Advertisement
ಶುಕ್ರವಾರ ಕ್ವೀನ್ಸ್‌ಟೌನ್‌ನಲ್ಲಿ ಸಾಗಿದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 49.2 ಓವರ್‌ಗಳಲ್ಲಿ 265 ರನ್ ಬಾರಿಸಿ ಸವಾಲೊಡ್ಡಿದರೆ, ಬಾಂಗ್ಲಾದೇಶ 42.1 ಓವರ್‌ಗಳಲ್ಲಿ 134ಕ್ಕೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ಭಾರತದ ಆರಂಭ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಆದರೆ ಮಧ್ಯಮ ಸರದಿಯ ಬ್ಯಾಟ್ಸ್‌ಮನ್‌ಗಳು ತಂಡವನ್ನು ಆಧರಿಸಿ ನಿಂತರು. ಬಳಿಕ ಕೆಳ ಕ್ರಮಾಂಕದಲ್ಲಿ ಭಾರತದ ಬ್ಯಾಟಿಂಗ್ ತೀವ್ರ ಕುಸಿತ ಕಂಡಿತು. ಆದರೆ ಅಷ್ಟರಲ್ಲಿ ಸ್ಕೋರ್‌ಬೋರ್ಡ್‌ನಲ್ಲಿ ಸವಾಲಿನ ಮೊತ್ತ ಜಮೆಯಾಗಿತ್ತು. ಪಂಜಾಬಿನ ಭರವಸೆಯ ಬ್ಯಾಟ್ಸ್‌ಮನ್ ಶುಭಂ ಗಿಲ್ ಮತ್ತೂಂದು ಶ್ರೇಷ್ಠ ಪ್ರದರ್ಶನ ನೀಡಿ ಸರ್ವಾಧಿಕ 86 ರನ್ ಬಾರಿಸಿದರು. ಪಂಜಾಬಿನ ಮತ್ತೂಬ್ಬ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮ 50 ರನ್ ಕೊಡುಗೆ ಸಲ್ಲಿಸಿದರು. ನಾಯಕ, ಆರಂಭಕಾರ ಪೃಥ್ವಿ ಶಾ 40, ಕೀಪರ್ ಹಾರ್ವಿಕ್ ದೇಸಾಯಿ 34 ರನ್ ಹೊಡೆದರು. 44ನೇ ಓವರ್ ವೇಳೆ 4 ವಿಕೆಟಿಗೆ 215 ರನ್ ಬಾರಿಸಿ ಸುಸ್ಥಿತಿಯಲ್ಲಿದ್ದ ಭಾರತ, 50 ರನ್ ಅಂತರದಲ್ಲಿ ಕೊನೆಯ 6 ವಿಕೆಟ್‌ಗಳನ್ನು ಕಳೆದುಕೊಂಡಿತು.
Related Articles
Advertisement
ರಕ್ಷಣೆಗೆ ನಿಂತ ಶಾ-ಗಿಲ್ ಆರಂಭಕಾರ ಮನೋಜ್ ಕಾಲಾ (9) ಅವರನ್ನು 16 ರನ್ ಆಗಿದ್ದಾಗ ಕಳೆದುಕೊಂಡ ಭಾರತಕ್ಕೆ ಶಾ ಮತ್ತು ಗಿಲ್ ರಕ್ಷಣೆ ಒದಗಿಸಿದರು. ಇವರಿಂದ 2ನೇ ವಿಕೆಟಿಗೆ 86 ಒಟ್ಟುಗೂಡಿತು. ಸ್ಕೋರ್ 102ಕ್ಕೆ ಏರಿದಾಗ 54 ಎಸೆತಗಳಿಂದ 40 ರನ್ ಮಾಡಿದ ಶಾ ವಿಕೆಟ್ ಉರುಳಿತು (5 ಬೌಂಡರಿ). ಗಿಲ್-ದೇಸಾಯಿ ಸೇರಿಕೊಂಡು ಮತ್ತೂಂದು ಉಪಯುಕ್ತ ಜತೆಯಾಟ ನಡೆಸಿ 74 ರನ್ ಪೇರಿಸಿದರು. ಇವರಿಬ್ಬರ ವಿಕೆಟ್ 5 ರನ್ ಅಂತರದಲ್ಲಿ ಉರುಳಿದೊಡನೆ ಅಭಿಷೇಕ್ ಶರ್ಮ ಜವಾಬ್ದಾರಿಯುತ ಆಟದ ಮೂಲಕ ಇನ್ನಿಂಗ್ಸ್ ಬೆಳೆಸತೊಡಗಿದರು. ಗಿಲ್ 84 ರನ್ 94 ಎಸೆತಗಳಲ್ಲಿ ಬಂತು. ಬೀಸಿದ್ದು 9 ಬೌಂಡರಿ. 9ನೇ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿ ಕೊಂಡ ಶರ್ಮ 49 ಎಸೆತಗಳಿಂದ ಭರ್ತಿ 50 ರನ್ ಬಾರಿಸಿ ದರು (6 ಬೌಂಡರಿ). ಭಾರತ ಸರದಿಯ ಏಕೈಕ ಸಿಕ್ಸರ್ ರಿಯಾನ್ ಪರಾಗ್ ಅವರಿಂದ ಸಿಡಿಯಲ್ಪಟ್ಟಿತು. ಬಾಂಗ್ಲಾ ಪರ ಖಾಜಿ ಒನಿಕ್ 3, ನಯೀಮ್ ಹಸನ್ ಮತ್ತು ಸೈಫ್ ಹಸನ್ ತಲಾ 2 ವಿಕೆಟ್ ಕಿತ್ತರು. ಬ್ಯಾಟಿಂಗ್ ಸರದಿಯಲ್ಲಿ 43 ರನ್ ಮಾಡಿದ ಆರಂಭಕಾರ ಪಿನಾಕ್ ಘೋಷ್ ಅವರದೇ ಹೆಚ್ಚಿನ ಗಳಿಕೆ. ಉಳಿದವರ್ಯಾರೂ ಇಪ್ಪತ್ತರ ಗಡಿ ಮುಟ್ಟಲಿಲ್ಲ. ಸಂಕ್ಷಿಪ್ತ ಸ್ಕೋರ್: ಭಾರತ-49.2 ಓವರ್‌ಗಳಲ್ಲಿ 265 (ಗಿಲ್ 86, ಅಭಿಷೇಕ್ 50, ಶಾ 40, ದೇಸಾಯಿ 34, ಖಾಜಿ ಒನಿಕ್ 48ಕ್ಕೆ 3, ನಯೀಮ್ ಹಸನ್ 36ಕ್ಕೆ 2, ಸೈಫ್ ಹಸನ್ 41ಕ್ಕೆ 2). ಬಾಂಗ್ಲಾದೇಶ-42.1 ಓವರ್‌ಗಳಲ್ಲಿ 134 (ಪಿನಾಕ್ ಘೋಷ್ 43, ಆಫಿಫ್ ಹೊಸೈನ್ 18, ರೊಬಿಯುಲ್ ಹಕ್ 14, ನಾಗರ್ಕೋಟಿ 18ಕ್ಕೆ 3, ಅಭಿಷೇಕ್ ಶರ್ಮ 11ಕ್ಕೆ 2, ಶಿವಂ ಮಾವಿ 27ಕ್ಕೆ 2). ಪಂದ್ಯಶ್ರೇಷ್ಠ: ಶುಭಂ ಗಿಲ್.