Advertisement

ನಾಡಿಗಾಮ್‌:ಭೀಕರ ಗುಂಡಿನ ಕಾಳಗ;ಕಮಾಂಡೋ ಹುತಾತ್ಮ,4 ಉಗ್ರರ ಹತ್ಯೆ

08:55 AM Nov 20, 2018 | Team Udayavani |

ಶೋಪಿಯಾನ್‌ : ಕಾಶ್ಮೀರದ ನಾಡಿಗಾಮ್‌ ಪ್ರಾಂತ್ಯದಲ್ಲಿ ಮಂಗಳವಾರ ಬೆಳಗ್ಗೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಭೀಕರ ಗುಂಡಿನ ಕಾಳಗ ನಡೆದಿದ್ದು, ನಾಲ್ವರು ಉಗ್ರರನ್ನು ಹತ್ಯೆಗೈಯಲಾಗಿದೆ.ಕಾರ್ಯಾಚರಣೆ ವೇಳೆ  ಪ್ಯಾರಾಮಿಲಿಟರಿ ಪಡೆಯ ಕಮಾಂಡೋ ಒಬ್ಬರು ಹುತಾತ್ಮರಾಗಿದ್ದಾರೆ.

Advertisement

ಗುಂಡಿನ ಚಕಮಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಮಾಂಡೋವನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

ಗುಂಡಿನ ಕಾಳಗದಲ್ಲಿ ಇನ್ನಿಬ್ಬರು ಯೋಧರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಉಗ್ರರ ಗುಂಪನ್ನು ಗುರಿಯಾಗಿರಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದ್ದು ನಾಲ್ವರರ ಹತ್ಯೆಯ ಬಳಿಕವೂ  ಗುಂಡಿನ ಕಾಳಗ ಮುಂದುವರಿದಿದ್ದು, ಇನ್ನುಳಿದ ಉಗ್ರರಿಗಾಗಿ ಯೋಧರು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next