ಜಮ್ಮು-ಕಾಶ್ಮೀರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಪ್ರದೇಶದಲ್ಲಿ ಶನಿವಾರ (ಫೆ.19) ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಸೇನಾಪಡೆಯ ಪ್ರತಿದಾಳಿಯಲ್ಲಿ ಉಗ್ರನೊಬ್ಬ ಹತ್ಯೆಗೀಡಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಹಕ್ಕಿ ಜ್ವರ ಭೀತಿ: 25,000ಕ್ಕೂ ಅಧಿಕ ಕೋಳಿಗಳ ಹತ್ಯೆಗೆ ಥಾಣೆ ಜಿಲ್ಲಾಧಿಕಾರಿ ಆದೇಶ
ಶೋಪಿಯಾನ್ ಪ್ರದೇಶದಲ್ಲಿ ಉಗ್ರರ ವಿರುದ್ಧದ ಜಂಟಿ ಕಾರ್ಯಾಚರಣೆ ಸಂದರ್ಭದಲ್ಲಿ ಯೋಧರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ಆರಂಭಗೊಂಡಿತ್ತು. ಈ ಸಂದರ್ಭದಲ್ಲಿ ಇಬ್ಬರು ಯೋಧರು ಹುತಾತ್ಮಾಗಿರುವುದಾಗಿ ಮೂಲಗಳು ಹೇಳಿವೆ.
ಹುತಾತ್ಮರಾದ ಯೋಧರನ್ನು ಸಂತೋಷ್ ಯಾದವ್ ಮತ್ತು ಚವನ್ ರೋಮಿಟ್ ತಾನಾಜಿ ಎಂದು ಗುರುತಿಸಲಾಗಿದೆ. ಇಬ್ಬರೂ ರಾಷ್ಟ್ರೀಯ ರೈಫಲ್ಸ್ (ಆರ್.ಆರ್.)1ರ ಸಿಪಾಯಿಗಳಾಗಿರುವುದಾಗಿ ಮೂಲಗಳು ತಿಳಿಸಿವೆ. ಸಾವನ್ನಪ್ಪಿರುವ ಉಗ್ರನ ಗುರುತನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ ಜಮ್ಮು-ಕಾಶ್ಮೀರ ಪೊಲೀಸರು, ಸೇನೆ ಮತ್ತು ಅರೆಸೇನಾಪಡೆ ಜತೆಗೂಡಿ ದಕ್ಷಿಣ ಕಾಶ್ಮೀರದ ಶೋಪಿಯಾನ್ ಝೈನ್ ಪೋರಾದ ಚೆರ್ ಮಾರ್ಗ್ ಗ್ರಾಮ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆಂಬ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿರುವುದಾಗಿ ವರದಿ ತಿಳಿಸಿದೆ.