ತಮಿಳುನಾಡು : ತಮಿಳುನಾಡಿನ ಕಡಲೂರು ಜಿಲ್ಲೆಯ ಪ್ರಸಿದ್ಧ ನಟರಾಜ ದೇವಸ್ಥಾನದಲ್ಲಿ ಅಪ್ರಾಪ್ತ ಬಾಲಕಿಯ ಮದುವೆ ನಡೆಸಿದ್ದ ಆರೋಪದ ಮೇಲೆ ಇಬ್ಬರು ಅರ್ಚಕರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಜನವರಿ 25 ರಂದು ಚಿದಂಬರಂ ಪಟ್ಟಣದ ದೇವಸ್ಥಾನದಲ್ಲಿ ವಿವಾಹವನ್ನು ನಡೆಸಲಾಗಿತ್ತು ಆ ಸಮಯದಲ್ಲಿ ವಧು ಕೇವಲ 17 ವರ್ಷ ವಯಸ್ಸಿನವಳಾಗಿದ್ದಳು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟರಾಜ ದೇವಸ್ಥಾನದ ಅರ್ಚಕರ (ದೀಕ್ಷಿತರು) ಕಾರ್ಯದರ್ಶಿ ಹೇಮಸಾಬೇಶ ಮತ್ತು ಅಪ್ರಾಪ್ತ ವಧುವಿನ ತಂದೆ ಸೇರಿದಂತೆ ಮೂವರನ್ನು ಶನಿವಾರ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಮದುವೆಯ ಸಮಯದಲ್ಲಿ 19 ವರ್ಷ ವಯಸ್ಸಿನ ವರ, ನ್ಯಾನಶೇಖರ್ ಅಲಿಯಾಸ್ ರಾಜರತ್ನಂ ಮತ್ತು ಅವರ ತಂದೆ ವಿಜಯಬಾಲನ್ ಅಲಿಯಾಸ್ ವೆಂಕಟೇಶ್ವರನ್ ಅವರು ದೇವಸ್ಥಾನದ ಅರ್ಚಕರಾಗಿದ್ದು ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.
ಆರೋಪಿಗಳ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006 ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 366 (ಎ) ನಿಬಂಧನೆಗಳ ಅಡಿಯಲ್ಲಿ ಚಿದಂಬರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ : ಕೇಂದ್ರ ಸರ್ಕಾರದ ಬಳಿ ಇನ್ನೂ ಸ್ಟಾಕ್ ಇದೆ ಸುಮಾರು ಮೂರು ಕೋಟಿ ಡೋಸ್ ಕೋವಿಡ್ ಲಸಿಕೆ