Advertisement

ರಾಜ್ಯದ ಸಂಸದರು ಬಾಯಿಗೆ ಬೀಗ ಹಾಕಿದ ಕಾರಣ ಸತತ ಅನ್ಯಾಯವಾಗುತ್ತಿದೆ: ಖಾದರ್

03:09 PM Feb 08, 2021 | Team Udayavani |

ಬೀದರ್: ರಾಜ್ಯದ ಸಂಸದರು ಬಾಯಿಗೆ ಬೀಗ ಹಾಕಿಕೊಂಡಿದ್ದರಿಂದಲೇ ಕರ್ನಾಟಕಕ್ಕೆ ಸತತವಾಗಿ ಅನ್ಯಾಯ ಆಗುತ್ತಿದೆ. ಕನ್ನಡಿಗರ ಹಿತ ಕಾಪಾಡದ ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಮಾಜಿ ಸಚಿವ, ಶಾಸಕ ಯು.ಟಿ ಖಾದರ್ ಆಗ್ರಹಿಸಿದರು.

Advertisement

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕಕ್ಕೆ ಜಿಎಸ್ ಟಿ ಮತ್ತು ಪ್ರಕೃತಿ ವಿಕೋಪದಡಿ ಹಣ ಬರಲಿಲ್ಲ. ಈಗ ಕೇಂದ್ರ ಬಜೆಟ್ ನಲ್ಲಿಯೂ ಯಾವುದೇ ಕೊಡುಗೆ ನೀಡದೆ ಅನ್ಯಾಯ ಮಾಡಲಾಗಿದೆ. ನಮ್ಮ ಸಂಸದರು ಪೇಪರ್ ನಲ್ಲಿ ಹುಲಿ, ಪ್ರಧಾನಿ ಬಳಿ ಇಲಿ ಆಗುತ್ತಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಲ್ಲ ಸಂಸದರ ಸಭೆಯನ್ನು ನಡೆಸಿ ರಾಜ್ಯಕ್ಕೆ ಏನೆಲ್ಲ ಬೇಕು ಎಂಬುದರ ಚರ್ಚೆ ನಡೆಸಿ ಬೇಡಿಕೆಗಳ ಬಗ್ಗೆ ಕೇಂದ್ರದ ಮೇಲೆ ಒತ್ತಡ ಹಾಕಲಾಗುತ್ತಿತ್ತು. ಆದರೆ, ಈಗ ಬಜೆಟ್ ಪೂರ್ವ ಸಂಸದರ ಒಂದು ಸಭೆಯೂ ನಡೆಸಲಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ಕೃಷ್ಣಗಿರಿ: ವಿಕೆ ಶಶಿಕಲಾ ಇಬ್ಬರು ಬೆಂಬಲಿಗರ ಕಾರು ಬೆಂಕಿಗಾಹುತಿ: ಏನಿದು ಘಟನೆ

ಕೇಂದ್ರ ಬಜೆಟ್ ಬಗ್ಗೆ ಮಾತನಾಡಿ, ಲೂಟ್ ಇಂಡಿಯಾ ಬಜೆಟ್ ಆಗಿದೆ. ಕೃಷಿ ಸೆಸ್ ಹೆಸರಿನಲ್ಲಿ ಸಾರ್ವಜನಿಕರ ಮೇಲೆ ತೆರಿಗೆ ಹಾಕಿ ಲೂಟಿ ಮಾಡುತ್ತಿದ್ದರೇ, ದೇಶದ ಆಸ್ತಿಗಳಾಗಿರುವ ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡಿ ಜನರನ್ನು ಉದ್ಯೋಗದಿಂದ ವಂಚಿತರಾಗಿ ಮಾಡಲಾಗುತ್ತಿದೆ ಎಂದು ಹೇಳಿದ ಖಾದರ್, ಶಿಕ್ಷಣಕ್ಕಾಗಿ ವಿದೇಶಿ ಹಣ ಬಳಕೆಗೆ ಅವಕಾಶ ನೀಡಿರುವುದು ದೇಶಕ್ಕೆ ಕಷ್ಟಕಾಲ ಬಂದಿದೆ ಎಂದರ್ಥ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ರೈತರು ನ್ಯಾಯಯುತ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ರೈತರಿಗಾಗಿ ಬೇಲಿ ಹಾಕುತ್ತಿರುವ ಸರ್ಕಾರ, ಬ್ಯಾಂಕುಗಳನ್ನು ಲೂಟಿ ಮಾಡಿ ಹೋದವರಿಗೆ ಬೇಲಿ ಹಾಕುತ್ತಿಲ್ಲ. ಅನ್ನದಾತರ ಬದಲು ಲಾಠಿ, ಬಂದೂಕನ್ನು ಗಡಿಯಲ್ಲಿ ಮನೆಗಳನ್ನು ಹೀಗಾಗಿ ಕಟ್ಟುತ್ತಿರುವ ಚೀನಾ ಸೈನಿಕರಿಗೆ ತೋರಿಸಲಿ. ರೈತರ ಗೋರಿಯ ಮೇಲೆ ಮಹಲ್ ಕಟ್ಟಲು ಹೊರಟಿದೆ. ಕೂಡಲೇ ರೈತರ ಭಾವನೆಗಳನ್ನು ಅರ್ಥ ಮಾಡಿಕೊಂಡು ಬೇಡಿಕೆಗಳನ್ನು ಈಡೇರಿಸಲಿ. ಈ ವಿಷಯದಲ್ಲಿ ಕಾಂಗ್ರೆಸ್ ಸದಾ ರೈತರ ಬೆನ್ನಿಗೆ ಇರಲಿದೆ ಎಂದು ಶಾಸಕ ಖಾದರ್ ತಿಳಿಸಿದರು.

ಇದನ್ನೂ ಓದಿ: ಪ್ರತಿಭಟನೆ ಕೈಬಿಡಿ, ಕೃಷಿ ಕಾಯ್ದೆ ತಿದ್ದುಪಡಿಗೆ ಅವಕಾಶ ಕೊಡಿ: ಪ್ರಧಾನಿ ಮೋದಿ

ಶಾಸಕ ರಹೀಮ್ ಖಾನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಪ್ರಧಾನ ಕಾರ್ಯದರ್ಶಿ ದತ್ತು ಮೂಲಗೆ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next