Advertisement

“U-Win” App:ಮಕ್ಕಳ ಆರೋಗ್ಯಕ್ಕಾಗಿ “ಯು-ವಿನ್‌”ಆ್ಯಪ್‌

12:46 AM Apr 08, 2023 | Team Udayavani |

ಹೊಸದಿಲ್ಲಿ: ಮಕ್ಕಳಿಗೆ ಮುಂದಿನ ಲಸಿಕೆ ಡೋಸ್‌ ಯಾವಾಗ ಹಾಕಿಸಬೇಕು ಎಂಬುದನ್ನು ಟ್ರ್ಯಾಕ್‌ ಮಾಡಲು “ಯು- ವಿನ್‌’ ಎಂಬ ನೂತನ ಆ್ಯಪ್‌ ಅನ್ನು ಕೇಂದ್ರ ಆರೋಗ್ಯ ಸಚಿವಾಲಯ ಪರಿಚಯಿಸುತ್ತಿದೆ. ಈ ಆ್ಯಪ್‌ನಿಂದ ಪ್ರತೀ ವರ್ಷ 2.6 ಕೋಟಿ ನವಜಾತ ಶಿಶುಗಳು ಹಾಗೂ 2.9 ಕೋಟಿ ಗರ್ಭಿಣಿಯರಿಗೆ ಉಪಯೋಗವಾಗಲಿದೆ. ಇದು “ಕೋವಿನ್‌’ ಆ್ಯಪ್‌ನ ತದ್ರೂಪ ವಾಗಿದೆ. “ಕೋವಿನ್‌’ ಆ್ಯಪ್‌ನ ಯಶಸ್ಸಿನಿಂದಾಗಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ “ಯು-ವಿನ್‌’ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ಪ್ರಾಯೋಗಿಕವಾಗಿ ಈ ಆ್ಯಪ್‌ ಬಳಸಲಾಗುತ್ತಿದೆ. ಅಲ್ಲದೇ ರಿಜಿಸ್ಟರ್‌ಗಳಿಂದ ಸಾಫ್ಟ್ವೇರ್‌ಗೆ ಡೇಟಾ ಎಂಟ್ರಿ ಕಾರ್ಯ ಪ್ರಗತಿಯಲ್ಲಿದೆ. “ಯು-ವಿನ್‌’ ಆ್ಯಪ್‌, ಯಾವ ಯಾವ ಸಮಯಕ್ಕೆ ಮಗುವಿಗೆ ಯಾವ ಲಸಿಕೆ ಹಾಕಿಸಬೇಕು ಎಂಬುದರ ಮಾಹಿತಿ ಜತೆಗೆ, ಈ ಬಗ್ಗೆ ಪೋಷಕರಿಗೆ ಮೊದಲೇ ಅಲರ್ಟ್‌ ಮಾಡು ತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next