ದುಬೈ: ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಕೂಟವನ್ನು ಯುಎಇಗೆ ಸ್ಥಳಾಂತರಿಸಬಹುದೆಂದು ಬಿಸಿಸಿಐ ಅಧಿಕೃತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಗೆ ತಿಳಿಸಿದ ಒಂದು ದಿನದ ಬಳಿಕ ಐಸಿಸಿ ಅಧಿಕೃತ ಘೋಷಣೆ ಮಾಡಿದೆ. ಈ ಬಾರಿಯ ಟಿ20 ವಿಶ್ವಕಪ್ ಯುಎಇ ಮತ್ತು ಒಮಾನ್ ನಲ್ಲಿ ನಡೆಯಲಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದಲ್ಲಿ ಕೋವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಕಾರಣ ಬಿಸಿಸಿಐ ತನ್ನ ಆಯೋಜನೆಯ ಕೂಟವನ್ನು ಅರಬ್ ದೇಶದಲ್ಲಿ ನಡೆಸಲು ಮುಂದಾಗಿದೆ. ಕೂಟ ಯುಎಇ ಮತ್ತು ಒಮಾನ್ ನಲ್ಲಿ ನಡೆದರೂ ಆಯೋಜನೆಯ ಹಕ್ಕು ಮಾತ್ರ ಬಿಸಿಸಿಐ ಬಳಿಯೇ ಇರಲಿದೆ.
ಇದನ್ನೂ ಓದಿ:ಇಂಗ್ಲೆಂಡ್-ಲಂಕಾ ಪಂದ್ಯದಲ್ಲಿ ಕಾರ್ಯ ನಿರ್ವಹಿಸಿದ್ದ ರೆಫ್ರಿಗೆ ಕೋವಿಡ್ ಪಾಸಿಟಿವ್!
ಅಕ್ಟೋಬರ್ 17ರಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ. ನವೆಂಬರ್ 14ರಂದು ಫೈನಲ್ ಪಂದ್ಯ ನಡೆಯಲಿದೆ.
ನಾಲ್ಕು ಮೈದಾನಗಳಲ್ಲಿ ಈ ಬಾರಿಯ ಕೂಟ ನಡೆಯಲಿದೆ. ಅಬುಧಾಬಿಯ ಶೇಖ್ ಜಯೇದ್ ಸ್ಟೇಡಿಯಂ, ದುಬೈ ಅಂತಾರಾಷ್ಟ್ರೀಯ ಸ್ಟೇಡುಯಂ, ಶಾರ್ಜಾ ಮತ್ತು ಒಮಾನ್ ಕ್ರಿಕೆಟ್ ಅಕಾಡಮೆ ಮೈದಾನದಲ್ಲಿ ಪಂದ್ಯಗಳು ನಡೆಯಲಿದೆ.