Advertisement

ದ್ವಿಚಕ್ರ ವಾಹನಗಳಿಗೆ ಭಾರೀ ಡಿಸ್ಕೌಂಟ್‌; ಭರ್ಜರಿ ಮಾರಾಟ

02:26 PM Apr 01, 2017 | Harsha Rao |

ಮಹಾನಗರ:  ಬಿಎಸ್‌ -3  (ಭಾರತ್‌ ಸ್ಟೇಜ್‌) ಮಾದರಿಯ ಪರಿಸರ ಮಾಲಿನ್ಯ  ನಿಯಮಾವಳಿ ಪೂರೈಸುವ ವಾಹನಗಳ ಮಾರಾಟ ಹಾಗೂ ನೋಂದಣಿ ಎ.1ರಿಂದ ಜಾರಿಗೆ ಬರುವಂತೆ ಸ್ಥಗಿತಗೊಳ್ಳುವುದರಿಂದ  ಮಾ. 31ರಂದು ಜಿಲ್ಲೆಯಲ್ಲಿ  ದ್ವಿಚಕ್ರ ವಾಹನಗಳ ಭರ್ಜರಿ ಮಾರಾಟ ನಡೆಯಿತು.  

Advertisement

ಭಾರೀ ರಿಯಾಯತಿಯನ್ನು  ದ್ವಿಚಕ್ರ  ಕಂಪೆನಿಗಳು  ಘೋಷಿಸಿದ ಪರಿಣಾಮ ಬಿಎಸ್‌- 3 ಮಾದರಿಯ ಸ್ಕೂಟರ್‌ ಹಾಗೂ ಮೋಟಾರ್‌ ಬೈಕ್‌ಗಳ ದಾಸ್ತಾನು  ಬಹುತೇಕ  ಖಾಲಿಯಾಗಿವೆ. 

ಬಿಎಸ್‌- 3 ವಾಹನಗಳ ಮಾರಾಟ ಹಾಗೂ ನೋಂದಣಿಯನ್ನು ಎ.1 ರಿಂದ ಜಾರಿಗೆ ಬರುವಂತೆ ನಿಷೇಧಿಸಿ ಮಾ. 30ರಂದು ತೀರ್ಪು ನೀಡಿದೆ. ಮಾ. 31ವರೆಗೆ ಮಾತ್ರ  ಈ ಮಾದರಿಯ ವಾಹನಗಳ ಮಾರಾಟ ಹಾಗೂ ನೋಂದಣಿಗೆ ಅವಕಾಶವಿರುವ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಗಳ ಮೇಲೆ ಕಂಪೆನಿಗಳು ಭರ್ಜರಿ ಡಿಸ್ಕೌಂಟ್‌ ಘೋಷಿಸಿದ್ದವು. ದ್ವಿಚಕ್ರ ವಾಹನಗಳಿಗೆ 7 ಸಾವಿರದಿಂದ 22,000 ರೂ. ವರೆಗೆ ರಿಯಾಯತಿ ಅಫರ್‌ ನೀಡಲಾಗುತ್ತಿತ್ತು.  

ಹೋಂಡಾ ಮೋಟಾರ್‌ ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ ಬಿಎಸ್‌-3 ಮಾದರಿಯ  ನವಿ, ಡ್ರೀಮ್‌ ಯುಗ, ಸಿಬಿ ಶೈನ್‌, ಸಿಡಿಆರ್‌ 25 ಡಿಆರ್‌ ಬೈಕ್‌ಗಳ ಮೇಲೆ ಸುಮಾರು 22,000 ರೂ. ವರೆಗೆ ಡಿಸ್ಕೌಂಟ್‌ ಘೋಷಿಸಿದ್ದು, ಮಂಗಳೂರು ಶೋರೂಂಗಳಲ್ಲಿ ಬಹುತೇಕ ಗಾಡಿಗಳು ಮಾರಾಟವಾಗಿವೆ.

ಹೀರೋ ಕಂಪೆನಿಯು  ಡ್ನೂಯೆಟ್‌, ದ ಬೋಲೋ  ನ್ಯೂ ಮ್ಯಾಸ್ಟ್ರೋ ಸ್ಕೂಟರ್‌, ಸೂಪರ್‌  ಸ್ಪೆಡರ್‌,  ಗ್ಲಾಮರ್‌ ಮೋಟಾರ್‌ ಬೈಕ್‌ ಮೇಲೆ 12,500 ರೂ. ಕಡಿತ ಹಾಗೂ ಉಚಿತ ವಿಮೆ ಆಫರ್‌ ಘೋಷಿಸಿತ್ತು.  ಮಂಗಳೂರಿನಲ್ಲಿ  ಈ ವಾಹನಗಳ ದಾಸ್ತಾನು ಪೂರ್ಣ ಖಾಲಿಯಾಗಿವೆ ಎಂದು ಮೂಲಗಳು ತಿಳಿಸಿವೆ.  

Advertisement

ಟಿವಿಎಸ್‌ ಕಂಪೆನಿ ತನ್ನ ಸ್ಕೂಟರ್‌ ಹಾಗೂ ಬೈಕ್‌ಗಳು ಮೇಲೆ ಭರ್ಜರಿ ಡಿಸ್ಕೌಂಟ್‌ ನೀಡಿತ್ತು. 7 ಸಾವಿರದಿಂದ 15,000 ರೂ. ವರೆಗೆ ಡಿಸ್ಕೌಂಟ್‌ ಇತ್ತು.

ಯಮಹಾದಿಂದಲೂ ಸುಮಾರು 10,000 ರೂ. ವರೆಗೆ ರಿಯಾಯಿತಿ ಇದ್ದ ಕಾರಣ ಬಿಎಸ್‌- 3 ಮಾದರಿಯ ಮೋಟರ್‌ ಬೈಕ್‌ಗಳು ಸಂಪೂರ್ಣ ಮಾರಾಟವಾಗಿವೆ.

ಮಾಲಿನ್ಯ ನಿಯಂತ್ರಣ ತಂತ್ರಜ್ಞಾನ
ಪ್ರಸ್ತುತ ಕಾರುಗಳು ಬಿಎಸ್‌- 4 ಕಾರುಗಳೇ ನೋಂದಣಿಯಾಗುತ್ತಿವೆ. ಆದುದರಿಂದ  ಕಾರುಗಳಿಗೆ ಸಮಸ್ಯೆ ಇರುವುದಿಲ್ಲ. ದ್ವಿಚಕ್ರ ವಾಹನಗಳಿಗೆ ಮಾತ್ರ ಸಮಸ್ಯೆ ಇದೆ. ಭಾರತ್‌ ಸ್ಟೇಜ್‌  ( ಬಿಎಸ್‌) 3 ಗಿಂತ ಹಾಗೂ 4ರಲ್ಲಿ  ವಾಯುಮಾಲಿನ್ಯ ಪ್ರಮಾಣದಲ್ಲಿ ಅಂತರ ಕಡಿಮೆ ಇರುತ್ತದೆ.  ಈ ಪೂರಕವಾಗಿ ಬಿಎಸ್‌ 4ರಲ್ಲಿ  ಮಾಲಿನ್ಯ ಹೊರಸೂಸುವಿಕೆಯಲ್ಲಿ ಸುಧಾರಿತ ತಂತ್ರಜ್ಞಾನಗಳನ್ನು ಬಳಸಲಾಗಿದೆ. ಬಿಎಸ್‌3ಯಲ್ಲಿ  ಕಾರ್ಬನ್‌ ಮೋನೊಕ್ಸೆ„ಡ್‌ 2.30 ಗ್ರಾಂ/ ಕಿ.ಮೀ., ಎಚ್‌ಸಿ 0.10 ಗ್ರಾಂ/ ಕಿ.ಮೀ., ಹಾಗೂ ಎನ್‌ಒ ಎಕ್ಸ್‌ 0.15 ಗ್ರಾಂ/ಕಿ.ಮೀ. ಇರುತ್ತದೆ. ಬಿಎಸ್‌4 ರಲ್ಲಿ ಕಾರ್ಬನ್‌ ಮೋನೋಕ್ಸೆ„ಡ್‌ 1.00 ಗ್ರಾಂ/ಕಿ.ಮೀ., ಎಚ್‌ಸಿ 0.10 ಗ್ರಾಂ/ಕಿ.ಮೀ., ಎನ್‌ಒಎಕ್ಸ್‌ 0.08 ಗ್ರಾಂ/ಕಿ.ಮೀ. ಇರುತ್ತದೆ. 

ಮಾರುಕಟ್ಟೆಯಲ್ಲಿರುವುದು ಬಿಎಸ್‌- 4 ದರ್ಜೆಯ ಇಂಧನ
ಪ್ರಸ್ತುತ ಮಾರುಕಟ್ಟೆಯಲ್ಲಿರುವುದು ಬಿಎಸ್‌- 4 ದರ್ಜೆಯ ಇಂಧನ. ರಾಜ್ಯದಲ್ಲಿ ಎಲ್ಲ  ತೈಲ ಕಂಪೆನಿಗಳು ಬಿಎಸ್‌4 ದರ್ಜೆಯ ಇಂಧನವನ್ನು ಸರಬರಾಜು ಮಾಡುತ್ತಿವೆ. ಆದರೆ ಹೆಚ್ಚಿನ ವಾಹನಗಳು ಇನ್ನೂ ಕೂಡ ಬಿಎಸ್‌-4 ದರ್ಜೆಗೆ ಏರಿಲ್ಲ. ಉನ್ನತ ಗ್ರೇಡ್‌ನ‌ ಇಂಧನ ಬಳಸಿದರೂ ತಾಂತ್ರಿಕತೆ ಬಿಎಸ್‌ 3 ಇದ್ದರೆ  ಬಿಎಸ್‌- 4ನ ಫಲಿತಾಂಶ ನಿರೀಕ್ಷಿಸಲು ಸಾಧ್ಯವಿಲ್ಲ .

Advertisement

Udayavani is now on Telegram. Click here to join our channel and stay updated with the latest news.

Next