Advertisement

ಭಾರತ ಹಾಕಿ ತಂಡದ ಐವರಿಗೆ ಕೋವಿಡ್

09:41 PM Jun 30, 2022 | Team Udayavani |

ಬೆಂಗಳೂರು: ಕಾಮನ್‌ವೆಲ್ತ್‌ ಗೇಮ್ಸ್‌ಗೆ ಸಿದ್ಧಗೊಳ್ಳುತ್ತಿರುವ ಭಾರತ ಹಾಕಿ ತಂಡಕ್ಕೆ ಸಣ್ಣದೊಂದು ಆತಂಕ ಎದುರಾಗಿದೆ. ತಂಡದ ಐವರು ಆಟಗಾರರಲ್ಲಿ ಕೊರೊನಾ ಕಾಣಿಸಿಕೊಂಡಿದೆ.

Advertisement

ಇದರಲ್ಲಿ ತಂಡದ ಸ್ಟ್ರೈಕರ್‌ ಗುರ್ಜಂತ್‌ ಸಿಂಗ್‌, ಮುಖ್ಯ ತರಬೇತುದಾರ ಗ್ರಹಾಮ್‌ ರೀಡ್‌ ಸೇರಿದ್ದಾರೆ. ಬುಧವಾರ ಬೆಳಗ್ಗೆ ನಡೆಸಿದ ಆರ್‌ಟಿಪಿಸಿಆರ್‌ ಪರೀಕ್ಷೆ ವೇಳೆ ಐವರಲ್ಲಿ ಕೊರೊನಾದ ಸಣ್ಣ ಲಕ್ಷಣಗಳು ಕಾಣಿಸಿಕೊಂಡಿವೆ.

ಇಬ್ಬರು ಆಟಗಾರರು, ಬಾಕಿ ಮೂವರು ಸಹಾಯಕ ಸಿಬ್ಬಂದಿಯಲ್ಲಿ ಲಕ್ಷಣಗಳು ಪತ್ತೆಯಾಗಿದ್ದರಿಂದ, ಅವರನ್ನೆಲ್ಲ ಪ್ರತ್ಯೇಕವಾಗಿರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next