Advertisement

ರಾಜಸ್ಥಾನ: ಜಡಿಮಳೆಗೆ ಕುಸಿದ ಮನೆ ಸೂರು; ಸಹೋದರಿಯರಿಬ್ಬರ ಸಾವು

12:37 PM Sep 08, 2018 | udayavani editorial |

ಕೋಟ, ರಾಜಸ್ಥಾನ : ರಾಜಸ್ಥಾನದ ಬರಾನ್‌ ನಲ್ಲಿ  ಸುರಿಯುತ್ತಿರುವ ಜಡಿಮಳೆಯಿಂದಾಗಿ ಮನೆಯೊಂದರ ಸೂರು ಕುಸಿದ ದುರಂತದಲ್ಲಿ ಇಬ್ಬರು ಸಹೋದರಿಯರು ದಾರುಣವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. 

Advertisement

ಕವಾಯಿ ಪೊಲೀಸ್‌ ಠಾಣೆ ವ್ಯಾಪ್ತಿಗೆ ಒಳಪಡುವ ಕುನ್ವಾರ್‌ಪುರ ಗ್ರಾಮದಲ್ಲಿ ನಡೆದಿರುವ ಈ ದುರಂತದಲ್ಲಿ ಮೃತಪಟ್ಟಿರುವ ಸೋದರಿಯರನ್ನು ಲಕ್ಷ್ಮೀ ಬೈರಾಗಿ (10) ಮತ್ತು ಪಿಂಕಿ (15) ಎಂದು ಗುರುತಿಸಲಾಗಿದೆ. 

ನಿರಂತರ ಮಳೆಯಿಂದ, ನೀರು ಒಳಗೆ ಒಸರುತ್ತಿದ್ದು ಮನೆಯ ಗೋಡೆಗಳು ದುರ್ಬಲವಾಗಿದ್ದವು. ನಿನ್ನೆಯ ಜಡಿಮಳೆಗೆ ಮನೆ ಮಂದಿ ಮಲಗಿದ್ದಾಗ ನಸುಕಿನ 3 ಗಂಟೆ ಸುಮಾರಿಗೆ ಮನೆಯ ಸೂರು ಕುಸಿದು ಸಹೋದರಿಯರಿಬ್ಬರನ್ನು ಬಲಿ ಪಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next