Advertisement

UAE: ಭಾರತದಿಂದ ಶೇ.30 ಚಿನ್ನ ಆಮದು

08:01 PM Oct 12, 2023 | Team Udayavani |

ದುಬೈ: ಸಂಯುಕ್ತ ಅರಬ್‌ ಗಣರಾಜ್ಯ (ಯುಎಇ)ದಲ್ಲಿ ಬಳಕೆ ಮಾಡುವ ಶೇ.30ರಷ್ಟು ಚಿನ್ನಾಭರಣ ಮತ್ತು ರತ್ನಗಳು ಭಾರತದಿಂದಲೇ ಆಮದು ಮಾಡಿಕೊಂಡವುಗಳು ಎಂದು ಹೊಸ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಹೀಗಾಗಿ, ಎರಡೂ ದೇಶಗಳ ನಡುವಿನ ಚಿನ್ನಾಭರಣ ಮತ್ತು ರತ್ನಗಳ ವ್ಯಾಪಾರ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ ಎಂದು ರತ್ನಗಳು ಮತ್ತು ಚಿನ್ನಾಭರಣ ರಫ್ತು ಉತ್ತೇಜನಾ ಮಂಡಳಿ ಗುರುವಾರ ಹೇಳಿದೆ.

Advertisement

ಜಗತ್ತಿನ ಹಲವು ಭಾಗಗಳಿಂದ ಪ್ರತಿ ವರ್ಷ 10.48 ಬಿಲಿಯನ್‌ ಡಾಲರ್‌ ಮೌಲ್ಯದ ಚಿನ್ನಾಭರಣ ಮತ್ತು ರತ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಪೈಕಿ ಶೇ.30 ಭಾರತದಿಂದಲೇ ನಡೆಯುತ್ತದೆ ಎಂದು ಮಂಡಳಿಯ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next