Advertisement
ಕಷ್ಟಕರವಾಗಿತ್ತು: ಬಂಗಾರಪೇಟೆಯಿಂದ ಬೂದಿ ಕೋಟೆ ಹೋಬಳಿ ಸೇರಿದಂತೆ ಮಾಲೂರು ತಾಲೂಕಿಗೆ ಹಾದುಹೋಗುವ ಈ ಮಾರ್ಗದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿದ್ದು,ಬೂದಿಕೋಟೆ ಮುಖ್ಯ ರಸ್ತೆಗೆ ಹಾದುಹೋಗಲು ಸೇಟ್‌ಕಾಂಪೌಂಡ್ ಬಳಿ ಯೂಟರ್ನ್ ಮಾಡಲು ತೀವ್ರಕಷ್ಟಕರವಾಗಿತ್ತು.
Related Articles
Advertisement
ದಿ.ಸುರೇಶ್ ಅಂಗಡಿ ಅವರನ್ನು ನೆನೆದ ಸಂಸದ ಮುನಿಸ್ವಾಮಿ : ಬಂಗಾರಪೇಟೆ ಜನತೆಗೆ ಕೊಟ್ಟ ಮಾತಿನಂತೆ ಈ ಸಮಸ್ಯೆಯನ್ನು ಬಗೆಹರಿಸಲಾಗಿದ್ದು,ಕೇಂದ್ರರೈಲ್ವೆ ಸಹಾಯಕ ಸಚಿವರಾಗಿದ್ದ ದಿ.ಸುರೇಶ ಅಂಗಡಿಯವರ ಸಹಾಯದಿಂದ ಈ ಸಮಸ್ಯೆ ಬಗೆಹರಿದಿದೆ. ಅವರು ನಮ್ಮನಗಲಿ ದ್ದರೂಅವರುಮಾಡಿದ್ದಆದೇಶದಮೇರೆಗೆ ಸಮಸ್ಯೆ ಇತ್ಯರ್ಥವಾಗಿದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು. ಉದಯವಾಣಿಗೆ ಪ್ರತಿಕ್ರಿಯಿಸಿದ ಅವರು, ಈ ಸಮಸ್ಯೆ ಪ್ರತಿನಿತ್ಯ ಸಾವಿರಾರು ವಾಹನ ಸವಾರರಿಗೆ ಸಂಕಷ್ಟ ಎದುರಾಗಿತ್ತು. ಸ್ಥಳೀಯ ಶಾಸಕರು,ಬಿಜೆಪಿಮುಖಂಡರು ಸೇರಿದಂತೆ
ಸಾರ್ವಜನಿಕರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಮಸ್ಯೆ ಇರುವ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳನ್ನು ಕರೆಯಿಸಿ ಪರಿಶೀಲನೆ ಮಾಡಿಸಿ ಸೂಕ್ತ ಕ್ರಮ ಕೈಗೊಳ್ಳಲು ಶ್ರಮಿಸಿದ್ದರ ಫಲವಾಗಿ ಸಮಸ್ಯೆ ಬಗೆಹರಿದಿದೆ ಎಂದು ಹೇಳಿದರು.
ರೈಲ್ವೆ ಅಂಡರ್‌ಪಾಸ್ ಸಮಸ್ಯೆ ಬಗೆಹರಿಸಲಿ : ಈ ಹಿಂದೆ ರೈಲ್ವೆ ಇಲಾಖೆಯು ಅವೈಜ್ಞಾನಿಕವಾಗಿ ಬಂಗಾರಪೇಟೆ-ಕೋಲಾರ ರೈಲ್ವೆ ಮಾರ್ಗದ ಬಳಿ ವಾಹನ ಸಂಚಾರ ಮಾರ್ಗಬದಲಾವಣೆಮಾಡಿದ್ದರಿಂದ ಸಾರ್ವಜನಿಕರಿಗೆ, ಸವಾರರಿಗೆ ತೀವ್ರ ಅನಾನುಕೂಲ ವಾಗಿತ್ತು. ಸಂಸದರೊಂದಿಗೆ ರೈಲ್ವೆ ಇಲಾಖೆಯ ಅಧಿಕಾರಿ ಗಳಿಗೆ ಸಮಸ್ಯೆ ಬಗ್ಗೆ ಮನದಟ್ಟು ಮಾಡಿ ಬಗೆಹರಿಸಲು ಶ್ರಮಿಸಲಾಗಿದೆ ಎಂದು ಬಂಗಾರಪೇಟೆ ಕ್ಷೇತ್ರದ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ಉದಯವಾಣಿಗೆ ಪ್ರತಿಕ್ರಿಯಿಸಿದ ಅವರು, ರೈಲ್ವೆ ಇಲಾಖೆಯು ಸಾಮಾನ್ಯ ಜನರಿಗೆ ಅನುಕೂಲ ವಾಗುವ ರೀತಿಯಲ್ಲಿ ಕಾಮಗಾರಿ ಮಾಡುತ್ತಿಲ್ಲ. ಇನ್ಮುಂದೆ ಸ್ಥಳೀಯವಾಗಿ ಶಾಸಕರು, ಸಂಸದರಜೊತೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಬೇಕಾಗಿದ್ದು, ರೈಲ್ವೆ ಅಂಡರ್‌ಪಾಸ್‌ಗಳ ಸಮಸ್ಯೆಯನ್ನು ಬಗೆಹರಿ ಸಲು ಶ್ರಮಿಸುತ್ತಿರುವ ಸಂಸದ ಎಸ್.ಮುನಿಸ್ವಾಮಿ ಅವರಿಗೆ ಧನ್ಯವಾದಗಳು ಎಂದು ಹೇಳಿದರು.
– ಎಂ.ಸಿ.ಮಂಜುನಾಥ್