Advertisement

ಐಪಿಎಲ್‌ ಆತಿಥ್ಯಕ್ಕೆ ಮುಂದಾದ ಯುಎಇ

08:34 AM May 12, 2020 | Sriram |

ಹೊಸದಿಲ್ಲಿ: ಕೋವಿಡ್‌-19 ಕಾರಣದಿಂದ ಈಗಾಗಲೇ ಬಹುತೇಕ ರದ್ದುಗೊಂಡಿರುವ 2020ನೇ ಸಾಲಿನ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯಾವಳಿಯ ಆತಿಥ್ಯ ವಹಿಸಲು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಕ್ರಿಕೆಟ್‌ ಮಂಡಳಿ (ಯುಎಇ) ಮುಂದೆ ಬಂದಿದೆ. ಆದರೆ ಈಗಿನ ಸ್ಥಿತಿಯಲ್ಲಿ ಬಿಸಿಸಿಐ ಇದಕ್ಕೆ ಒಪ್ಪಿಗೆ ಸೂಚಿಸುವ ಸಾಧ್ಯತೆ ಇಲ್ಲ.

Advertisement

ಯುಎಇಗಿಂತ ಮೊದಲು ಶ್ರೀಲಂಕಾ 13ನೇ ಐಪಿಎಲ್‌ ಕೂಟವನ್ನು ನಡೆಸಲು ಉಮೇದು ತೋರಿತ್ತು. ಆದರೆ ಸರಕಾರದ ನಿರ್ಬಂಧಗಳಿಂದಾಗಿ ಬಿಸಿಸಿಐ ಲಂಕಾ ಮಂಡಳಿಯ ನಿರ್ಧಾರವನ್ನು ಸಮ್ಮತಿಸಿರಲಿಲ್ಲ. ಈಗಲೂ ಪರಿಸ್ಥಿತಿ ಬದಲಾಗದ ಕಾರಣ ಯುಎಇ ಆಹ್ವಾನವನ್ನೂ ಸ್ವೀಕರಿಸುವ ಸ್ಥಿತಿಯಲ್ಲಿ ಬಿಸಿಸಿಐ ಇಲ್ಲ.

ಜೈವಿಕ ಸುರಕ್ಷಾ ಸ್ಟೇಡಿಯಂ
“ಈ ವರ್ಷದ ಐಪಿಎಲ್‌ ಪಂದ್ಯಾವಳಿಯ ಆಯೋಜನೆಗೆ ಯುಎಇ ಮುಂದೆ ಬಂದಿದೆ. ಆದರೆ ಸದ್ಯ ವಿದೇಶ ಪ್ರಯಾಣ ನಿರ್ಬಂಧ ಇರುವುದರಿಂದ ಇದು ಸಾಧ್ಯವಾಗದ ಮಾತು. ಹೀಗಾಗಿ ನಮ್ಮ ಮಂಡಳಿ ಇದನ್ನು ಒಪ್ಪುವ ಸ್ಥಿತಿಯಲ್ಲಿಲ್ಲ’ ಎಂದು ಬಿಸಿಸಿಐ ಖಜಾಂಚಿ ಅರುಣ್‌ ಧುಮಾಲ್‌ ಹೇಳಿದ್ದಾರೆ. ಅಲ್ಲದೇ ಐಪಿಎಲ್‌ ನಡೆಯುವುದಿದ್ದರೂ ಅದು ಭಾರತದಲ್ಲೇ ನಡೆಯಬೇಕು; ಹಾಗೆಯೇ ಪ್ರಸ್ತುತ ಭಾರತದಲ್ಲಿ ಬಹಳಷ್ಟು “ಕೆಂಪು ವಲಯ’ಗಳಿರುವುದರಿಂದ ಇದಕ್ಕಾಗಿ “ಜೈವಿಕ ಸುರಕ್ಷಾ ಸ್ಟೇಡಿಯಂ’ಗಳನ್ನು ಹುಡುಕಬೇಕಿದೆ ಎಂಬುದು ಬಿಸಿಸಿಐ ನಿರ್ಧಾರವಾಗಿದೆ.

ವಿದೇಶಗಳಲ್ಲಿ
ಐಪಿಎಲ್‌ ಹೊಸತಲ್ಲ
ವಿದೇಶಗಳಲ್ಲಿ ಐಪಿಎಲ್‌ ಪಂದ್ಯಾವಳಿಯ ಯೋಜನೆ ಹೊಸತೇನಲ್ಲ. ಈಗಾಗಲೇ ಎರಡು ಸಲ ಈ ಕೂಟ ಭಾರತದ ಹೊರಗೆ ನಡೆದಿದೆ. ಮಹಾ ಚುನಾವಣೆಯ ಕಾರಣ 2014ರ 20 ಪಂದ್ಯಗಳನ್ನು ಯುಎಇಯೇ ಆಯೋಜಿಸಿತ್ತು. ಇದಕ್ಕೂ ಮೊದಲು 2009ರ ಆತಿಥ್ಯ ದಕ್ಷಿಣ ಆಫ್ರಿಕಾ ಪಾಲಾಗಿತ್ತು.ಆದರೆ ಇಂದಿನ ಪರಿಸ್ಥಿತಿ ಸಂಪೂರ್ಣ ಭಿನ್ನ. ಅಂದು ಭದ್ರತಾ ಕಾರಣದಿಂದ ಐಪಿಎಲ್‌ ಭಾರತದಾಚೆ ನಡೆದಿತ್ತು. ಇಂದು ಕೋವಿಡ್ -19 ಮಹಾ ಮಾರಿ ಇಡೀ ವಿಶ್ವವನ್ನೇ ಆವರಿಸಿದೆ. ಹೀಗಾಗಿ ಮೊದಲು ಆಟಗಾರರ ಸುರಕ್ಷತೆಗೆ ಮಹತ್ವ ನೀಡಬೇಕು ಎಂಬುದಾಗಿ ಬಿಸಿಸಿಐ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next