Advertisement

ಸಚಿವೆ ಸ್ಮತಿ ಇರಾನಿ ಸಾಧನೆ ಹೇಳಿದ ಐರಿಷ್‌ ತಂಡ

10:02 AM Dec 18, 2019 | Team Udayavani |

ಮುಂಬಯಿ: ಐರ್ಲೆಂಡ್‌ನ‌ ಜನಪ್ರಿಯ ಸಂಗೀತ ತಂಡ ‘ಯು2’ ಭಾರತದಲ್ಲಿ ತನ್ನ ಮೊದಲ ಕಾರ್ಯಕ್ರಮವನ್ನು ರವಿವಾರ ಮುಂಬಯಿನಲ್ಲಿ ಪ್ರಸ್ತುತ ಪಡಿಸಿತು. ‘ದ ಜೌಶಾ ಟ್ರೀ ಟೂರ್‌ 2019’ ಎಂಬ ಶೀರ್ಷಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮತಿ ಇರಾನಿ, ಲೇಖಕಿ ಅರುಂಧತಿ ರಾಯ್‌, ಕರ್ನಾಟಕದ ಪತ್ರಕರ್ತೆ ಗೌರಿ ಲಂಕೇಶ್‌ ಮತ್ತು ಇತರರ ಸಾಧನೆಗಳನ್ನು ಪ್ರಸ್ತಾಪಿಸಲಾಗಿದೆ.

Advertisement

ಇದೇ ವೇದಿಕೆಯಲ್ಲಿ ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌ ಕೂಡ ಕಾರ್ಯಕ್ರಮ ನೀಡಿದರು. ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಜಾಗೃತಿ ನಿಟ್ಟಿನಲ್ಲಿ ಹೈದರಾಬಾದ್‌ ರೇಪ್‌ ಮತ್ತು ಕೊಲೆ ಪ್ರಕರಣ ಖಂಡಿಸುವ ದೃಶ್ಯಗಳನ್ನೂ ಪ್ರದರ್ಶಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next