Advertisement

ಸೋಂಕಿನಿಂದ ಗುಣಮುಖರಾದ ಇಬ್ಬರು ಆಸ್ಪತ್ರೆಯಿಂದ ಬಿಡುಗಡೆ

12:38 PM Jun 01, 2020 | Suhan S |

ಗದಗ: ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಬಾಲಕರು ಕೋವಿಡ್‌  ಸೋಂಕಿನಿಂದ ಗುಣಮುಖರಾಗಿದ್ದು, ರವಿವಾರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು.

Advertisement

ಇಲ್ಲಿನ ಗಂಜೀಬಸವೇಶ್ವರ ವೃತ್ತ ಭಾಗದ ನಿವಾಸಿಯಾಗಿರುವ 17 ವರ್ಷದ ಪಿ-1745 ಹಾಗೂ 16 ವರ್ಷದ ಪಿ-1795 ಬಾಲಕರು ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಕಂಟೇನ್ಮೆಂಟ್‌ ಪ್ರದೇಶದ ನಿವಾಸಿಗಳಾಗಿರುವ ಇವರಲ್ಲಿ ಕೋವಿಡ್‌ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದ ಹಿನ್ನೆಲೆಯಲ್ಲಿ ಕೋವಿಡ್‌  ಪರೀಕ್ಷೆಗೆ ಒಳಪಡಿಸಲಾಗಿತ್ತು. ಮೇ 22ರಂದು ಬಂದವರಲ್ಲಿ ಸೋಂಕು ದೃಢಪಟ್ಟಿತ್ತು. ತಕ್ಷಣ ನಿಗದಿತ ಕೋವಿಡ್‌-19 ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ.

ಕೇಂದ್ರ ಸರಕಾರದ ಪರಿಷ್ಕೃತ ಕೋವಿಡ್‌  ಮಾರ್ಗ ಸೂಚಿಯಂತೆ 7 ದಿನಗಳ ಬಳಿಕ ಇಬ್ಬರಿಂದ ಗಂಟಲಿನ ದ್ರವದ ಮಾದರಿ ಸಂಗ್ರಹಿಸಿ, ಮತ್ತೂಮ್ಮೆ ಸೋಂಕು ಪತ್ತೆಗಾಗಿ ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ಮೇ 31ರಂದು ಬಂದ ವರದಿಯಲ್ಲಿ ಇಬ್ಬರಿಗೂ ಕೋವಿಡ್‌  ವರದಿ ನೆಗೆಟಿವ್‌ ಬಂದಿದ್ದರಿಂದ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು.

ಕೋವಿಡ್‌ ವಿರುದ್ಧದ ಸಮರದಲ್ಲಿ ಇಬ್ಬರೂ ಗೆದ್ದು, ಆಸ್ಪತ್ರೆಯಿಂದ ಹೊರ ಬರುತ್ತಿದ್ದಂತೆ ಜಿಮ್ಸ್‌ ನಿರ್ದೇಶಕ ಡಾ|ಪಿ.ಎಸ್‌.ಭೂಸರೆಡ್ಡಿ ಹೂಗುಚ್ಛ ನೀಡಿ, ಶುಭ ಕೋರಿದರೆ, ನೆರೆದಿದ್ದ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಅಲ್ಲದೇ, ಮುಂದಿನ 14 ದಿನಗಳ ವರೆಗೆ ಮನೆಯಲ್ಲೇ ಇರಬೇಕು. ಅನಗತ್ಯವಾಗಿ ಮನೆಯಿಂದ ಆಚೆ ಬರಬಾರದು. ಸಾರ್ವಜನಿಕ ಸ್ಥಳದಲ್ಲಿ ಅನಗತ್ಯವಾಗಿ ಓಡಾಡದಂತೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next