯರ ಪಾಲಿಗೆ ಇದು ಅಕ್ಷರಶಃ ದೀಪಾವಳಿ ಕೊಡುಗೆ . ಗೋಲ್ಡನ್ ವೀಸಾ ಪಡೆದವರು ಪತ್ನಿ, ಮಕ್ಕಳೊಂದಿಗೆ ಯುಎಇ ನೆಲದಲ್ಲಿ 10 ವರ್ಷ ವಾಸವಿರಬಹುದು.
ಗೋಲ್ಡನ್ ವೀಸಾ ಪಡೆಯಲು ಯುಎಇ ಸರಕಾರವು ವಿವಿಧ ವೃತ್ತಿ, ವಿದ್ಯಾಭ್ಯಾಸ, ಕೌಶಲ ಆಧರಿಸಿ ಕೆಲವು ಅತ್ಯುನ್ನತ ಅರ್ಹತೆಗಳನ್ನೇ ಮುಂದಿಟ್ಟಿದೆ. ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಪಿಎಚ್‌ಡಿ ಪದವೀಧರರು: ಪಿಎಚ್‌ಡಿ ಪದವಿ ಹೊಂದಿ ಉದ್ಯೋಗದಲ್ಲಿರುವವರು ಗೋಲ್ಡನ್ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಇವರು ಯುಎಇ ನಿಗದಿಪಡಿಸಿದ ಜಗತ್ತಿನ ಟಾಪ್ 500 ವಿ.ವಿ.ಗಳಲ್ಲಿ ಪಿಎಚ್‌ಡಿ ಪೂರೈಸಿರಬೇಕು.
Related Articles
Advertisement
ಎಂಜಿನಿಯರ್‌ಗಳು: ತಾಂತ್ರಿಕ ಪ್ರತಿಭೆಗಳಿಗೂ ಯುಎಇ ಗೋಲ್ಡನ್ ವೀಸಾ ಮೂಲಕ ರತ್ನಗಂಬಳಿ ಹಾಸಿದೆ. ಕಂಪ್ಯೂಟರ್, ಎಲೆಕ್ಟ್ರಾನಿಕ್ಸ್, ಪ್ರೋಗ್ರಾಮಿಂಗ್, ಎಲೆಕ್ಟ್ರಿಕಲ್ಸ್, ಆ್ಯಕ್ಟಿವ್ ಟೆಕ್ನಾಲಜಿ, ಎಐ ಮತ್ತು ಬಿಗ್ ಡೇಟಾ ಎಂಜಿನಿಯರ್‌ಗಳೂ ಅರ್ಹತೆಯ ಪಟ್ಟಿಯಲ್ಲಿದ್ದಾರೆ.
ಹೆಚ್ಚು ಅರ್ಹರು: ಮಾನ್ಯತೆ ಪಡೆದ ವಿ.ವಿ.ಗಳಲ್ಲಿ 3.8ಕ್ಕೂ ಅತಿಹೆಚ್ಚು ಅಂಕ ಪಡೆದ, ಹೆಚ್ಚು ಅರ್ಹತೆಯುಳ್ಳ ವ್ಯಕ್ತಿಗಳಿಗೂ ಈ ವೀಸಾ ಲಭ್ಯವಿರಲಿದೆ.
ವಿಜ್ಞಾನಿಗಳು/ ಸಂಶೋಧಕರು: ವಿಶೇಷ ಸಾಧಕ ವಿಜ್ಞಾನಿ – ಸಂಶೋಧಕರೂ ಅರ್ಹರು. ಆದರೆ ವಿಜ್ಞಾನಿ ಗಳಿಗೆ ಎಮಿರೇಟ್ಸ್ ಸೈಂಟಿಸ್ಟ್ ಕೌನ್ಸಿಲ್ ನೋಂದಣಿ ಕಡ್ಡಾಯ.
ಸಂಶೋಧಕರು: ಯುಎಇ ಆರ್ಥಿಕತೆಗೆ ನೆರವಾಗುವಂಥ ಉತ್ಪನ್ನಗಳ ಸಂಶೋಧಕರಿಗೂ ಅವಕಾಶವಿದೆ. ಆದರೆ ಇವರು ವಿತ್ತ ಸಚಿವಾಲಯ ಅನುಮೋದಿಸಿದ ಪೇಟೆಂಟ್ ಹೊಂದಿರುವುದು ಕಡ್ಡಾಯ.
ಕಲಾವಿದರು: ಸಂಸ್ಕೃತಿ, ಕಲೆಯಂಥ ಸೃಜನಶೀಲ ಕ್ಷೇತ್ರಗಳ ಖ್ಯಾತ ಕಲಾವಿದರೂ ಪಟ್ಟಿಯಲ್ಲಿದ್ದಾರೆ. ಸಂಸ್ಕೃತಿ ಇಲಾಖೆಯಲ್ಲಿ ಅವರ ರಚನೆ ಗಳು ನೋಂದಾಯಿಸಲ್ಪಟ್ಟಿರಬೇಕು.
ಹೂಡಿಕೆದಾರರು: ಯುಎಇಯಲ್ಲಿ 20 ದಶಕೋಟಿ ರೂ. ಹೂಡಿಕೆ ಸಾಮರ್ಥ್ಯದ ಉದ್ಯಮಿಗಳೂ ಅರ್ಹರು.