ನವದೆಹಲಿ: ಕೇವಲ ಎರಡು ದಿನಗಳ ಅಂತರದಲ್ಲಿ ರಷ್ಯಾದ ಸಂಸದ ಸೇರಿದಂತೆ ಇಬ್ಬರು ರಷ್ಯನ್ನರು ಒಡಿಶಾದ ಒಂದೇ ಹೋಟೆಲ್‌ನಲ್ಲಿ ನಿಗೂಢವಾಗಿ ಸಾವಿಗೀಡಾದ ಪ್ರಕರಣವು ಕಗ್ಗಂಟಾಗಿ ಪರಿಣಮಿಸಿದೆ.
ಈ ಪ್ರಕರಣಗಳಲ್ಲಿ ಒಡಿಶಾ ಪೊಲೀಸರಿಗೆ ಯಾವುದೇ ಕ್ರಿಮಿನಲ್ ಲಿಂಕ್ ಕಂಡುಬಂದಿಲ್ಲ ಎಂದು ರಷ್ಯಾ ರಾಯಭಾರ ಕಚೇರಿ ಮಂಗಳವಾರ ತಿಳಿಸಿದೆ. ಆದರೆ, ರಷ್ಯಾದಲ್ಲೂ ಅಧ್ಯಕ್ಷ ಪುಟಿನ್ ಅವರನ್ನು ಟೀಕಿಸಿದ ಹಲವು ಮಂದಿ ಇದೇ ರೀತಿ ನಿಗೂಢವಾಗಿ ಸಾವಿಗೀಡಾದ ಘಟನೆಗಳು ಕಣ್ಣ ಮುಂದೆ ಇರುವ ಕಾರಣ, ಹಲವು ಅನುಮಾನಗಳು ಮೂಡಿವೆ.
ಒಡಿಶಾದ ರಾಯಗಡ ಜಿಲ್ಲೆಯ ಹೋಟೆಲ್‌ನಲ್ಲಿ ಮೃತಪಟ್ಟವರಲ್ಲಿ ಒಬ್ಬರಾದ ಪಲೇವ್ ಆ್ಯಂಟೋವ್(65) ಅವರು ರಷ್ಯಾದ ಸಂಸದರೂ ಹೌದು. ಉಕ್ರೇನ್ ವಿರುದ್ಧ ಯುದ್ಧ ಸಾರಿದ ಪುಟಿನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ನಂತರ, ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿದ್ದರು. ಇದರ ಬೆನ್ನಲ್ಲೇ, ಅವರೊಂದಿಗೇ ಭಾರತಕ್ಕೆ ಬಂದಿದ್ದ ವ್ಲಾಡಿಮಿರ್ ಬಿಡೆನೋವ್ ಅವರ ಮೃತದೇಹ ಅದೇ ಹೋಟೆಲ್‌ನ ಕೊಠಡಿಯಲ್ಲಿ ಪತ್ತೆಯಾಗಿತ್ತು.
ಮೃತದೇಹದ ಸುತ್ತಮುತ್ತ ಒಂದೆರಡು ವೈನ್ ಬಾಟಲಿಗಳು ಇದ್ದರು. ಈ ಘಟನೆಯಿಂದ ಪಲೇವ್ ಆಘಾತಕ್ಕೊಳಗಾಗಿದ್ದರು. ಇದಾದ ಎರಡೇ ದಿನದಲ್ಲಿ ಹೋಟೆಲ್‌ನ 3ನೇ ಮಹಡಿಯಿಂದ ಬಿದ್ದು ಅಸುನೀಗಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ, ಬೆಳಗಾವಿ ನೀರು ಪೂರೈಕೆ ಹೊಣೆ ಜಲಮಂಡಳಿಗೆ: ಶೆಟ್ಟರ್ ಒತ್ತಾಯ