ಮಧುಮೇಹ ಇಂದು ಹೆಚ್ಚಿನವರನ್ನು ಕಾಡುತ್ತಿರುವ ಪ್ರಮುಖ ಕಾಯಿಲೆ. ಇದಕ್ಕೆ ಕಾರಣ ನಮ್ಮ ಜೀವನ ಶೈಲಿ ಮತ್ತು ಆಹಾರ ಕ್ರಮ. ಒಂದು ರೀತಿಯಲ್ಲಿ ಇದನ್ನು ನಾವೇ ಆಹ್ವಾನ ಮಾಡಿಕೊಳ್ಳುತ್ತಿದ್ದೇವೆ ಎಂದರೆ ತಪ್ಪಾಗಲಾರದು. ಹೀಂದೆ 50- 60 ವರ್ಷಗಳ ಅನಂತರ ಕಾಡುತ್ತಿದ್ದ ಈ ಕಾಯಿಲೆ ಈಗ ಸಣ್ಣ ಪ್ರಾಯದ ಮಕ್ಕಳಲ್ಲೂ ವಕ್ಕರಿಸುತ್ತಿದೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಮಧುಮೇಹದಲ್ಲಿ ನಾಲ್ಕು ವಿಧಗಳಿವೆ. ಅವುಗಳೆಂದರೆ ಟೈಪ್ 1, ಟೈಪ್ 2, ಜೆಸ್ಟೇಷನಲ್, ಪ್ರೀಡಯಾಬಿಟೀಸ್. ಇದರಲ್ಲಿ ಟೈಪ್ 2 ಸಾಮಾನ್ಯವಾಗಿ ಎಲ್ಲರನ್ನೂ ಕಾಡುವಂಥದ್ದು.
ಮಧುಮೇಹವನ್ನು ನಿರ್ಲಕ್ಷಿಸಿದರೆ ಮೂತ್ರಪಿಂಡಗಳ ವೈಫಲ್ಯ, ಹೃದ್ರೋಹ, ನರವ್ಯೂಹ ಹಾನಿಯುಂಟಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ. ಮಧುಮೇಹಕ್ಕೆ ಮುಖ್ಯವಾಗಿ ಕಾರಣವಾಗುವ ಕೆಲವೊಂದು ಅಂಶಗಳು ಇಲ್ಲಿವೆ.
*ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಸೇವನೆ ಮಾಡುವುದು ಮಧುಮೇಹಕ್ಕೆ ಮುಖ್ಯ ಕಾರಣವಾಗುತ್ತದೆ. ಇದು ದೇಹದಲ್ಲಿ ಗುಕ್ಲೋಸ್ ಮಟ್ಟವನ್ನು ಹೆಚ್ಚಿಸಿ ಸಿಹಿ ಪದಾರ್ಥಗಳ ಕಡೆಗೆ ಒಲವು ಹೆಚ್ಚಿಸುತ್ತದೆ. ಹೀಗಾಗಿ ಕಾಫಿ ಕುಡಿಯಬೇಕು ಎಂದೆನಿಸಿದಾಗ ಗ್ರೀನ್ ಟೀ ಸೇವನೆ ಅತ್ಯುತ್ತಮ.
*ಇನ್ನು ನಮ್ಮ ವೃತ್ತಿ ಬದುಕು ಕೂಡ ಮಧುಮೇಹಕ್ಕೆ ಮುಖ್ಯ ಕಾರಣವಾಗುತ್ತದೆ. ಅದರಲ್ಲೂ ಒಂದೇ ಭಂಗಿಯಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
*ಸ್ತ್ರೀಯರು ಮಧುಮೇಹಕ್ಕೆ ತುತ್ತಾಗುವ ಅಪಾಯ ಹೆಚ್ಚಾಗಿರುತ್ತದೆ. ಕಾರಣ ಅವರಲ್ಲಿ ಉತ್ಪಾದನೆಯಾಗುವ ಹಾರ್ಮೋನ್‌ಗಳು. ಇದು ದೇಹದ ಇನ್ಸುಲಿನ್
ಮಟ್ಟದ ಮೇಲೆ ಪ್ರಭಾವ ಬೀರಿ ದೇಹದಲ್ಲಿ ಮಧುಮೇಹ ಉಂಟಾಗಲು ಕಾರಣವಾಗುತ್ತದೆ.
*ಹೆಚ್ಚು ತಿನ್ನುವುದು ಕೂಡ ಮಧುಮೇಹಕ್ಕೆ ಕಾರಣವಾಗುತ್ತದೆ. ಕೆಲವರು ಕಂಪ್ಯೂಟರ್ ಕೆಲಸ ಮಾಡುತ್ತ, ಟಿವಿ ನೋಡುತ್ತ ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಇದು ಮಧುಮೇಹಕ್ಕೆ ಆಹ್ವಾನ ಕೊಟ್ಟಂತೆ.
*ಸೂರ್ಯನ ಬೆಳಕಿಗೆ ಮೈಯೊಡ್ಡದೇ ಇರುವುದು ಕೂಡ ಮಧುಮೇಹಕ್ಕೆ ಮುಖ್ಯ ಕಾರಣವಾಗುತ್ತದೆ. ಸೂರ್ಯನ ಬಿಸಿಲಿನಲ್ಲಿರುವ ವಿಟಮಿನ್ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಗೆ ಸಹಕಾರಿಯಾಗಿದೆ. ವಿಟಮಿನ್ ಡಿ ಕೊರತೆಯು ಬೊಜ್ಜು ಬೆಳೆಯಲು ಕಾರಣವಾಗುತ್ತದೆ. ಇದರಿಂದ ಮಧುಮೇಹದ ಅಪಾಯ ಹೆಚ್ಚಾಗುತ್ತದೆ.
*ವ್ಯಾಯಾಮ ಮಾಡದೇ ಇರುವುದು ಕೂಡ ಮಧುಮೇಹಕ್ಕೆ ಕಾರಣವಾಗುತ್ತದೆ. ನಮ್ಮ ವ್ಯಾಯಾಮ ಹೇಗಿರಬೇಕು ಎಂದರೆ ದೇಹದ ಬೆವರು ಇಳಿದುಹೋಗಬೇಕು. ಹಾಗಾದರೆ ಮಾತ್ರ ಮಧುಮೇಹವನ್ನು ದೂರವಿಡಬಹುದು.