Advertisement
ಹತ್ತು ವರ್ಷದವರೆಗೆ ಎಲ್ಲರಂತೆಯೇ ಸಾಧಾರಣ ಎತ್ತರ ಮತ್ತು ಮೈಕಟ್ಟನ್ನು ಸುಲ್ತಾನ್ ಹೊಂದಿದ್ದರು. 10 ವರ್ಷದ ನಂತರ ಅದೇನಾಯಿತೋ ಏನೋ ಏಕಾಏಕಿ ಬೆಳವಣಿಗೆ ಶುರುವಾಯಿತು.ಕಡಿಮೆ ಅವಧಿಯಲ್ಲೇ ಎತ್ತರೆತ್ತರಕ್ಕೆ ಬೆಳೆಯತೊಡಗಿದರು. ಮನೆಮಂದಿಯೆಲ್ಲಾ ಇದೇನೋ ಖಾಯಿಲೆ ಇರಬಹುದೆಂದು ಭಟಪಟ್ಟುಕೊಂಡಿದ್ದರು. ಆಮೇಲೆ ಆಸ್ಪತ್ರೆಗೆ ಹೋದಮೇಲೆ ಸುಲ್ತಾನ್‌ನನ್ನು ಪರೀಕ್ಷೆಗೊಳಪಡಿಸಿದ ಡಾಕ್ಟರ್ ಇದು ಕಾಯಿಲೆ ಅಲ್ಲ, ಬಗೆಹರಿಸಬಹುದಾದ ಸಮಸ್ಯೆ ಎಂದು ಹೇಳಿದ ಮೇಲೆಯೇ ನಿರಾಳರಾಗಿದ್ದು. ಆತನ ದೇಹದಲ್ಲಿ ಎತ್ತರವನ್ನು ನಿರ್ಧರಿಸುವ ಹಾರ್ಮೋನು ಅತಿಯಾಗಿ ಉತ್ಪತ್ತಿಯಾಗುತ್ತಿದ್ದುದೇ ಇದಕ್ಕೆಲ್ಲಾ ಕಾರಣವಾಗಿತ್ತು. ಈ ಸಮಸ್ಯೆಗೆ ಡಾಕ್ಟರ್ ಸೂಚಿಸಿದ ಪರಿಹಾರ- ಶಸ್ತ್ರಚಿಕಿತ್ಸೆ. ಆಪರೇಷನ್ ನಂತರ ಆತನ ಬೆಳವಣಿಗೆ ನಿಯಂತ್ರಣಕ್ಕೆ ಬಂದಿತು.
ಎತ್ತರಕ್ಕಿರುವ ವ್ಯಕ್ತಿಯನ್ನೇನೋ ನೋಡಿದಿರಿ. ಇಲ್ಲಿ ಜಗತ್ತಿನ ಅತಿ ಕುಳ್ಳ ವ್ಯಕ್ತಿ ಇದ್ದಾರೆ. ಅವರನ್ನೂ ನೋಡಿ ಅಚ್ಚರಿಪಡಿ. ಅವರ ಹೆಸರು ಚಂದ್ರ ಬಹಾದ್ದೂರ್ ಧಾಂಗಿ. ಇವರು ನೇಪಾಳದ ರೀಂಖೋಲ್ಲಿ ಹಳ್ಳಿಯ ನಿವಾಸಿ.
Related Articles
Advertisement
ಇವರನ್ನು ಜಗತ್ತಿಗೆ ಪರಿಚಯಿಸಿದ್ದು ಅದೇ ಗ್ರಾಮದ ಒಬ್ಬ ಮರದ ವ್ಯಾಪಾರಿ. ಅವರು ತಮಗೆ ಪರಿಚಯವಿದ್ದ ಮಾಧ್ಯಮ ಮಿತ್ರರಿಗೆ ಚಂದ್ರ ಅವರ ಬಗ್ಗೆ ಹೇಳಿದ್ದರು. ನಂತರವೇ ಸ್ಥಳೀಯ ಮಾಧ್ಯಮಗಳು ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ಈ ಸುದ್ದಿ ಬಿತ್ತರಗೊಂಡು ಚಂದ್ರ ಬಹಾದ್ದೂರ್ ಅವರು ಜಗತ್ತಿನಾದ್ಯಂತ ಪ್ರಖ್ಯಾತಿಯನ್ನು ಪಡೆದರು.
ಅವರಿಗೆ ಚಿಕ್ಕಂದಿನಿಂದಲೂ ಪ್ರಪಂಚವನ್ನು ಸುತ್ತಬೇಕೆನ್ನುವ ಆಸೆ. ಪ್ರಖ್ಯಾತಿಯನ್ನು ಹೊಂದಿದ ಮೇಲೆ ಅವರ ಆಸೆ ತನ್ನಿಂದ ತಾನೇ ಕೈಗೂಡಿತ್ತು. ಪ್ರಪಂಚದ ಅನೇಕ ದೇಶಗಳವರು ಚಂದ್ರ ಅವರನ್ನು ತಮ್ಮ ದೇಶಕ್ಕೆ ಆಹ್ವಾನಿಸಿದವು. ಅವರನ್ನು ನೋಡಲು ಜನ ಮುಗಿಬಿದ್ದರು. ಇವನಿಗೆ ಮೂವರು ಸೋದರರು ಮತ್ತು ಇಬ್ಬರು ಸೋದರಿಯರು ಇದ್ದು, ಅವರೆಲ್ಲರೂ ನಾಲ್ಕು ಅಡಿ ಎತ್ತರವಿದ್ದಾರೆ. 2015ರಲ್ಲಿ ಚಂದ್ರ ಅವರು ಅಮೆರಿಕಾದಲ್ಲಿ ಕೊನೆಯುಸಿರಳಾದಾಗ ಅವರಿಗೆ 75 ವರ್ಷ ವಯಸ್ಸು.
ಅಪೂರ್ವ ಸಂಗಮ ವಿಶ್ವ ಗಿನ್ನಿಸ್ ಪುಸ್ತಕದ ಹತ್ತನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಜಗತ್ತಿನ ಅತಿ ಎತ್ತರದ ವ್ಯಕ್ತಿ ಸುಲ್ತಾನ್ ಮತ್ತು ಅತಿ ಕುಳ್ಳಗಿನ ಚಂದ್ರ ಬಹಾದ್ದೂರ್ ಇಬ್ಬರೂ ಒಬ್ಬರನ್ನೊಬ್ಬರು ಭೇಟಿಯಾಗಿದ್ದರು. ಅಂದು ಇಬ್ಬರೂ ಜೊತೆಯಾಗಿ ನಿಂತು ಕ್ಯಾಮೆರಾಗಳಿಗೆ ಪೋಸು ನೀಡಿದ್ದರು. ಅದನ್ನು ನೋಡುವುದೇ ಸೊಗಸು. – ದಂಡಿನಶಿವರ ಮಂಜುನಾಥ್