Advertisement

ಅಂ-19 ಕ್ರಿಕೆಟ್‌: ಭಾರತ, ಇಂಗ್ಲೆಂಡ್‌ ಪಂದ್ಯ ಡ್ರಾ

03:45 AM Feb 17, 2017 | Team Udayavani |

ನಾಗ್ಪುರ: ಭಾರತ ಮತ್ತು ಇಂಗ್ಲೆಂಡ್‌ ನಡುವಿನ 19 ವರ್ಷದೊಳಗಿನ ನಾಲ್ಕು ದಿನದ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.

Advertisement

ಇಲ್ಲಿ ನಡೆದ ಪಂದ್ಯದಲ್ಲಿ 1ನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ 501/5 ಡಿಕ್ಲೇರ್‌ ಮತ್ತು 2ನೇ ಇನಿಂಗ್ಸ್‌ನಲ್ಲಿ 167 ರನ್‌ಗೆ ಆಲೌಟ್‌ ಆಗಿತ್ತು. ಇದಕ್ಕೆ ಉತ್ತರವಾಗಿ ಭಾರತ 1ನೇ ಇನಿಂಗ್ಸ್‌ನಲ್ಲಿ 431/8 ಡಿಕ್ಲೇರ್‌ ಮತ್ತು 2ನೇ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 189 ರನ್‌ ಬಾರಿಸಿ ಡ್ರಾ ಮಾಡಿಕೊಂಡಿದೆ. ಕೊನೆಯ ದಿನ ಭಾರತ ತಂಡದ ಪರ ಸುರೇಶ್‌ ಲೋಕೇಶ್ವರ್‌ ಅಜೇಯ 92 ರನ್‌ ಬಾರಿಸಿ ಭಾರತಕ್ಕೆ ನೆರವಾದರು. ಇಲ್ಲದಿದ್ದರೆ ಭಾರತ ಸೋಲುಕಾಣುತ್ತಿತ್ತು. ಉಳಿದ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಬಾರಿಸುವಲ್ಲಿ ವೈಫ‌ಲ್ಯ ಎದುರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next