Advertisement
ಮುಂಬಯಿಯ ಸಾಂತಾಕ್ರೂಸ್ ಈಸ್ಟ್ ನ್ಯೂ ಅಗ್ರಿಪಾಡ ಬಡಾವಣೆ ಅಪಾರ್ಟ್‌ಮೆಂಟ್‌ನಲ್ಲಿ 20 ವರ್ಷದ ಮಹಿಳೆ, ತನ್ನ ಪತಿ, ಭಾವ, ಭಾವನ ಹೆಂಡತಿ, ಮಕ್ಕಳೊಂದಿಗೆ 3 ವರ್ಷಗಳಿಂದ ವಾಸವಾಗಿದ್ದಾರೆ. ಇವರೆಲ್ಲರೂ ಕೆ.ಆರ್.ಪೇಟೆ ತಾಲೂಕು ಜಾಗಿನಕೆರೆ ಗ್ರಾಮದವರು ಎಂದು ಜಿಲ್ಲಾಧಿಕಾರಿ ಡಾ| ವೆಂಕಟೇಶ್ ತಿಳಿಸಿದ್ದಾರೆ.
ಮುಂಬಯಿಯ ಎಲ್.ಆರ್.ತಿವಾರಿ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿರುವ 19 ವರ್ಷದ ಯುವತಿಗೂ ಸೋಂಕು ದೃಢಪಟ್ಟಿದೆ. ಇವರು ಗರ್ಭಿಣಿಯೊಂದಿಗೆ ಮುಂಬಯಿಯಿಂದ ಪ್ರಯಾಣ ಮಾಡಿ ಜಾಗಿನಕೆರೆ ಗ್ರಾಮಕ್ಕೆ ಬಂದಿದ್ದಾರೆ. ಇವರ ಗಂಟಲದ್ರವ ಪರೀಕ್ಷೆ ನಡೆಸಿದಾಗ ಸೋಂಕು ಪತ್ತೆಯಾಗಿದ್ದು, ಇಬ್ಬರನ್ನೂ ಮಿಮ್ಸ್‌ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದವರು ತಿಳಿಸಿದ್ದಾರೆ.
Related Articles
Advertisement