Advertisement

ರಾಜ ಲವ್ಸ್‌ ರಾಧೆಗೆ ಯು/ಎ 

09:00 PM Nov 28, 2017 | Team Udayavani |

ವಿಜಯರಾಘವೇಂದ್ರ ಅಭಿನಯದ “ರಾಜ ಲವ್ಸ್‌ ರಾಧೆ’ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ವಿಭಿನ್ನವಾದ ಪ್ರೇಮ ಕಥೆ ಹೊಂದಿರುವ ಈ ಚಿತ್ರಕ್ಕೆ ರಾಜಶೇಖರ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹೆಚ್‌.ಎಲ್‌.ಎನ್‌. ರಾಜ್‌ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ವಿಜಯರಾಘವೇಂದ್ರ ಜೋಡಿಯಾಗಿ ರಾಧಿಕಾ ಪ್ರೀತಿ ಕಾಣಿಸಿಕೊಂಡಿದ್ದಾರೆ.

Advertisement

ಅವರೊಂದಿಗೆ ಶುಭಾಪುಂಜಾ, ರವಿಶಂಕರ್‌, ರಾಕೇಶ್‌ ಅಡಿಗ, ತಬಲಾನಾಣಿ, ಶೋಭರಾಜ್‌, ಭವ್ಯಾ, ಮಿತ್ರ, ಪೆಟ್ರೋಲ್‌ ಪ್ರಸನ್ನ, ಮಜಾ ಟಾಕೀಸ್‌ ಪವನ್‌, ಪ್ರತಾಪ್‌, ಕುಡಿಬಾಂಡ್‌ ರಂಗತೇಜ, ಸುನೀಲ್‌, ಮೂಗು ಸುರೇಶ್‌, ಡ್ಯಾನಿ ಕುಟ್ಟಪ್ಪ, ನಿರಂಜನ್‌ ಕುಮಾರ್‌ ದಾವಣಗೆರೆ, ಮೋಹನ್‌ ಜುನೇಜ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ವೀರ್‌ ಸಮರ್ಥ್ ಅವರ ಸಂಗೀತವಿದೆ.

ಕೆ.ಕಲ್ಯಾಣ್‌, ವಿ.ನಾಗೇಂದ್ರಪ್ರಸಾದ್‌, ಕವಿರಾಜ್‌, ವಿಜಯ್‌ಭರಮಸಾಗರ, ರಾಜಶೇಖರ್‌ ಅವರು ಗೀತೆಗಳನ್ನು ಬರೆದಿದ್ದಾರೆ. ಚಿದಾನಂದ್‌ ಅವರು ಛಾಯಾಗ್ರಹಣ ಮಾಡಿದ್ದಾರೆ. ವಿಜಯ ಭರಮಸಾಗರ ಅವರ ಸಂಭಾಷಣೆ ಚಿತ್ರಕ್ಕಿದೆ. ಕೆ.ಎಂ. ಪ್ರಕಾಶ್‌ ಸಂಕಲನ ಮಾಡಿದ್ದಾರ. ಕಲೈ ನೃತ್ಯ ನಿರ್ದೇಶನ ಮಾಡಿದ್ದಾರೆ. ಡಿಸೆಂಬರ್‌ನಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next