ಸಂಗ್ರೂರ್ : ಪಂಜಾಬ್‌ನ ಭಗವಾನ್‌ಪುರ ಎಂಬ ಹಳ್ಳಿಯಲ್ಲಿ 150 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದಿದ್ದ 2 ವರ್ಷದ ಬಾಲಕನನ್ನು 109 ಗಂಟೆಗಳ ಯಶಸ್ವಿ ಕಾರ್ಯಾಚರಣೆ ನಡೆಸಿ ಜೀವಂತವಾಗಿ ಮೇಲಕ್ಕೆತ್ತಲಾಯಿತಾದರೂ ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಫತೇಹ್‌ವೀರ್ ಸಿಂಗ್ ಎಂಬ ಬಾಲಕ ಆಕಸ್ಮಿಕವಾಗಿ ಕಾಲು ಜಾರಿ ತೆರದ ಕೊಳವೆ ಬಾವಿಗೆ ಬಿದ್ದಿದ್ದ. ಆತನನ್ನು ರಕ್ಷಿಸಲು ಎನ್‌ಡಿಆರ್‌ಎಫ್ ಪಡೆಗಳು ಹಗಲು ರಾತ್ರಿ ನಿರಂತರವಾಗಿ 109 ಗಂಟೆಗಳ ಕಾರ್ಯಾಚರಣೆ ನಡೆಸಿ ಮೇಲಕ್ಕೆತ್ತಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು.
125 ಅಡಿ ಆಳದಲ್ಲಿ ಸಿಲುಕಿದ್ದ ಫತೇಹ್‌ವೀರ್‌ನನ್ನು ಹರಸಾಹಸ ಮಾಡಿ ಮೇಲಕ್ಕೆತ್ತಲಾಗಿತ್ತು.ಅತ್ಯಂತ ಕಠಿಣ ಕಾರ್ಯಾಚರಣೆ ನಡೆಸಿದ ಎನ್‌ಡಿಆರ್‌ಎಫ್ ಬಾಲಕನ ಪ್ರಾಣ ಉಳಿಸಲು ಭಾರಿ ಕಾರ್ಯಾಚರಣೆ ಕೈಗೊಂಡಿದ್ದರು.
ಬೋರ್‌ವೆಲ್‌ನಿಂದ ಮೇಲಕ್ಕೆತ್ತಿದ ತಕ್ಷಣ ಫತೇಹ್‌ವೀರ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಗಂಭೀರ ಸ್ಥಿತಿಯಲ್ಲಿದ್ದ ಆತ ಕೊನೆಯುಸಿರೆಳೆದಿದ್ದಾನೆ.
ಗುರುವಾರ ಸಂಜೆ 4 ಗಂಟೆಯ ವೇಳೆಗೆ ಫತೇಹ್‌ವೀರ್ ಬೋರ್‌ವೆಲ್‌ಗೆ ಬಿದ್ದಿದ್ದ.
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಬಾಲಕನ ರಕ್ಷಣೆಗೆ ಎಲ್ಲಾ ರೀತಿಯ ನೆರವು ಸರಕಾರದ ವತಿಯಿಂದ ನೀಡುವುದಾಗಿ ಹೇಳಿದ್ದರು.