ಸಿಪಿಐಎಂ ಕುಂದಾಪುರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿತ್ತು. ನಾನು ಮೂಲಗೇಣಿದಾರರ ಪರವಾಗಿ ಕೆಲಸ ಮಾಡಲಾರಂಭಿಸಿದವ ಕುಂದಾಪುರದಲ್ಲಿ ಬಹುತೇಕ ನಮ್ಮ ಸಂಘಟನೆಗಳನ್ನು ಪ್ರಾರಂಭಿಸುವಲ್ಲಿ ಯಶಸ್ವಿಯಾಗಿದ್ದೆ. ಬೈಂದೂರು ಕ್ಷೇತ್ರವಾದ ಬಳಿಕ ನಮ್ಮ ಸಂಘಟನೆಗಳು ಬಹುಪಾಲು ಆ ಕ್ಷೇತ್ರದ ವ್ಯಾಪ್ತಿಗೆ ಸೇರಿದವು.
Advertisement
ಅಕ್ಷರದಾಸೋಹ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಕಟ್ಟಡ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು, ರೈತಸಂಘ ಮೊದಲಾದ ಸಂಘಟನೆಗಳು ಬೈಂದೂರಿನ 30-40 ಗ್ರಾಮಗಳಲ್ಲಿದ್ದವು. ಅಷ್ಟು ಗ್ರಾಮಗಳ ಸಂಪರ್ಕ ನಮಗಿತ್ತು. ಹಾಗಾಗಿ ಪಕ್ಷ ಹಾಗೂ ನಮ್ಮ ಕಡೆಯಿಂದ ಬೈಂದೂರು ಸ್ಪರ್ಧೆಯ ತೀರ್ಮಾನ ಮಾಡಲಾಯ್ತು.
ಪ್ರಮುಖವಾಗಿ ನಮ್ಮಲ್ಲಿ ಸಂಪನ್ಮೂಲ ಇಲ್ಲ. ನಾವು ಹಣ ಕೊಡುವುದಿಲ್ಲ, ತೆಗೆದುಕೊಳ್ಳುವುದಿಲ್ಲ. ಶ್ರೀಮಂತರ, ಭೂಮಾಲಕರ, ಮೇಲ್ವರ್ಗದವರ ದಬ್ಟಾಳಿಕೆಗೆ ನಮ್ಮ ಕಾರ್ಯಕರ್ತರು ಹೆದರಿ ಪ್ರಚಾರಕ್ಕೇ ಬರಲಿಲ್ಲ. ಮನೆ ಭೇಟಿ ನೀಡಿದಾಗಲೂ ಮತ ನೀಡುತ್ತೇವೆ, ಪ್ರಚಾರಕ್ಕೆ ಬರಲು ಕಷ್ಟ ಎನ್ನುತ್ತಿದ್ದರು. ಅಂದು ಸಂಘಟನೆಯ ಕಾರ್ಯಕರ್ತರನ್ನು ರಾಜಕೀಯವಾಗಿ ತರಬೇತಿಗೊಳಿಸುವ ತಯಾರಿಯಲ್ಲಿ ಹಿಂದುಳಿದಿದ್ದೆವು. ಸ್ಥಳೀಯವಾಗಿ ನಮ್ಮ ಕಾರ್ಯಕರ್ತರಿಗೆ ಅವರದ್ದೇ ಆದ ಅಂಜಿಕೆ ಇತ್ತು. ಜಾತಿ ನೆಲೆಯಲ್ಲಿ ನಮ್ಮವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ನಮ್ಮ ಪಕ್ಷದಲ್ಲಿ ಜಾತಿ, ಹಣ, ದಬ್ಟಾಳಿಕೆ ಇತ್ಯಾದಿಗಳಿಗೆ ಆಸ್ಪದವಿಲ್ಲ. ಹೀಗಾಗಿ ಅನಿವಾರ್ಯ ವಾಗಿ ಸೋಲಿಗೆ ಶರಣಾಗಬೇಕಾಯ್ತು. ಮರಳಿ ಯತ್ನವ ಮಾಡಲಿಲ್ಲ ಏಕೆ?
ನಾನು ಒಂದೇ ಬಾರಿ ಸ್ಪರ್ಧಿಸಿದೆ. ಅನಂತರ ಶಂಕರ್ ಸ್ಪರ್ಧಿಸಿದರು. ಈ ಬಾರಿ ಸುರೇಶ್ ಕಲ್ಲಾಗಾರ್ ಇದ್ದಾರೆ.
Related Articles
ಈಗ ಪಕ್ಷ ಸದೃಢವಾಗಿದೆ. ಅಂದಿಗೂ ಇಂದಿಗೂ ರಾಜಕೀಯ ಸ್ಥಿತಿಯಲ್ಲಿ ವ್ಯತ್ಯಾಸವಾಗಿದೆ. ನಿಜವಾಗಿ ಕೆಲಸ ಮಾಡಿದರೆ ಗೆಲ್ಲುವ ಸಾಧ್ಯತೆ ಅಧಿಕವಾಗಿದೆ. ಸೋಲಿಗೆ ಕಾರಣಗಳಿಲ್ಲ. ಸೋತ ಅನಂತರ ನಾನು ಕೈ ಕಟ್ಟಿ ಕೂತಿಲ್ಲ. ಪ್ರಸ್ತುತ ನಾನು ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ, ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯಕ್ಷ, ಕೃಷಿ ಕೂಲಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷನಾಗಿ ತೊಡಗಿಸಿಕೊಂಡಿದ್ದು ಇದರ ಪ್ರತಿಫಲ ಚುನಾವಣೆಯಲ್ಲಿ ಗೋಚರವಾಗಲಿದೆ.
Advertisement
– ಲಕ್ಷ್ಮೀ ಮಚ್ಚಿನ