Advertisement

ಒಂದೇ ಶ್ವಾನಕ್ಕೆ ಎರಡೆರಡು ಶಸ್ತ್ರಚಿಕಿತ್ಸೆ!

07:10 AM May 07, 2018 | Team Udayavani |

ಉಡುಪಿ: ಇಲ್ಲಿನ ಮಾರುತಿ ವೀಥಿಕಾದಲ್ಲಿ ಹಲವು ಸಮಯ ದಿಂದ ಹೊಟ್ಟೆಯಡಿ ಗಡ್ಡೆ ಬೆಳೆದು ನರಳಾಡುತ್ತಿದ್ದ ಶ್ವಾನ ಕೊನೆಗೂ ಈಗ ನಿರಾಳವಾಗಿದೆ. 

Advertisement

ನಗರಾಡಳಿತ ಮಾಡಿಸಿದ್ದ ಸಂತಾನ ಹರಣ ಶಸ್ತ್ರಚಿಕಿತ್ಸೆ ಬಳಿಕ ನಾಯಿಗೆ ಗಡ್ಡೆ ಬೆಳೆದಿದ್ದು, ಶಸ್ತ್ರಚಿಕಿತ್ಸೆ ವಿಫ‌ಲವಾಗಿ ಹೀಗಾಗಿತ್ತು ಎಂಬ ಆರೋಪಗಳು ಕೇಳಿಬಂದಿದ್ದವು. ಶ್ವಾನಕ್ಕೆ ಪೇಟೆ ಸುತ್ತಮುತ್ತ ಜನ ಆಹಾರ ಹಾಕುತ್ತಿದ್ದು, ಅದರ ಕಷ್ಟ ನೋಡಿ, ಗಡ್ಡೆ ತೆಗೆಯುವ ಶಸ್ತ್ರ ಚಿಕಿತ್ಸೆಗೆ ಪ್ರಯತ್ನಿಸಿದ್ದರು. ಶ್ವಾನವನ್ನು  ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ವಿನಯಚಂದ್ರ ಸಾಸ್ತಾನ ಅವರೊಂದಿಗೆ ಶ್ರೀನಿಧಿ ಮೆಡಿಕಲ್‌ನ ಪ್ರಸಾದ್‌ ಭಟ್‌ ಕೆಮ್ಮಣ್ಣು ಅವರು ಶ್ವಾನವನ್ನು ಪಶು ವೈದ್ಯರಲ್ಲಿಗೆ ಕರೆದೊಯ್ದರು. ಪಶುಚಿಕಿತ್ಸಕ ಡಾ| ಸಂದೀಪ್‌ ಕುಮಾರ್‌ ಅವರು ಶ್ವಾನದ ಉದರ ಶಸ್ತ್ರಚಿಕಿತ್ಸೆ ನಡೆಸಿ 1.50 ಕೆ.ಜಿ. ಗೆಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಈಗ ಶ್ವಾನ ಆರೋಗ್ಯವಾಗಿದ್ದು, ಎಂದಿನಂತೆ ಓಡಾಡುತ್ತಿದೆ.  

Advertisement

Udayavani is now on Telegram. Click here to join our channel and stay updated with the latest news.

Next