Advertisement

U-20 ಹೈಜಂಪ್‌:ಪೂಜಾ ರಾಷ್ಟ್ರೀಯ ದಾಖಲೆ

12:35 AM Aug 31, 2024 | Team Udayavani |

ಲಿಮಾ (ಪೆರು): ಇಲ್ಲಿ ನಡೆಯುತ್ತಿರುವ 20 ವರ್ಷ ವಯೋಮಿತಿಯ ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪೂಜಾ ಸಿಂಗ್‌ ನೂತನ ರಾಷ್ಟ್ರೀಯ ದಾಖಲೆಯೊಂದಿಗೆ ಫೈನಲ್‌ ಪ್ರವೇಶಿಸಿದ್ದಾರೆ. ಅರ್ಹತಾ ಸುತ್ತಿನಲ್ಲಿ 1.83 ಮೀ. ಜಿಗಿತದ ಸಾಧನೆಯೊಂದಿಗೆ ದಾಖಲೆ ನಿರ್ಮಿಸಿರುವ ಅವರು 9ನೇ ಸ್ಥಾನ ಪಡೆದು ಫೈನಲ್‌ಗೆ ಅರ್ಹತೆ ಪಡೆದರು.

Advertisement

ಹರಿಯಾಣದ ಫ‌ತೇಹಾಬಾದ್‌ ಜಿಲ್ಲೆಯವರಾದ 17 ವರ್ಷದ ಪೂಜಾ ಸಿಂಗ್‌, ಮಹಿಳೆಯರ ಗ್ರೂಪ್‌ “ಬಿ’ ಅರ್ಹತಾ ಸುತ್ತಿನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಕಳೆದ ವರ್ಷ ಕೊರಿಯಾದಲ್ಲಿ ನಡೆದಿದ್ದ ಏಷ್ಯನ್‌ ಯು-20 ಚಾಂಪಿಯನ್‌ಶಿಪ್‌ನಲ್ಲಿ ಅವರು 1.82 ಮೀ. ಸಾಧನೆಯೊಂದಿಗೆ ರಾಷ್ಟ್ರೀಯ ದಾಖಲೆ ಸಹಿತ ಬೆಳ್ಳಿ ಗೆದ್ದಿದ್ದರು. ಈಗ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಶನಿವಾರ ಫೈನಲ್‌ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next