Advertisement

ಜಮ್ಮುವಿನಲ್ಲಿ ಮತ್ತೊಂದು ಎನ್ ಕೌಂಟರ್: ಇಬ್ಬರು ಲಶ್ಕರ್ ಉಗ್ರರ ಹತ್ಯೆ

09:39 AM Nov 13, 2019 | Team Udayavani |

ಶ್ರೀನಗರ: ಭಾರತೀಯ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರರನ್ನು ಸದೆ ಬಡಿಯುವಲ್ಲಿ ಸೇನೆ ಯಶಸ್ವಿಯಾಗಿದೆ. ಜಮ್ಮು ಕಾಶ್ಮೀರದ ಗಂಡರ್ ಬಾಲ್ ಜಿಲ್ಲೆಯಲ್ಲಿ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.

Advertisement

ಜಿಲ್ಲೆಯ ಗುಂಡ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಪಡೆದ ಸಿಆರ್ ಪಿಎಫ್ ಪಡೆ ಮತ್ತು ಜಮ್ಮು ಕಾಶ್ಮೀರ ಪೊಲೀಸರು ಕಾರ್ಯಾಚರಣೆ ಆರಂಭಿಸಿತ್ತು. ಉಗ್ರರ ಪ್ರತಿದಾಳಿಯನ್ನು ಸಮರ್ಥವಾಗಿ ಎದುರಿಸಿ ಇಬ್ಬರನ್ನು ಹೊಡೆದುರಿಳಿಸಿದ್ದಾರೆ.

ಇನ್ನೂ ಎರಡರಿಂದ ಮೂರು ಉಗ್ರರು ಸ್ಥಳದಲ್ಲಿರುವ ಮಾಹಿತಿಯಿದ್ದು, ಕಾರ್ಯಾಚರಣೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next