Advertisement
ಶುಭ್‌ಮಾನ್ ಶತಕ: ಆರಂಭಿಕರಾದ ನಾಯಕ ಪೃಥ್ವಿ ಶಾ ಮತ್ತು ಮನ್‌ಜೋತ್ ಕಾಲ್ರ ಮೊದಲ ವಿಕೆಟಿಗೆ 89 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಭಾರತಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ ಅವರಿಬ್ಬರು 5 ರನ್ನಿನ ಅಂತರದಲ್ಲಿ ಪೆವಿಲಿಯನ್ ಸೇರಿಕೊಂಡಾಗ ಭಾರತ ಒತ್ತಡದಲ್ಲಿ ಸಿಲುಕಿತು. ಶಾ 42 ಎಸೆತಗಳಿಂದ 41 ಮತ್ತು ಮನ್ ಜೋತ್ 59 ಎಸೆತಗಳಿಂದ 47 ರನ್ ಹೊಡೆದರು.
Related Articles
ಅಂಡರ್ 19 ವಯೋಮಿತಿಯಲ್ಲಿ ಇದು ಪಾಕಿಸ್ತಾನ ವಿರುದ್ಧ ಭಾರತದ ಬಲು ದೊಡ್ಡ ಗೆಲುವು ಆಗಿದೆ. ಆಲ್‌ರೌಂಡ್ ಪ್ರದರ್ಶನ ನೀಡುವ ಮೂಲಕ ಭಾರತ ತನ್ನ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಟ್ಟಿರುವುದು ವಿಶೇಷ. ಭಾರತ ನಂತರ ಕಿರಿಯರ ವಿಶ್ವಕಪ್ ಅನ್ನು ಅತೀ ಹೆಚ್ಚು ಬಾರಿ ಗೆದ್ದಿರುವುದು ಪಾಕ್ (2 ಸಲ).
Advertisement
2012 ಸಾಧನೆ ಪುನರಾವರ್ತಿಸುತ್ತಾ?ಉನ್ಮುಕ್¤ ಚಾಂದ್ ನೇತೃತ್ವದ ಭಾರತ 2012ರಲ್ಲಿ 19 ವರ್ಷ ವಯೋಮಿತಿಯೊಳಗಿನ ವಿಶ್ವಕಪ್ ಫೈನಲ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತ್ತು. ತವರಿನಲ್ಲಿ ಆಸೀಸ್ ತಂಡವನ್ನು ಸೋಲಿಸಿದ್ದು ಭಾರತದ್ದು ದೊಡ್ಡ ಸಾಧನೆ. ಇದೀಗ ಪ್ರಶಸ್ತಿ ಹಣಾಹಣಿಯಲ್ಲಿ ಭಾರತ – ಆಸೀಸ್ ಮತ್ತೂಂದು ಸಲ ಮುಖಾಮುಖಿಯಾಗುತ್ತಿವೆ. ಅಂದಿನ ಸೋಲಿಗೆ ತಿರುಗೇಟು ನೀಡಲು ಆಸೀಸ್ ಸಿದ್ಧವಾಗಿದೆ. ದ್ರಾವಿಡ್ ಮಾರ್ಗದರ್ಶನದ ನೆರವು
ಭಾರತ ಕಿರಿಯರ ಯಶಸ್ಸಿನ ಹಿಂದೆ ಕೋಚ್ ರಾಹುಲ್ ದ್ರಾವಿಡ್ ಇದ್ದಾರೆ. ತಾನೊಬ್ಬ ಸ್ಟಾರ್ ಕ್ರಿಕೆಟಿಗ ಅನ್ನುವುದನ್ನು ಮರೆತು ಕಿರಿಯ ಕ್ರಿಕೆಟಿಗರೊಂದಿಗೆ ಅವರು ಮುಕ್ತವಾಗಿ ಬೆರೆಯುತ್ತಿರುವುದು, ಅಗತ್ಯ ಸಮಯದಲ್ಲಿ ಆಟಗಾರರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿರುವುದು ಭಾರತ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದೆ. ಭಾರತ ಹಿರಿಯರ ತಂಡದಲ್ಲಿ ಕೋಚ್ ಆಗುವ ಅವಕಾಶವಿದ್ದರೂ ಅದನ್ನು ತೊರೆದು ಕಿರಿಯ ಕ್ರಿಕೆಟಿಗರನ್ನು ಸಿದ್ಧಗೊಳಿಸುವ ಕಾಯಕದಲ್ಲಿ ದ್ರಾವಿಡ್ ನಿರತರಾಗಿರುವುದು ಪ್ರತಿಯೊಬ್ಬ ಕ್ರಿಕೆಟಿಗನಿಗೂ
ಮಾದರಿ. ಪೃಥ್ವಿ ಪಡೆಗೆ ನಗದು ಘೋಷಣೆ
ಅಂಡರ್ 19 ವಿಶ್ವಕಪ್ ಕ್ರಿಕೆಟ್ ಕೂಟದ ಫೈನಲ್ ಹಂತಕ್ಕೇರಿದ ಭಾರತೀಯ ಆಟಗಾರರಿಗೆ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಪ್ರಭಾರ ಅಧ್ಯಕ್ಷ ಸಿಕೆ ಖನ್ನಾ ಹೇಳಿದ್ದಾರೆ. ಕ್ರೈಸ್ಟ್‌ಚರ್ಚ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಭಾರತೀಯ ತಂಡಕ್ಕೆ ಅವರು ಅಭಿನಂದನೆ ಸಲ್ಲಿಸಿದರು. ಎಷ್ಟು ಹಣ ಎನ್ನುವುದು ಇನ್ನಷ್ಟೇ ಘೋಷಣೆಯಾಗಬೇಕಿದೆ. ಪ್ರಚಂಡ ನಿರ್ವಹಣೆ ನೀಡಿದ ಪೂರ್ಣ ತಂಡ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಅಭಿನಂದನೆ ಸಲ್ಲಿಸುವೆ. ಮುಂದಿನ ಪೀಳಿಗೆಗೆ ಕ್ರಿಕೆಟಿಗರನ್ನು ರೂಪಿಸುವ ನಿಟ್ಟಿಯಲ್ಲಿ ರಾಹುಲ್ ಅವರ ಕೊಡುಗೆ ಅದ್ಭುತವಾದದ್ದು. ಅವರಿಂದಾಗಿಯೇ ನಮ್ಮಲ್ಲಿ ಈಗ ಅಂಡರ್ 19 ಕ್ರಿಕೆಟಿಗರ ದೊಡ್ಡ ಪಡೆಯೇ ಇದೆ ಎಂದ ಖನ್ನಾ ತಿಳಿಸಿದರು. ಉತ್ತಮ ಗುಣಮಟ್ಟದ ಆಟದ ಜತೆ ಪಂದ್ಯದ ಎಲ್ಲ ವಿಭಾಗಗಳಲ್ಲಿ ಆಟಗಾರರು ಒಳ್ಳೆಯ ಪ್ರದರ್ಶನ ನೀಡಿದರು ಎಂದರು. ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಇದೇ ರೀತಿಯ ಬ್ಯಾಟಿಂಗ್ ಮಾಡಬೇಕು ಎಂದು ನಿರ್ಧರಿಸಿದ್ದೇನೆ. ಪಾಕ್ ವಿರುದ್ಧ ಅಗತ್ಯ ಪಂದ್ಯದಲ್ಲಿ ಮಿಂಚಿರುವುದಕ್ಕೆ ಖುಷಿಯಿದೆ. ಫೈನಲ್‌ನಲ್ಲೂ ಇದೇ ಪ್ರದರ್ಶನ ನೀಡುವ ವಿಶ್ವಾಸವಿದೆ.
● ಶುಭ್‌ಮಾನ್ ಗಿಲ್, ಪಂದ್ಯಶ್ರೇಷ್ಠ 3ನೇ ವರ್ಷದಿಂದಲೇ ಕ್ರಿಕೆಟ್ ಬಗ್ಗೆ ಮಗ ಹೆಚ್ಚು ಒಲವು ತೋರಿಸುತ್ತಿದ್ದ. ಆತ ಬೇರೆ ಯಾವುದೇ ಆಟಿಕೆಯನ್ನು ಇಷ್ಟಪಟ್ಟಿದ್ದಿಲ್ಲ. ನಿದ್ರೆಯಲ್ಲೂ ಕ್ರಿಕೆಟ್ ಬಗ್ಗೆ ಗುನುಗುತ್ತಿದ್ದ. ನಾವು ಕಳೆದ 15 ವರ್ಷಗಳಿಂದ ಆತನ ಕನಸನ್ನು ಬೆಳೆಸಿದ್ದೇವೆ.
● ಲಕ್ವಿಂದರ್ ಸಿಂಗ್, ಶುಭ್‌ಮಾನ್ ತಂದೆ ಪಾಕ್ ವಿರುದ್ಧ ಟ್ವೀಟರ್‌ನಲ್ಲಿಹರಿದಾಡಿದ ಆಯ್ದ ಜೋಕ್ಸ್
“ಸೆಮೀಸ್‌ನಲ್ಲಿ ಪಾಕ್‌ನ ವೈಯಕ್ತಿಕ ಗರಿಷ್ಠ ರನ್ 18. ಪಾಕ್ ಬ್ಯಾಟ್ಸ್‌ಮನ್‌ಗಳೆಲ್ಲ 18ರನ್‌ನೊಳಗೆ ಔಟ್ ಆಗಿ ಅಂಡರ್ 19 ಕೂಟ ಕ್ಕೆ ನಿಜವಾದ ಅರ್ಥ ನೀಡಿದ್ದಾರೆ’
● ಚೊವಿಯಾಲ್ ಪಾಕಿಸ್ತಾನ ಗಳಿಸಿದ ಒಟ್ಟಾರೆ 69 ರನ್‌ಗೆ 1 ಬಾಯ್ಲರ್ ಕೋಳಿ ಕೂಡ ಸಿಗುವುದಿಲ್ಲ’
● ಸನ್ನಿ ಗುಪಾ ಪಾಕ್ ಕ್ರಿಕೆಟಿಗರು ನೆಟ್‌ಗಿಂತ ಹೆಚ್ಚು ಬೆಡ್‌ನಲ್ಲಿ ಪ್ರ್ಯಾಕ್ಟಿಸ್ ಮಾಡಿದಂತಿದೆ’
● ತ್ರಿನಾಥ್ ನಮ್ಮ ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್, ಬ್ಯಾಟ್ಸ್‌ಮನ್‌ಗಳ ಸಮರ್ಥ ಆಟಕ್ಕೆ ಸಿಕ್ಕ ಗೆಲುವು ಇದು. ಫೈನಲ್‌ನಲ್ಲೂ ಅದ್ಭುತ ಆಟ ಸಂಘಟಿಸಲಿದ್ದೇವೆ.
● ಪೃಥ್ವಿ ಶಾ, ಭಾರತ ಕಿರಿಯರ ಕ್ರಿಕೆಟ್ ತಂಡದ ನಾಯಕ ಸ್ಕೋರ್‌ಪಟ್ಟಿ
ಅಂಡರ್ 19 ಭಾರತ
ಪೃಥ್ವಿ ಶಾ ರನೌಟ್ 41
ಮನ್‌ಜೋತ್ ಕಾಲ್ರ ಸಿ ನಜೀರ್ ಬಿ ಮೂಸಾ 47
ಶುಭ್‌ಮಾನ್ ಗಿಲ್ ಔಟಾಗದೆ 102
ಹಾರ್ವಿಕ್ ದೇಸಾಯಿ ಸಿ ಸಾದ್ ಬಿ ಇಕ್ಬಾಲ್ 20
ರಿಯಾನ್ ಪರಾಗ್ ಸಿ ನಜೀರ್ ಬಿ ಇಕ್ಬಾಲ್ 2
ಅಭಿಷೇಕ್ ಶರ್ಮ ಸಿ ನಜೀರ್ ಬಿ ಇಕ್ಬಾಲ್ 5
ಅನುಕುಲ್ ರಾಯ್ ಸಿ ನಜೀರ್ ಬಿ ಮೂಸಾ 33
ಕಮಲೇಶ್ ನಗರ್‌ಕೋಟಿ ಬಿ ಶಹೀನ್ ಅಫ್ರಿದಿ 1
ಶಿವಂ ಮವಿ ಸಿ ಮತ್ತು ಬಿ ಮೂಸಾ 10
ಶಿವ ಸಿಂಗ್ ಎಲ್‌ಬಿಡಬ್ಲ್ಯು ಬಿ ಮೂಸಾ 1
ಇಶಾನ್ ಪೊರೆಲ್ ಔಟಾಗದೆ 1 ಇತರ: 9
ಒಟ್ಟು (50 ಓವರ್‌ಗಳಲ್ಲಿ 9 ವಿಕೆಟಿಗೆ) 272
ವಿಕೆಟ್ ಪತನ: 1-89, 2-94, 3-148, 4-156, 5-166, 6-233, 7-242, 8-265, 9-267 ಬೌಲಿಂಗ್:
ಅರ್ಶದ್ ಇಕ್ಬಾಲ್ 10-0-51-3
ಮುಹಮ್ಮದ್ ಮೂಸಾ 10-0-67-4
ಶಹೀನ್ ಶಾ ಅಫ್ರಿದಿ 10-0-62-1
ಹಸನ್ ಖಾನ್ 10-0-46-0
ಮೊಹಮ್ಮದ್ ತಾಹಾ 7-0-35-0
ಅಲಿ ಜರ್ಯಾಬ್ ಆಸಿಫ್ 3-0-11-0 ಅಂಡರ್ 19 ಪಾಕಿಸ್ಥಾನ
ಇಮ್ರಾನ್ ಶಾ ಸಿ ಶಾ ಬಿ ಪೊರೆಲ್ 2
ಮುಹಮ್ಮದ್ ಝೈದ್ ಆಲಂ ಸಿ ಶಿವಂ ಬಿ ಪೊರೆಲ್ 7
ರೊಹೈಲ್ ನಜೀರ್ ಸಿ ಶುಭ್‌ಮಾನ್ ಬಿ ಪರಾಗ್ 18
ಅಲಿ ಜರ್ಯಾಬ್ ಆಸಿಫ್ ಸಿ ಶಾ ಬಿ ಪೊರೆಲ್ 1
ಅಮ್ಮದ್ ಆಲಂ ಸಿ ಶಿವಂ ಬಿ ಪೊರೆಲ್ 4
ಮೊಹಮ್ಮದ್ ತಾಹಾ ಸಿ ನಗರ್‌ಕೋಟಿ ಬಿ ಶಿವ 4
ಸಾದ್ ಖಾನ್ ಸ್ಟಂಪ್ಡ್ ದೇಸಾಯಿ ಬಿ ರಾಯ್ 15
ಹಸನ್ ಖಾನ್ ಸಿ ಶುಭ್‌ಮಾನ್ ಬಿ ಪರಾಗ್ 1
ಶಹೀನ್ ಶಾ ಅಫ್ರಿದಿ ಸಿ ಮತ್ತು ಬಿ ಶಿವ 0
ಮುಹಮ್ಮದ್ ಮೂಸಾ ಔಟಾಗದೆ 11
ಅರ್ಶದ್ ಇಕ್ಬಾಲ್ ಸಿ ಪೊರೆಲ್ ಬಿ ಶರ್ಮ 1
ಇತರ: 5 ಒಟ್ಟು (29.3 ಓವರ್‌ಗಳಲ್ಲಿ ಆಲೌಟ್) 69
ವಿಕೆಟ್ ಪತನ: 1-10, 2-13, 3-20, 4-28, 5-37, 6-41, 7-45, 8-48, 9-68 ಬೌಲಿಂಗ್:
ಶಿವಂ ಮವಿ 4-3-6-1
ಇಶಾನ್ ಪೊರೆಲ್ 6-2-17-4
ಕಮಲೇಶ್ ನಗರ್‌ಕೋಟಿ 5-1-7-0
ಶಿವ ಸಿಂಗ್ 8-0-20-2
ರಿಯಾನ್ ಪರಾಗ್ 4-1-6-2
ಅನುಕುಲ್ ರಾಯ್ 2-0-11-1
ಅಭಿಷೇಕ್ ಶರ್ಮ 0.3-0-0-1 ಪಂದ್ಯಶ್ರೇಷ್ಠ: ಶುಭ್‌ಮಾನ್ ಗಿಲ್